‘ಸುಮಾ’ ಚಲನಚಿತ್ರ ಅ.2 ರಂದು ತೆರೆಗೆ

ಬೆಂಗಳೂರು: ‘ಓಂ ಸಾಯಿ ಸಿನೆಮಾಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಮಹಿಳಾ ಪ್ರಧಾನ ಕಥಾ ಹಂದರದ ‘ಸುಮಾ’ ಕನ್ನಡ ಚಲನಚಿತ್ರ ಅಕ್ಟೋಬರ್ 2 ರಂದು ತೆರೆಗೆ ಬರುತ್ತಿದೆ.

ಸಾಮಾನ್ಯವಾಗಿ ಬಹುತೇಕ ಸಿನಿಮಾಗಳ ಟ್ರೇಲರ್ ಅನ್ನು ಸೆಲೆಬ್ರಿಟಿಗಳು ಅಥವಾ ಗಣ್ಯರ ಕೈಯಲ್ಲಿ ಬಿಡುಗಡೆ ಮಾಡಿಸುವುದು ಚಿತ್ರರಂಗದಲ್ಲಿರುವ ವಾಡಿಕೆ. ಆದರೆ ಇದಕ್ಕೆ ಅಪವಾದ ಎಂಬಂತೆ ‘ಸುಮಾ’ ಚಿತ್ರತಂಡ ಚಿತ್ರದ ಟ್ರೇಲರ್ ಅನ್ನು ನಿರಾಶ್ರಿತರು ಮತ್ತು ಬಡವರ ಕೈಯಲ್ಲಿ ಬಿಡುಗಡೆ ಮಾಡಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಹಿಂದೆ ಕನ್ನಡದಲ್ಲಿ ‘ಶ್ರೀಕಬ್ಬಾಳಮ್ಮನ ಮಹಿಮೆ’, ‘ಮನೆ’, ‘ಬ್ಯಾಂಕ್ ಲೋನ್’, ‘ಸುಳಿ’ ಸೇರಿದಂತೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ರಶ್ಮಿ
ಎಸ್.(ಸಾಯಿರಶ್ಮಿ) ‘ಸುಮಾ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

‘ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ‘ಸುಮಾ’ ಅಂದ್ರೆ ಸಂಪೂರ್ಣ ಮೊಗ್ಗು ಅಲ್ಲದ, ಸಂಪೂರ್ಣ ಅರಳಿಯೂ
ಇರದಂತಹ ಹೂವು. ಮಂಡ್ಯ, ಮದ್ದೂರು, ಆಲಭುಜನಹಳ್ಳಿ, ಕೆ. ಎಂ ದೊಡ್ಡಿ, ನಗರಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಅಕ್ಟೋಬರ್ 2 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಪ್ರೇಕ್ಷಕರು ‘ಸುಮಾ’ ನೋಡಿ ಪ್ರೋತ್ಸಾಹಿಸಬೇಕೆಂದು ನಿರ್ದೇಶಕಿ ರಶ್ಮಿ.ಎಸ್ ಹೇಳಿದರು.

ಮೈಸೂರು ಮೂಲದ ಪ್ರದೀಪ್ ಗೌಡ ನಾಯಕರಾಗಿದ್ದು ಉಳಿದಂತೆ ಬಾಲರಾಜವಾಡಿ, ಜೋ ಸೈಮನ್, ವಿಜಯಲಕ್ಷ್ಮಿ ಉಪಾಧ್ಯಾಯ, ಮುರಳೀಧರ್ ಡಿ. ಆರ್, ಕಾವ್ಯ ಪ್ರಕಾಶ್, ಪವಿತ್ರ, ಅವಿನಾಶ್ ಗಂಜಿಹಾಳ, ಕುಮಾರಿ ಭೈರವಿ, ಸಿದ್ದು ಮಂಡ್ಯ, ಶಿವಕುಮಾರ್ ಆರಾಧ್ಯ, ಹರಿಹರನ್ಬಿ . ಪಿ, ವಿಶೇಷ ಪಾತ್ರದಲ್ಲಿ ಡಾ. ವಿ ನಾಗೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ.

ದೇವೂ ಛಾಯಾಗ್ರಹಣ, ವೇದಾಂತ್ ಅತಿಶಯ್ ಜೈನ್ ಸಂಗೀತ, ಸಾಹಿತ್ಯ ಪ್ರದೀಪಗೌಡ, ಸತೀಶ ಜೋಶಿ, ಮುತ್ತುರಾಜ್ ಟಿ ಸಂಕಲನ, ಡಿ.ಐ ಗಗನ್ ಆರ್, ಕಾರ್ತಿಕ್ ಸುಧನ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾಸಂಪರ್ಕ, ಸಹ ನಿರ್ಮಾಪಕರು ರಂಗಸ್ವಾಮಿ ಟಿ(ರವಿಗೌಡ), ನಿರ್ಮಾಣ ನಿರ್ವಹಣೆ ಹರಿಹರನ್, ಬಿ.ಪಿ, ಪ್ರಚಾರಕಲೆ ತುಳಸಿರಾಮ್ ರಾಜು ಚಿತ್ರಕ್ಕಿದೆ. **
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

Leave a Reply

Your email address will not be published. Required fields are marked *