ವಿದ್ಯಾರ್ಥಿಗಳು ಹೋರಾಟದ ಮನೋಭಾವನೆ ಬೆಳಸಿಕೊಳ್ಳಿ: ಹೆಗ್ಗವಾಡಿಪುರ ಮಹೇಶ ಕುಮಾರ್

ಚಾಮರಾಜನಗರ : ತಾಲೂಕಿನ ಹೆಗ್ಗವಾಡಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
    ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು, ವಿಶ್ವ ರೈತ ಸಂಘದ ಸದಸ್ಯ ಮಹೇಶ್ ಕುಮಾರ್‌‌ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರ
ಆದರ್ಶಗಳನ್ನು  ಅಳವಡಿಸಿಕೊಂಡು ಚೆನ್ನಾಗಿ ಓದಿ ದೇಶಪ್ರೇಮ ಬೆಳಸಿಕೊಂಡ ಉತ್ತಮಪ್ರಜೆಯಾಗಬೇಕು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಮಹನೀಯರನ್ನು ಸ್ಮರಿಸುವುದು ನೆಮ್ಮೆಲ್ಲರ ಆದ್ಯ  ಕರ್ತವ್ಯವಾಗಿದೆ.  ವಿದ್ಯಾರ್ಥಿಗಳು ಹೋರಾಟದ ಮನೋಭಾವನೆ ಬೆಳಸಿಕೊಳ್ಳಬೇಕು ಎಂದರು.
  ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ
ಸದಸ್ಯ ಗೀತಾ, ಮುಖ್ಯಶಿಕ್ಷಕಿ  ಪೂರ್ಣಿಮಾ,  ಶಿಕ್ಷಕರಾದ ಸವಿತಾ, ಶ್ವೇತಾ, ಶ್ರೀಕಾಂತ್ ಶರ್ಮಾ, ಎಸ್. ಉಮಾ, ಶೈಲಜಾ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *