ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಹಿಳಾ ಕಾರ್ಯಕಾರಣಿ ಸಭೆ ‘ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮಹಿಳಾ ಸಹಕಾರ ನೀಡಿ’- ಕೆಂಗಾಕಿ ಎಸ್. ನಾಗರತ್ನ

ಚಾಮರಾಜನಗರ: ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮಹಿಳಾ ಕಾರ್ಯಕರ್ತರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಕೆಂಗಾಕಿ ಎಸ್. ನಾಗರತ್ನ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಸಂಘಟನೆ ಕುರಿತು ಏರ್ಪಡಿಸಿದ್ದ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಬರುವ ಜಿಪಂ, ತಾಪಂ, ಸ್ಥಳೀಯಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ದೃಷ್ಟಿಯಿಂದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸಂಘಟನೆಯ ಪ್ರಸ್ತುತ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸುವುದು, ಪದಾಧಿಕಾರಿಗಳು ಮತ್ತು ಸದಸ್ಯೆಯರ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು. ಗ್ರಾಮ, ಬ್ಲಾಕ್, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಘಟನೆಯನ್ನು ವಿಸ್ತರಿಸುವುದು.ಮಹಿಳಾ ನಾಯಕತ್ವವನ್ನು ಬೆಳೆಸುವುದು, ಯುವತಿಯರು ಮತ್ತು ಹೊಸ ಸದಸ್ಯೆಯರಿಗೆ ನಾಯಕತ್ವದ ಅವಕಾಶ ಕಲ್ಪಿಸುವುದು.

ಸಕ್ರಿಯವಾಗಿರುವ ಮತ್ತು ನಿಷ್ಕ್ರಿಯವಾಗಿರುವ ಘಟಕಗಳನ್ನು ಗುರುತಿಸುವುದು, ಅಗತ್ಯವಿರುವ ಕಡೆ ಸಂಘಟನಾ ಪುನರ್‍ವ್ಯವಸ್ಥೆ ಕುರಿತು ಚರ್ಚಿಸುವುದು, ಸದಸ್ಯೆಯರ ಸಂಪರ್ಕ ಮತ್ತು ಸದಸ್ಯತ್ವ ನೋಂದಣಿ ವ್ಯವಸ್ಥೆ ರೂಪಿಸುವುದು ಸಭೆಯ ಮುಖ್ಯ ಉದ್ದೇಶಗಳಾಗಿವೆ ಎಂದರು.

ಮುಂದಿನ ದಿನಗಳಲ್ಲಿ ಮಹಿಳಾ ನಾಯಕತ್ವ ತರಬೇತಿ ಶಿಬಿರ, ಸ್ಥಳೀಯ ಆಡಳಿತದ ಕುರಿತು ಅರಿವು ಕಾರ್ಯಕ್ರಮ, ಸಾರ್ವಜನಿಕ ಭಾಷಣ ಮತ್ತು ಸಂವಹನ ತರಬೇತಿ, ಸಭೆ ನಿರ್ವಹಣೆ ಮತ್ತು ಸಂಘಟನಾ ಕೌಶಲ್ಯ ತರಬೇತಿ, ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಕಾರ್ಯಕ್ರಮ, ಯುವ ಮಹಿಳೆಯರಿಗಾಗಿ ವಿಶೇಷ ನಾಯಕತ್ವ ಕಾರ್ಯಾಗಾರಗಳನ್ನು ಮಹಿಳಾ ಘಟಕದಿಂದ ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಲಾ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಪದ್ಮಪುರುಷೋತ್ತಮ್, ರಾಜ್ಯ ಕಾರ್ಯದರ್ಶಿ ಕಾವೇರಿ ಶಿವಕುಮಾರ್, ಚಾಮರಾಜನಗರ ಗ್ರಾಮಾಂತರ ಅಧ್ಯಕ್ಷೆ ಶಕುಂತಲ. ನಗರಘಟಕದ ನಾಗಶ್ರೀ, ಗುಂಡ್ಲುಪೇಟೆ ಘಟಕದ ಭಾಗ್ಯಮ್ಮ. ಆರ್.ಜ್ಯೋತಿ, ಬೇಗೂರುಘಟಕದ ರೇಖಾ, ಪುಟ್ಟಮ್ಮ, ºನೂರುಘಟಕÀ ಸುವರ್ಣ, ರತ್ನಮ್ಮ, ಯಳಂದೂರು ಘಟಕದ ಭಾಗ್ಯಮ್ಮ,ಡಾ,ರತ್ಮಮ್ಮ, ಕೃಷ್ಣವೇಣಿ, ಇದೇ ಸಂಧರ್ಭದಲ್ಲಿ ಚುಡಾಅಧ್ಯಕ್ಷಮಹಮದ್‍ಅಸ್ಗರ್, ಕೆ,ಪಿ,ಸಿಸಿ ಸದಸ್ಯ ಸೈಯದ್‍ರಫಿ, ನಗರಸಭಾ ನಾಮನಿರ್ದೇಕಸ್ವಾಮಿ,ಶಾಂತಲಾ ತಾ,ಪಂ ಕೆ,ಡಿ,ಪಿ ಸದಸ್ಯ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಸ್ರುಲ್‍ಖಾನ್ ಹಾಜರಿದ್ದರು.

Leave a Reply

Your email address will not be published. Required fields are marked *