ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಯಶಸ್ವಿ

  • ಚಾಂಪಿಯನ್ ಆಫ್ ಚಾಂಪಿಯನ್” ವಿಜೇತರಿಗೆ ವಿಶೇಷ ಬೆಳ್ಳಿ ಟ್ರೋಫಿ ವಿತರಣೆ

*ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಯೋಗ ಒಂದು ಶಕ್ತಿಯುತ ಸಾಧನವಾಗಿದೆ; ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್
ಮೈಸೂರು: ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಪ್ರಥಮ ವರ್ಷದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಮೈಸೂರಿನ ಪ್ರತಿಷ್ಠಿತ ಶಾಲೆಯಾದ ಶ್ರೀಕಾಂತ್ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್ ಉದ್ಘಾಟಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದು ಯೋಗದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ. ಯೋಗವೆಂದರೆ ಕೇವಲ ವ್ಯಾಯಾಮವಲ್ಲ; ಅದು ದೈಹಿಕ ಹಾಗೂ ಮಾನಸಿಕ ಸಮತೋಲನ ನೀಡುವ ಜೀವನಶೈಲಿ. ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಯೋಗ ಒಂದು ಶಕ್ತಿಯುತ ಸಾಧನವಾಗಿದೆ'' ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು, ಮಕ್ಕಳು ಹಾಗೂ ಮಹಿಳೆಯರು ಯೋಗದತ್ತ ಆಕರ್ಷಿತರಾಗುತ್ತಿದ್ದಾರೆ. ನಿಯಮಿತ ಯೋಗಾಭ್ಯಾಸದಿಂದ ಆರೋಗ್ಯ ಸುಧಾರಣೆ, ಮನಶಾಂತಿ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಹಲವರು ತಮ್ಮ ವೈಯಕ್ತಿಕ ಸಮಸ್ಯೆಗಳು, ಆರೋಗ್ಯ ತೊಂದರೆಗಳು ಹಾಗೂ ಮಾನಸಿಕ ಒತ್ತಡಗಳಿಂದ ಹೊರಬಂದು ಹೊಸ ಜೀವನ ಕಟ್ಟಿಕೊಳ್ಳಲು ಯೋಗವೇ ಕಾರಣವಾಗಿದೆ ಎಂದು ತಿಳಿಸಿದರು. ಯೋಗ ಸೇವೆಯಲ್ಲಿ ತೊಡಗಿರುವ ಅನೇಕ ಗುರುಗಳು ಸಮಾಜದಲ್ಲಿ ಸಾವಿರಾರು ಮಂದಿಯ ಬದುಕಿನಲ್ಲಿ ಬದಲಾವಣೆ ತಂದಿದ್ದಾರೆ. ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಹಾಗೂ ಆರೋಗ್ಯಕರ ಅಭ್ಯಾಸ ಬೆಳೆಸುವಲ್ಲಿ ಯೋಗದ ಪಾತ್ರ ಅಪಾರವಾಗಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ತೊಡಗಿರುವ ಎಲ್ಲಾ ಯೋಗ ಗುರುಗಳು, ಸಂಘಟನೆಗಳು ಹಾಗೂ ಸಮಾಜ ಸೇವಕರಿಗೆ ವಿಶೇಷ ಅಭಿನಂದನೆಗಳು ಹಾಗೂ ಗೌರವಗಳು ಸಲ್ಲುತ್ತವೆ. ವಿಶೇಷವಾಗಿ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಫೌಂಡೇಶನ್ ಅಧ್ಯಕ್ಷ ಎಸ್. ಮಹೇಶ್ ಹಾಗೂ ತಂಡದವರ ಸೇವೆ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಉಚಿತ ನೇತ್ರ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ವಿವಿ ಕ್ರಿಯೇಷನ್ ಮುಖ್ಯಸ್ಥರಾದ ವಿಮಲ ವೀರೇಶ್ ಮಾತನಾಡಿ, ಪ್ರತಿನಿತ್ಯವೂ ಪ್ರತಿಯೊಬ್ಬರು ಯೋಗವನ್ನು ಅಭ್ಯಾಸ ಮಾಡಿಕೊಂಡರೆ, ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದು ಹೇಳಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮೇಲು ಕೋಟೆಯ ವಂಗೀಪುರ ನಂಬಿ ವ್ಮಠದ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮೀಕವಾಗಿ ಯೋಗ ಪ್ರಮುಖವಾದದ್ದು, ಪ್ರತಿನಿತ್ಯ ಯೋಗಾಸನಗಳನ್ನು ಮಾಡುವ್ಯದರಿಂದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ದೈಹಿಕ ಕ್ಷವ್ಮತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರಾದ ಮೋಹನ್ ಮಾತನಾಡಿ, ನಮ್ಮ ಹಿರಿಯರು ಯೋಗ್ಯ ರೂಢಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು, ಆರೋಗ್ಯಯುತ ಜೀವನವನ್ನು ನಡೆಸಿಕೊಂಡಿದ್ದರು. ಇಂದೀನ ಪೀಳಿಗೆಯವರನ್ನು ಅದನ್ನು ಅನುಸರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಯೋಗ ಈಗ ಇಡೀ ವಿಶ್ವದಲ್ಲಿ ಹೆಸರುವಾಸಿಯಾಗಿದೆ. ಭಾರತ ಯೋಗದಲ್ಲಿ ವಿಶ್ವಗುರುವಾಗಿದೆ ಎಂದರು. ಬಳ್ಳಾರಿ ಕೋಟೆಯ ಶ್ರೀಮೇಧಾ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸುಮ ವೈ, ಬಳ್ಳಾರಿಯ ಸಾಧನ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರಾದ ರೂಪ ಮುರುಳೀಧರ ಅವರು ಮಾತನಾಡಿದರು. ನಂತರ ಸಮಾರೋಪ ಸಮಾರಂಭದಲ್ಲಿ ಕೆ.ಆರ್ ಕ್ಷೇತ್ರ ಶಾಸಕ ಟಿ.ಎಸ್. ಶ್ರೀವತ್ಸ ಹಾಗೂ ್ಲ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸ್, ಅವರು ಯೋಗಾಸನ ಸ್ಪರ್ಧೆಯಚಾಂಪಿಯನ್ ಆಫ್ ಚಾಂಪಿಯನ್” ಪ್ರಶಸ್ತಿ ಪಡೆದ ವಿಜೇತರಿಗೆ ವಿಶೇಷ ಬೆಳ್ಳಿ ಟ್ರೋಫಿ ವಿತರಿಸಿದರು.
ವಿ.ವಿ. ಕ್ರಿಯೇಷನ್ ಸಂಸ್ಥಾಪಕಿ ವಿಮಲ ವಿರೇಶ್ ಅವರು ಮಹಿಳಾ ವಿಭಾಗದ ವಿಜೇತರಿಗೆ ಬೆಳ್ಳಿ ಟ್ರೋಫಿ ಪ್ರದಾನ ಮಾಡಿದರು. ವಿವಿಧ ವಯೋಮಾನದಲ್ಲಿ ವಿಜೇತರಾದವರಿಗೆ ಟ್ರೋಫಿಗಳೊಂದಿಗೆ ಬ್ಯಾಗ್ ಹಾಗೂ ಲಂಚ್ ಬಾಕ್ಸ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಂಡೇಶನ್ ಅಧ್ಯಕ್ಷ ಎಸ್.ಮಹೇಶ್, ಯೋಗ ಶಿಕ್ಷಕರಾದ ಶ್ರೀನಾಥ್, ರಮೇಶ್ ಶೆಟ್ಟಿ, ವೆಂಕಟೇಶಯ್ಯ, ಶಿಲ್ಪ, ಸಮಾಜ ಸೇವಕರಾದ ಡಾ. ರಘುರಾಂ ವಾಜಪೇಯಿ, ಎಂ.ಎನ್. ನವೀನ್ ಕುಮಾರ್, ದ್ಯಾವಪ್ಪ ನಾಯಕ, ಫೌಂಡೇಶನ್‌ನ ಗೌರವಾಧ್ಯಕ್ಷ ಮಹೇಶ್ ಯೋಗ, ಸ್ಪರ್ಧೆಯ ಮುಖ್ಯ ತೀರ್ಪುಗಾರರಾ ದೇವರಾಜ್, ತೀರ್ಪುಗಾರರಾದ ರವಣೀಕರ್, ರವಿ, ಪಶುಪತಿಯವರು ಫಲಿತಾಂಶ ಘೋಷಣೆ ಮಾಡಿದರು. ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು.
ವಿಶೇಷವಾಗಿ ಸ್ಪರ್ಧೆಯಲ್ಲಿ “ಚಾಂಪಿಯನ್ ಆಫ್ ಚಾಂಪಿಯನ್” ಟ್ರೋಫಿ ಗೆದ್ದ ರಜತ್ ಗಿರಿ ಹಾಗೂ ಅನುಷಾ ಅವರಿಗೆ ಸುವರ್ಣ ಬೆಳಕು ಫೌಂಡೇಷನ್ ಲೋಗೋ ಹೊಂದಿರುವ ವಿಶೇಷ ಟ್ರೋಫಿಯನ್ನು ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *