ಚಾಮರಾಜನಗರ: ಇಲ್ಲಿನ ಎಲ್‌ಐಸಿ ಕಚೇರಿ ಹಾಗೂ ನಂಜನಗೂಡು ವೃತ್ತ ಹತ್ತಿರ ರಸ್ತೆಡುಬ್ಬ ನಿರ್ಮಿಸಿ ಅಪಘಾತ ತಡೆಗಟ್ಟುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿ ಕಾರಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಿದರು.
.ನಗರದ ನಂಜನಗೂಡು ವೃತ್ತದಿಂದ ಎಲ್ ಐಸಿ ಕಚೇರಿಯ ಮುಖ್ಯ ರಸ್ತೆಯ ಮಧ್ಯೆದಲ್ಲಿ ರಸ್ತೆ ಡುಬ್ಬ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಅತಿ ಯಾದ ವೇಗದಿಂದ ಪದೇಪದೇ ಅಪಘಾತಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ನಗರದ ನಿವಾಸಿಯೊಬ್ಬರು ಅಪ ಘಾತದಲ್ಲಿ ಮೃತಪಟ್ಟಿದ್ದಾರೆ.
ಆಗಾಗಿ ತಾವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಗರದನಂಜನಗೂಡು ವೃತ್ತದ ಬಳಿ ಯಿಂದ ಎಲ್‌ಐಸಿ ಕಚೇರಿ ತನಕ 2 ಕಡೆಗಳಲ್ಲಿ ರಸ್ತೆ ಡುಬ್ಬ ನಿರ್ಮಿಸಿ ಅಪಘಾತಗಳನ್ನು ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ನಮ್ಮ ಸೇನೆ ಜಿಲ್ಲಾಧ್ಯಕ್ಷ ಸುರೇಶ್ ನಾಯಕ, ತಾಲ್ಲೂಕು ಅಧ್ಯಕ್ಷ ಗಿರೀಶ್ ನಾಯಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಿ. ಮಣಿಕಂಠ, ಮಧುನಾಯಕ, ಸಿ. ಮಣಿಕಂಠ ಸ್ವಾಮಿನಾಯಕ, ಬಸವರಾಜು, ಕೃಷ್ಣೇಗೌಡ, ಶ್ರೀನಿವಾಸನಾಯಕ, ಸಚಿನ್, ಚಾಮರಾಜನಗರ ಟೌನ್ ಅಧ್ಯಕ್ಷ ಮುದಾಸಿರ್, ರವಿಕುಮಾರ್ ಇತರರು.
