ಚಾ.ನಗರ ಎಪಿಎಂಸಿಯಲ್ಲಿ ‘ಸಾವಯವ ಉತ್ಪನ್ನಗಳ ಉತ್ಪಾದನೆ, ಮಾರಾಟ ವ್ಯವಸ್ಥೆ ಕುರಿತು ತರಬೇತಿ’

ಚಾಮರಾಜನಗರ: ನಗರದ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಮೈಸೂರು ಸಹಯೋಗದಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳ ಮತ್ತು ಸಾವಯವ ಉತ್ಪನ್ನಗಳ ಉತ್ಪಾದನೆ, ಮಾರಾಟ ವ್ಯವಸ್ಥೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ತರಬೇತಿಯಲ್ಲಿ ಪಾಲ್ಗೊಂಡ ೪೦ಕ್ಕಿಂತ ಹೆಚ್ಚಿನ ರೈತರಿಗೆ ನುರಿತ ತಜ್ಞರು ಉಪನ್ಯಾಸ ನೀಡಿದರು.

ಎಪಿಎಂಸಿ ಸಮಿತಿ ಅಧ್ಯಕ್ಷ ಎಂ.ಬಿ. ಗುರುಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯರಾದ ವಾಣಿಶ್ರೀ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಸೋಮಯ್ಯ. ವ್ಯವಸ್ಥಾಪಕ ಸೋಮಣ್ಣ, ಕಾರ್ಯದರ್ಶಿ ಬಿ. ಜಗದೀಶ್ ರೈತಮುಖಂಡರಾದ ಹೊನ್ನೂರು ಪ್ರಕಾಶ್, ಸಾವಯವ ಕೃಷಿಕ ಶಿವಕುಮಾರಸ್ವಾಮಿ, ಸಹಾಯಕ ತೋಟಗಾರಿಕೆ ಅಧಿಕಾರಿ ಜಯಶಂಕರ್, ಎಪಿಎಂಸಿ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *