ಚಾಮರಾಜನಗರ: ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಘಟಕದ ವತಿಯಿಂದ ಇಂದು ವಿಶ್ವ ಪರಿಸರ ದಿನವನ್ನು “ಪ್ರಕೃತಿಯಿಂದ ಪ್ರೇರಿತಗೊಂಡು ಉತ್ತಮ ಹವಾಮಾನಕ್ಕಾಗಿ ಹಾಗೂ ನಮ್ಮ ಭವಿಷ್ಯಕ್ಕಾಗಿ” ಎಂಬ ಘೋಷವಾಕ್ಯದಡಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಮಧು ಅವರು ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರವನ್ನು ಬೆಳೆಸಿ ಉಳಿಸಿದರೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆಗೆ ಎಲ್ಲರೂ ಮುಂದಾಗಬೇಕು. ಹೆಚ್ಚಿನ ಗಿಡಗಳನ್ನು ಬೆಳೆಸುವುದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಪರಿಸರ ಪ್ರೇಮಿ ಬೀರೇಶ್ ಅವರು ಮಾತನಾಡಿ ರಾಸಾಯನಿಕ ಔಷಧಿಗಳ ಅವಲಂಬನೆ ಕಡಿಮೆ ಮಾಡುವಲ್ಲಿ ಔಷಧೀಯ ಸಸ್ಯಗಳ ಪಾತ್ರ ಮಹತ್ವದ್ದಾಗಿದೆ. ಗಿಡಗಳನ್ನು ಬೆಳೆಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸಬೇಕು. ಜಿಲ್ಲೆಯ ಸುತ್ತಮುತ್ತ ಬೆಳೆದಿರುವ ವಿವಿಧ ಔಷಧೀಯ ಹಾಗೂ ಉಪಯುಕ್ತ ಗಿಡಗಳ ಮಹತ್ವವನ್ನು ತಿಳಿಯಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಪ್ರೊ ದೇವೇಂದ್ರ ಕುಮಾರ್, ಡಾ. ಪಿ.ಸಿ. ಶ್ರೀನಿವಾಸ್, ಡಾ. ಇಮ್ರಾನ್ ಖಾನ್, ಪ್ರೊ. ಚೈತ್ರ ಬನಸವಾಡಿ, ಡಾ. ಎಸ್. ಪ್ರದೀಪ್, ಡಾ. ಮನೀಲ್ ರಾಜ್, ಡಾ. ಸಂದೀಪ್, ಡಾ. ರವೀಂದ್ರ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related