- 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ವಾರ್ಷಿಕ ಕಾರ್ಯಯೋಜನೆ ಕುರಿತು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಿದ್ಧತಾ ಸಭೆ ಹಾಗೂ ಒಂದು ದಿನದ ಕಾರ್ಯಾಗಾರ
ಚಾಮರಾಜನಗರ : ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವ ಸವಾಲು ನಮ್ಮ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಪನ್ಮೂಲ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ, ಇವರ ಸಹಯೋಗದಲ್ಲಿ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,
ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ವಾರ್ಷಿಕ ಕಾರ್ಯಯೋಜನೆ ಕುರಿತು
ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಿದ್ಧತಾ ಸಭೆ ಹಾಗೂ ದಿನದ ಕಾರ್ಯಾಗಾರವನ್ನು లాడ్స్ట్ఫాటిసి ಒಂದು ಮಾತನಾಡಿದರು.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವುದು ಪ್ರತಿಯೊಬ್ಬರ ಮೇಲಿದೆ. ಕ್ರಿಯಾಶೀಲತೆಯಿಂದ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಆ ನಿಟ್ಟಿನಲ್ಲಿ ಈ ಸಭೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ವಾರ್ಷಿಕ ಕಾರ್ಯಯೋಜನೆ, ಕಾರ್ಯಕ್ರಮಗಳಿಗೆ ಮುನ್ನುಡಿ ಆಗುತ್ತದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರು ಸಂಘದ ಪದಾಧಿಕಾರಿಗಳು ಇಲಾಖೆದೊಂದಿಗೆ ಕೈಜೋಡಿಸಿ ಗುಣಾತ್ಮಕ ಶಿಕ್ಷಣಕ್ಕೆ ಸಹಕಾರ ಕೊಡುತ್ತಾರೆ ನಾವೆಲ್ಲರೂ ಒಟ್ಟಾಗಿ… ಸೇರಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವುದು ನಮ್ಮೆಲ್ಲರ ಮೇಲಿದೆ. ಅ… ಕೆಲಸವನ್ನು ಯಶ್ವಸಿಯಾಗಿ ಮಾಡೋಣ ಎಂದರು.
ಎಲ್‌ಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಅದಕ್ಕಿಂತ ಹಿಂದೆ ಹೋಗಿ 2 ವರ್ಷಗಳ ಪೂರ್ವ ಪ್ರಾಥಮಿಕ ಶಿಕ್ಷಣ ಕೊಡುವ ಪ್ರಯತ್ನ ಮಾಡಲಾಗಿದೆ. ಅಲ್ಲಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಆಗಬೇಕಿದೆ ಎಂದರು.
ಜೂ. 1ರಂದು ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಹಬ್ಬದ . ಮಾದರಿಯಲ್ಲಿ ಪ್ರತಿಶಾಲೆಯಲ್ಲೂ ಆಚರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಆರ್ ಸಿ ರಾಜೀವ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಾದಪ್ಪ , ಉಪಾಧ್ಯಕ್ಷೆ ಭವಾನಿದೇವಿ, ಚಾಮರಾಜನಗರ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುಧಾ, ತಾಲೂಕು ಪದಾಧಿಕಾರಿಗಳಾದ ಭರತ್ ಭೂಷಣ, ಕೃಷ್ಣಮೂರ್ತಿ, ಸಿ ಎಂ.ಸುಶೀಲ, ಮಹಮದ್ ಸಮೀವುಲ್ಲಾ , ಧನಂಜಯ್, ಲತಾ, ಶ್ವೇತ, ನಿರ್ದೇಶಕ ರಾದ ಆನಂದ್ ಕುಮಾರ್, ಮಲ್ಲಿಕಾರ್ಜುನ, ನಟರಾಜು, ತಾಲೂಕಿನ ಸಿಆರ್ ಪಿ, ಬಿ ಆರ್ ಪಿ ,ಮುಖ್ಯಶಿಕ್ಷಕರು ಭಾಗವಹಿಸಿದ್ದರು.