ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ:ಪಿ.ಮರಿಸ್ವಾಮಿ

  • ಶಿಕ್ಷಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾಹಿತಿ

ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ಅಜ್ಞಾನದ ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕು ಮೂಡಿಸುವ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ ಎಂದು ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.
ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿ ಕಾರಿಗಳ ಕಚೇರಿ ವತಿಯಿಂದ ನಡೆದ ಶಿಕ್ಷಕ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಭಾರತ ಎರಡನೇ ರಾಷ್ಟ್ರಪತಿಯಾಗಿ, ಪ್ರಸಿದ್ಧ ತತ್ವಜ್ಞಾನಿ ವಹಾನ್‌ ಶಿಕ್ಷಣ ತಜ್ಞರಾಗಿದ್ದರು. ಅವರ ಜನ್ಮದಿನ ಹೆಪ್ಟೆಂಬರ್ 5 ರಂದು ದೇಶದಲ್ಲಿ ಶಿಕ್ಷಕರ ದಿನಚರಣೆಯನ್ನು ಆಚರಿಸಲಾಗುತ್ತದೆ. ಸಾವಿತ್ರಿಬಾಯಿಸುಲೆ ಅವರು ದೇಶಮೊದಲ ಮಹಿಳಾ ಶಿಕ್ಷಕಿಯಾಗಿ 18ಕ್ಕೂ ಹೆಚ್ಚು ಶಾಲೆಗಳನ್ನು ಸ್ಥಾಪಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು.
ದೇಶ ಒಬ್ಬ ಉತ್ತಮ ಪ್ರಜೆಯನ್ನುನಿರ್ಮಾಣ ಮಾಡುವವರು ಶಿಕ್ಷಕರು. ದೇಶವು ಪ್ರಗತಿಯಲ್ಲಿ ಸಾಗಬೇಕಾದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಬೇಕಾದರೆ ಶಿಕ್ಷಕರ ಪರಿಶ್ರಮವೇ ಕಾರಣವಾಗಿದೆ. ಶಿಕ್ಷಣಕ್ಕೆ ಒತ್ತು ಕೊಡುವ ದೇಶವು ಉತ್ತಮ ಸ್ಥಿತಿಯಲ್ಲಿರುತ್ತದೆ. ಅಂತಹ ಒಬ್ಬ ಶಿಕ್ಷಕ ಮಕ್ಕಳ ಭವಿಷ್ಯಕ್ಕೆ ಬೆಳಕು ಚೆಲ್ಲಿ ಸುಂದರನಾಡು ಕಟ್ಟುವ ಶಿಲ್ಪಿಗಳೇ ಶಿಕ್ಷಕರಾಗಿದ್ದಾರೆ. ಎಲ್ಲರಿಗೂ ಈ ಮೂಲಕ ಶಿಕ್ಷಕರ ದಿನಾಚರಣೆ ಶುಭಾಶಯಗಳನ್ನು ಕೋರಿದರು.
ಶಿಕ್ಷಕ ವೃತ್ತಿ  ತುಂಬಾ ಸವಾಲಿನ ಕೆಲಸ:ಶಾಲಾ ಇಲಾಖೆಯ ಉಪನಿರ್ದೇಶಕ ಚಂದ್ರಪಾಟೀಲ್‌ ಮಾತನಾಡಿ, ಶಿಕ್ಷಕ ವೃತ್ತಿ ಒಂದು ವೃತ್ತಿನು ಅಲ್ಲ ಕೆಲಸವು ಅಲ್ಲ. ಅದೊಂದು ಸ್ಥಾನ ಅಷ್ಟೆ. ಅದನ್ನು ಸಮಾಜ ನಮಗೆ ಕೊಟ್ಟಿದೆ. ಅ ಸ್ಥಾನಕ್ಕೆ ಸರಿಯಾದ ರೀತಿಯಲ್ಲಿ ಬೆಲೆಯನ್ನು ಕೊಡಬೇಕಾದರೆ ಆದರ್ಶ ಶಿಕ್ಷಕರಾಗಿ ಕೆಲಸ ‌ ಮಾಡಬೇಕು. ನೀವೆಲ್ಲರೂ ಒಳ್ಳೆಯ ಕೆಲಸ ಮಾಡುತಿದ್ದೀರಿ. ಆದರೆ ಪ್ರಸ್ತುತ ದಿನಗಳಲ್ಲಿ ಶಿಕ್ಷಕರ ವೃತ್ತಿ ಸುಲಭವಲ್ಲ ತುಂಬಾ ಸವಾಲಿನ ಕೆಲಸ ಆಗಿದೆ ಎಂದರು.
ಚೂಡಾ ಮಾಜಿ ಅಧ್ಯಕ್ಷ ಮಹಮ್ಮದ್ ಅಸ್ಕ‌ರ್ ಮುನ್ನಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ :  ಚಿನ್ನಸ್ವಾಮಿ. ಎಸ್. ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪಾಥಮಿಕ ಶಾಲೆ ಹುಲ್ಲೇಪುರ ಚಾಮರಾಜನಗರ ತಾಲೂಕು, ನಾಗಮಲ್ಲೇಶ್ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಹಳ್ಳಿಮಾಳ ಕೊಳ್ಳೇಗಾಲ ತಾಲ್ಲೂಕು, ಮುರುಗ. ಜಿ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯರಂಬಾಡಿ, ಹನೂರು ತಾಲ್ಲೂಕು, ಸಿದ್ದರಾಜು ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮದ್ದೂರು, ಗುಂಡ್ಲುಪೇಟೆ ತಾಲ್ಲೂಕು, ವಿಜಯಲಕ್ಷ್ಮಿ ಸಹ ಶಿಕ್ಷಕರು ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಗುಂಬಳ್ಳಿ, ಯಳಂದೂರು ತಾಲ್ಲೂಕು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಸಾದ್ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪಾಥಮಿಕ ಶಾಲೆ ಉಡಿಗಾಲ ಚಾಮರಾಜನಗರ ತಾಲ್ಲೂಕು, ಮಹದೇವ ಎನ್. ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಣಗಳ್ಳಿ, ಕೊಳ್ಳೇಗಾಲ ತಾಲ್ಲೂಕು ರಂಗಸ್ವಾಮಿ, ಎನ್. ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೊರೆಸಾಣೆ ಹನೂರು ತಾಲ್ಲೂಕು, ನಂದೀಶ್, ಜಿ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಶಿಪುರ ಗುಂಡ್ಲುಪೇಟೆ ತಾಲ್ಲೂಕು, ಜಯಪ್ರಕಾಶ್.ಪಿ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಿಯೂರು-1 ಯಳಂದೂರು ತಾಲ್ಲೂಕು,
ಪ್ರೌಢಶಾಲಾ ವಿಭಾಗದಲ್ಲಿ ಗುರುಸಿದ್ದಾಚಾರಿ. ಜಿ.ಕೆ ಸಹ ಶಿಕ್ಷಕರು ಜಿ.ಎಸ್ ಎಸ್. ಪ್ರೌಢಶಾಲೆ ಉಮ್ಮತ್ತೂರು ಚಾಮರಾಜನಗರ ತಾಲ್ಲೂಕು, ಪ್ರದೀಪ್ ಕುಮಾರ. ಎಸ್, ಆದರ್ಶ ವಿದ್ಯಾಲಯ ಮುಡಿಗುಂಡ, ಕೊಳ್ಳೇಗಾಲ ತಾಲೂಕು, ಮಲ್ಲೇಶ.ಕೆ.ವಿ. ಸರ್ಕಾರಿ ಪ್ರೌಢಶಾಲೆ ಶಾಗ್ಯ, ಹನೂರು ತಾಲೂಕು. ಜೆ.ಎಸ್. ಹರೀಶ್ ಕುಮಾರ್, ಸರ್ಕಾರಿ ಪ್ರೌಢಶಾಲೆ, ಭೀಮನಬೀಡು, ಗುಂಡ್ಲುಪೇಟೆ ತಾಲೂಕು, ಲಕ್ಷ್ಮಿ. ಎಲ್.ಎನ್, ಸರ್ಕಾರಿ ಪ್ರೌಢಶಾಲೆ, ಗುಂಬಳ್ಳಿ, ಯಳಂದೂರು ತಾಲ್ಲೂಕು ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ. ಕ್ಷೇತ್ರ ಶಿಕ್ಷಣಾಧಿ ಕಾರಿ ಹನುಮಶೆಟ್ಟಿ, ಬಿಆರ್ ಸಿ ರಾಜೀವ್,
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷೆ ಭವಾನಿದೇವಿ, ನೌಕರ ಸಂಘದ ಖಜಾಂಚಿ ಶಿವಕುಮಾರಯ್ಯ, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಸುಧಾ, ಉಪಾಧ್ಯಕ್ಷ ಹೆಚ್.ಎಂ. ಧನಂಜಯ್, ಸಿ.ಎಂ. ಸುಶೀಲ
ಖಜಾಂಚಿ ಸಮೀವುಲ್ಲಾ, ಸಂಘಟನಾ ಕಾರ್ಯದರ್ಶಿ ಶ್ವೇತ, ಬಿ.ಎಸ್.ಲತಾ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಕಾರ್ಯದರ್ಶಿ ಕಿರಣ್‌ ರಾಜು, ಕಾರ್ಯದರ್ಶಿ ಶಂಕರ್, ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಎಂ.ಡಿ.ಮಹದೇವಯ್ಯ, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಯ್ಯ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖ‌ರ್, ನಿರ್ದೇಶಕ ಮಲ್ಲಿಕಾರ್ಜುನ, ಆನಂದ್. ನಟರಾಜು, ಮಹೇಶ್, ಸೈಮನ್‌, ದೊಡ್ಡರಾಜು, ನಂಜುಂಡಸ್ವಾಮಿ, ಮುರುಗೇಶ್, ಶಬಾನಅಂಜುಂ, ಶಾಂತರಾಜು ಹಾಗೂ ಶಿಕ್ಷಕರ ಸಂಘಗಳ ಅಧ್ಯಕ್ಷ ರು, ಪದಾಧಿಕಾರಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *