
- 250 ಮಾದಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಡಾ.ಬಾಬುಜಗಜೀವನ್ ರಾಮ್ ಸಂಘಟನೆಗಳ ಒಕ್ಕೂಟ ಉದ್ಘಾಟನೆ
ಚಾಮರಾಜನಗರ : ಯಾವ ಸರ್ಕಾರವು ಒಳ ಮೀಸಲಾತಿಗೆ ಹೊಸ ತಿದ್ದುಪಡಿ, ಹೊಸ ಕಾನೂನು ಜಾರಿಮಾಡಲಿಲ್ಲ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ. ಜಿಲ್ಲಾ ಡಾ.ಬಾಬುಜಗಜೀವನ್ ರಾಮ್ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆದ 2026-27ನೇ ಸಾಲಿನ ಮಾದಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಜಿಲ್ಲಾ ಬಾಬುಜಗಜೀವನ್‌ರಾಮ್ ಸಂಘಟನೆಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಿಂದ ಇಡೀ ದೇಶದಲಿ ಕ್ರಾಂತಿಯಾಗಿಬಿಟ್ಟಿದೆ. ಯಾವ ಕ್ರಾಂತಿಯನ್ನು ಈ ದೇಶದ ಯಾವ ನಾಗರೀಕ ಸರ್ಕಾರವು ಮಾಡಲಿಲ್ಲ. ಯಾವ ಸಂವಿಧಾನ ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿದ್ದನ್ನ
ಜಾರಿ ಮಾಡಲಿಲ್ಲ. ಯಾವ ಸರ್ಕಾರವು ಒಳ ಮೀಸಲಾತಿಗೆ ಹೊಸ ತಿದ್ದುಪಡಿ, ಹೊಸ ಕಾನೂನು ಜಾರಿ ಮಾಡಲಿಲ್ಲ…ಈ ದೇಶದ ಸಂವಿಧಾನ ದೇಶದ ಯಾವುದೇ ಶೋಷಿತ ವ್ಯಕ್ತಿಗೆ, ಯಾವುದರಿಂದ ವಂಚಿತನಾದ ಅ ವಂಚಿತನಿಗೆ ಈ ದೇಶ, ಈ ರಾಜ್ಯದ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಇದೆ
ಮುಖ್ಯವಾಹಿನಿ ಅವಶ್ಯ ಯೋಜನೆಗಳ ಕೊಡುವ ಜವಾಬ್ದಾರಿ. ಅದು ಯೋಜನೆ ಇರಬಹುದು, ಒಳಮೀಸಲಾತಿ ಇರಬಹದು. ಕೊಡಬೇಕು ಇಲ್ಲದಿದ್ದರೆ ಕೆಳಗಿದು ಹೋಗಯ್ಯ ಅಂಥಾ 1950ರಲ್ಲಿ ಇತ್ತು ಎಂದರು.
ನಾವೆಲ್ಲರೂ ಬೆನ್ನು ತಟ್ಟಿಕೊಂಡು ಒಳ ಮೀಸಲಾತಿ ಕೊಟ್ಟುಬಿಟ್ರು ಎಂದು. ಈ ದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ಶೋಷಿತನಿಗೆ ಗ್ರಾ.ಪಂ.ಜಿ.ಪಂ., ತಾ.ಪಂ, ಎಂಎಲ್‌ಎಗೆ, ಒಳ ಮೀಸಲಾತಿ ಕೊಡಬೇಕು ಎಂದು ಕಾನೂನು ಇದೆ ಆದರೆ ಯಾವ ಲೋಕಸಭಾ ಸದಸ್ಯನೂ. ಯಾವ ಮುಖ್ಯಮಂತ್ರಿಯೂ, ಯಾವ ಸಂಘಟನೆಯೂ ಮಾಧ್ಯಮ ಮುಂದೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಯಾವನೂ ಪದವಿ ಸರ್ಟಿಫೀಕಟ್‌ಗೆ ಉದ್ಯೋಗ ಕೊಡುವುದಿಲ್ಲ. ನಿಮ್ಮ ಜ್ಞಾನದ ಮೇಲೆ ಉದ್ಯೋಗ. ನಿಮ್ಮ ಏಕಾಗ್ರತೆಯ ಜ್ಞಾನ, ಜ್ಞಾನಾರ್ಜನೆ ಸಮಾಜಕ್ಕೆ ಬಹಳಷ್ಟು ಅವಶ್ಯಕ. ಅವಶ್ಯಕತೆ ಅರಿತಿರುವ ವಿದ್ಯಾರ್ಥಿ ಮಾತ್ರ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾನೆ. ಆಗಾಗಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸವಾಲಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಕ್ತಿ, ಸಾಮಾರ್ಥ್ಯದ . ಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು. ಡಾ.ಬಾಬುಜಗಜೀವನರಾಮ್ ಸಂಘಟನೆಗಳ ಒಕ್ಕೂಟ ಜಿಲ್ಲೆಯಲ್ಲಿ ಐಎಎಸ್ ಕೋಚಿಂಗ್ ಸೆಂಟರ್ ತೆರೆದು ಸಮುದಾಯ ಮಕ್ಕಳಿಗೆ ತರಬೇತಿ ನೀಡುವ ಮೂಲಕ ಮುಂದಿನ ವರ್ಷದಿಂದ ಸಮುದಾಯ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಓದುವತ್ತ ಗಮನ ಹರಿಸುವ ಕೆಲಸವನ್ನು ಮಾಡಬೇಕು ಅದಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಐಎಎಸ್, ಐಪಿಎಸ್ ಓದಿಸಿ: ಕಾರ್ಯಕ್ರಮ ಉದ್ಘಾಟಿಸಿ
ಮಾಜಿ ಸಚಿವ ಕೋಟಿ ಎಂ.ಶಿವಣ್ಣ
ಮಾತನಾಡಿ, ಪೋಷಕರು ಈಗಾಗಲೇ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿದ್ದೀರಿ. ಮುಂದೆಯೂ ಐಎಎಸ್, ಐಪಿಎಸ್‌ನಂತಹ ಉನ್ನತ ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು.
ರಾಜಕಾರಣ ಮೊದಲಿನ ರೀತಿ ಇಲ್ಲ ಆಗಾಗಿ ವಿದ್ಯಾರ್ಥಿಗಳು ರಾಜಕಾರಣಕ್ಕೆ ಹೋಗುವುದು ಬೇಡ. ಸಮಾಜದಲ್ಲಿ ಉತ್ತಮವಾದ ನಾಗರೀಕರಾಗುವ ಕೆಲಸವನ್ನು ನೀವು ಮಾಡಬೇಕು ಎಂದರು.
ಕರ್ನಾಟಕ ಸಂಸ್ಕೃತ ವಿದ್ಯಾಲಯ ಉಪ ಕುಲಪತಿ
ಡಾ.ವಿ.ಗಿರೀಶ್ ಚಂದ್ರು ಮಾತನಾಡಿ, ತಾಳ್ಮೆ ನಮ್ಮೆಲ್ಲರ ಅಸ್ತ್ರ, ವಿದ್ಯಾಯಿಂದ ವಿನಯ ಬರುತ್ತದೆ. ಸರ್ಕಾರ ನೌಕರರಾದವರು ತಂದೆ, ತಾಯಿ, ಸಮಾಜವನ್ನು ಪ್ರೀತಿಸಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ, ಕೌಶಲ್ಯ, ಶಿಸ್ತು ಇರಬೇಕು ಎಂದರು.
ಕೃಷಿ ಇಲಾಖೆ ಎಸ್ಸಿ,ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ತಿರುಮಲೇಶ್ ಮುಖ್ಯಭಾಷಣದಲ್ಲಿ
ಮಾತನಾಡಿ, ಸರ್ಕಾರಿ ನೌಕರಿ ಜೊತೆಗೆ ಖಾಸಗಿ ವಲಯದ ಸಾಕಷ್ಟು ಅವಕಾಶಗಳಿವೆ. ಶಿಕ್ಷಣ ಒಂದು ಮಾಧ್ಯಮ ಅದುವೇ ಜೀವನವಲ್ಲ. ಶಿಕ್ಷಣದ ಜೊತೆಗೆ
ಕೌಶಲ್ಯಗಳನ್ನು ಬೆಳಸಿಕೊಂಡರೆ ಅವಕಾಶ ಸಿಕ್ಕೆಸಿಗುತ್ತದೆ ಎಂದರು.
ಸಂಘದ ಗೌರವಾಧ್ಯಕ್ಷ ಬಸವನಪುರ ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನಮ್ಮ ಸಂಘಟನೆ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮುದಾಯ ಶಿಕ್ಷಣಕ್ಕೆ ಹೆಚ್ವು ಒತ್ತು ನೀಡಬೇಕು. ಪ್ರತಿಭಾ ಪುರಸ್ಕಾರ ಸ್ವೀಕರಿಸಿರುವ ಮಕ್ಕಳು ಉನ್ನತ ಶಿಕ್ಷಣ ಓದಬೇಕು ಸಲಹೆ ನೀಡಿದರು.
250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : 2026-27ನೇ ಸಾಲಿನ ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಪ್ರಮಾಣಪತ್ರ, ನಗದು ಪುರಸ್ಕಾರ ನೀಡಿ ಒಕ್ಕೂಟದ ವತಿಯಿಂದ
ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಎಸ್ ಸಿ ನೌಕರರ ಸಂಘದ ರಾಜಾಧ್ಯಕ್ಷ ಮಂಜುನಾಥ ಓಣಿಕೇರಿ, , ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ರಾಜ್ಯಾಧ್ಯಕ್ಷ ಡಾ.ಗಿರೀಶ್ ಚಂದ್ರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಮುನಿರಾಜು,ಉಪನ್ಯಾಸಕ ಎಲ್.ಮಧುಕರ್, ಎಂ.ಪ್ರಶಾಂತ್ ಕುಮಾರ್, ಮುಖ್ಯಶಿಕ್ಷಕ ಬಿ.ಶಿವನಂಜು, ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಎಸ್.ಲಿಂಗಣ್ಣ, ಎಲ್ ಐಸಿ ನಿವೃತ್ತ ಆಡಳಿತಾಧಿಕಾರಿ ಎಸ್.ರಾಜಣ್ಣ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜು, ಕಾಗಲವಾಡಿ ಮಹಾದೇವಸ್ವಾಮಿ, ಮೈಸೂರು ಮುಡಾದ ಕಂದಾಯ ಅಧಿಕಾರಿ ಸಿದ್ದಾರ್ಥ, ಎಂ.ಚಂದ್ರಶೇಖರ್, ಮಣಿ ಚೆನ್ನಬಸವಯ್ಯ, ಮಹಾದೇವಸ್ವಾಮಿ, ಶಿವರಾಜು, ಸಿದ್ದಪ್ಪ,ಸಂಘದ ಗೌರವಾಧ್ಯಕ್ಷ ಬಸವನಪುರ ರಾಜಶೇಖರ, ಜಿಲ್ಲಾಧ್ಯಕ್ಷ ಹೆಚ್.ಹೆಚ್.ನಾಗರಾಜು, ಗೌರವ ಸಲಹೆಗಾರ ಅರಕಲವಾಡಿ ಜವರಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್, ಸಹ ಕಾರ್ಯದರ್ಶಿ ರಾಮಸಮುದ್ರ ಶಿವಕುಮಾರ್, ಉಪಾಧ್ಯಕ್ಷ ರಾದ ಹಸಗೂಲಿ ಸಿದ್ದಯ್ಯ, ಬ್ಯಾಂಕ್ ಬಸವರಾಜು, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಗೋಪಾಲ್, ಎಲ್ ಐಸಿ ರಾಜಣ್ಣ, ಶಿವಮಲ್ಲು, ಸುರೇಶ್ ಬೈಲೂರು, ದ್ವಾರ್ಕಿ, ವಸಂತ, ಮಾಧು, ಸುಂದರ್, ರಂಗಸ್ವಾಮಿ ಇತರರು ಹಾಜರಿದ್ದರು.