ರೋಟರಿ ಸೇವಾ ಕಾರ್ಯಗಳನ್ನು ಸಾರ್ಥಕ ಪಡಿಸಿಕೊಳ್ಳಿ : ಡಾ.ನಾಗಾರ್ಜುನ್

  • ರೋಟರಿ ಸಂಸ್ಥೆಯಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಯಶ್ವಸಿ,

ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಭಾನುವಾರ ಯಶ್ವಸಿಯಾಗಿ ನಡೆಯಿತು.
ನಗರದ ರೋಟರಿ ಭವನದಲ್ಲಿ ನಡೆದ ಉಚಿತ ಕೈ-ಕಾಲು ಜೋಡಣಾ ಶಿಬಿರದಲ್ಲಿ 118 ಮಂದಿ ವಿಶೇಷ ಚೇತನರಿಂದ ಕೃತಕ ಕೈ-ಕಾಲು ಅಳತೆ ತೆಗೆದುಕೊಳ್ಳಲಾಯಿತು.
ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ಡಾ .ನಾಗಾರ್ಜುನ ಮಾತನಾಡಿ, ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿಚಂದ್ರು ಅವರ ಆಶಯದಂತೆ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ನಡೆಯುತ್ತಿದೆ. ಕೈ-ಕಾಲು ಕಳೆದುಕೊಂಡ ಅನೇಕರು ಮನೆಯಲ್ಲಿ ಸುಮ್ಮನೆ ಕುಳಿತಿರುತ್ತಾರೆ. ಅವರಿಗೆ ಸಹಾಯ ಮಾಡಿದರೆ ಅವರ ಜೀವನ ರೂಪಿಸಿಕೊಳ್ಳಲು ಇಂತಹ ತಿಬಿರ ಸಹಕಾರಿಯಾಗುತ್ತದೆ. ಇದನ್ನು ಮನಗಂಡು ಇಂತಹ ಶಿಬಿರವನ್ನು ಅಯೋಜಿಸಲಾಗಿದೆ. ಇದಕ್ಕೆ ಸುಮಾರು 10 ರಿಂದ 15 ಲಕ್ಷ ವೆಚ್ಚವಾಗುತ್ತಿದೆ. ನಿಮಗೆ ಕೊಡುತ್ತಿರುವ ಕೃತಕ ಕೈ-ಕಾಲುಗಳನ್ನು ನೀವು ಸರಿಯಾಗಿ ಸದ್ಬಳಕೆ ಮಾಡಿಕೊಂಡರೆ ರೋಟರಿ ಸಂಸ್ಥೆಯ ಇಂತಹ ಸೇವಾ ಕಾರ್ಯ ಸಾರ್ಥಕವಾಗುತ್ತದೆ ಎಂದರು.
ರೋಟರಿ ಸಂಸ್ಥಾಪಕ ಸದಸ್ಯ ಜಿ.ಆರ್.ಅಶ್ವಥ್ ನಾರಾಯಣ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಬಡವರಿಗೆ ಸಹಕಾರಿಯಾಗಿರುವ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ವೈದ್ಯರ ಮಾರ್ಗದರ್ಶನ ಪಾಲನೆ ಮಾಡಿದರೆ ಈ ಶಿಬಿರದಲ್ಲಿ ನೀಡುವ ಕೃತಕ ಕೈ-ಕಾಲು ಉಪಯೋಗಕ್ಕೆ ಬರುತ್ತದೆ ಎಂದರು.
ಸಹಾಯಕ ಗೌರ್ನರ್ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದಲ್ಲಿ ನೊಂದವರು, ದುರ್ಬಲರ ಪರವಾಗಿ ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದ್ದು, ಸಾರ್ಥಕ ಕೆಲಸಗಳನ್ನು ಮಾಡುವ ಮೂಲಕ ದಾಖಲೆ ನಿರ್ಮಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆಯು ವಿವಿಧ ಸೇವಾ ಕಾರ್ಯಗಳನ್ನು
ಮಾಡುತ್ತಾ ಬಂದಿದ್ದು, ಪ್ರತಿ ತಿಂಗಳ ಮೊದಲ ಭಾನುವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕಡಿಮೆ ವೆಚ್ಚದಲ್ಲಿ ಡಯಾಲಿಸಸ್ ಸೇರಿದಂತೆ ಇನ್ನಿತರ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ನನ್ನ ಒಂದು ವರ್ಷದ ಅವಧಿಯಲ್ಲಿ 300ನೇ ಕಾರ್ಯಕ್ರಮವಾಗಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಆಯೋಜಿಸಲಾಗಿದೆ. ಇದೊಂದು ಸಾರ್ಥಕ ಕೆಲಸವಾಗಿದ್ದು, ವಿಶೇಷಚೇತನರಿಗೆ ಕೃತಕ ಕೈ-ಕಾಲು ಜೋಡಿಸಿದರೆ ಅವರಲ್ಲಿಯೂ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು.
ಶಿಬಿರದಲ್ಲಿ ರೋಟರಿ ಸಂಸ್ಥಾಪಕ ಸದಸ್ಯ ಸಿ.ವಿ.ಶ್ರೀನಿವಾಸಶೆಟ್ಟಿ, ಡಾ.ಸುಂದರೇಶ್, ಕಾಳನಹುಂಡಿ ಗುರುಸ್ವಾಮಿ, ಶಿಕ್ಷಕ ಮಹದೇವಸ್ವಾಮಿ, ಚಂದ್ರಪ್ರಭಜೈನ್, ಸುರೇಶ್, ಮೋಹನ್‌, ಅಂಕಶೆಟ್ಟಿ, ಅಬ್ದುಲ್‌ಅಜೀಜ್ ದೀನಾ, ನೇಮಿರಾಜ್, ರತ್ನಮ್ಮ, ಪ್ರಭಾಕರ್, ಪ್ರಕಾಶ್, ರೂಪೇಶ್, ಸ್ವಾಗತ ರಮೇಶ್, ಸುಭಾಷ್, ಎಸ್ ಆರ್ ಎಸ್ ಶ್ರೀನಿವಾಸ ಇತರರ ಭಾಗವಹಿಸಿದ್ದರು.  

Leave a Reply

Your email address will not be published. Required fields are marked *