ಚಾಮರಾಜನಗರ: ಶ್ರಾವಣಮಾಸದ 4ನೇ ಶನಿವಾರ ಪ್ರಯುಕ್ತ ನಗರದ ಚಿಕ್ಕಂಗಡಿಬೀದಿಯ ನೃಪತುಂಗ ವೃತ್ತದಲ್ಲಿರುವ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಕ್ತಮಂಡಳಿ ವತಿಯಿಂದ ವಿಶೇಷಪೂಜಾ ಕಾರ್ಯಕ್ರಮ ನಡೆದು ಸಾರ್ವಜನಿಕರಿಗೆ ಅನ್ನಸಂತಪಣೆ ನಡೆಯಿತು.

ದೇವಸ್ಥಾನವನ್ನು ಹಾಗೂ ಶನೇಶ್ವರಸ್ವಾಮಿ ಭಾವಚಿತ್ರವನ್ನು ನಾನಾ ಹೂವಿಗಳಿಂದ ಅಲಂಕರಿಸಿ.. ಮಹಾಮಂಗಳಾರತಿ ನೆರವೇರಿಸಿ ಅನ್ನಸಂತರ್ಪಣೆ ಗೆ ಮಧ್ಯಾಹ್ನ ಚಾಲನೆ ನೀಡಲಾಯಿತು. ಭಕ್ತರು ಸರತಿಸಾಲಿನಲ್ಲಿ ನಿಂತು ದೇವರದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಅರಳಿಕಟ್ಟೆ, ಮಲ್ಲಾರಾಧ್ಯ ತಂಡದವರಿಂದ ಶ್ರೀಶನೇಶ್ವರಸ್ವಾಮಿಯ ಹರಿಕಥೆ ಏರ್ಪಡಿಸಲಾಗಿತ್ತು.

ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉದ್ಯಮಿ, ಯೂತ್ ಐಕಾನ್ ಶ್ರೀನಿಧಿಕುದರ್ ಮಾತನಾಡಿ, ಕಳೆದ 15 ವರ್ಷಗಳಿಂದ ಶ್ರಾವಣಮಾಸದ 4ನೇ ಶನಿವಾರ ಪ್ರಯುಕ್ತ ನಗರದ ಚಿಕ್ಕಂಗಡಿಬೀದಿಯ ನೃಪತುಂಗ ವೃತ್ತದಲ್ಲಿರುವ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಕ್ತಮಂಡಳಿ ವತಿಯಿಂದ ವಿಶೇಷಪೂಜಾ ಕಾರ್ಯಕ್ರಮ ನಡೆದು ಸಾರ್ವಜನಿಕರಿಗೆ ಅನ್ನಸಂತಪಣೆ ನಡೆದುಕೊಂಡು ಬರುತ್ತಿದೆ ಎಂದರು.
ನಮ್ಮ ತಂದೆ ಮರಣ್ಣ ಅವರು ಸಣ್ಣದಾಗಿ ಆರಂಭಿದ ಶನೇಶ್ವರಸ್ವಾಮಿಯ ಪೂಜಾ ಕಾರ್ಯಕ್ರಮ.. ‘ಅನ್ನಸಂತರ್ಪಣೆ ಕಾರ್ಯಕ್ರಮ ಇಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಇಂದು 8ರಿಂದ 10 ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದ್ದು, ಶನೇಶ್ವರಸ್ವಾಮಿ ಉತ್ತಮ ಮಳೆ. ‘ಬೆಳೆಯಾಗಿಸಿ ಸರ್ವರಿಗೂ ಸಕಲ ಸಮೃದ್ಧಿ ಕೊಡಲಿ ಎಂದು ಆಶಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಮುಖಂಡ ಮಹೇಶ್ ಕುದರ್, ಮಂಟೇಸ್ವಾಮಿ, ಹೂವಿನ ಕೃಷ್ಣ ಭಕ್ತ ಭಾಗವಹಿಸಿದ್ದರು.
