ಡಾ.ಎಂ.ಬಸವರಾಜೇಂದ್ರ, ಡಾ.ಶ್ವೇತಾ ಶಶಿಧರ್ ದಂಪತಿಗೆ ವೈದ್ಯೋ ಭೀಷ್ಮ ಬಿರುದು ನೀಡಿ ಸನ್ಮಾನ

ಚಾಮರಾಜನಗರ: ಡಾ.ಎಂ.ಬಸವರಾಜೇಂದ್ರ, ಡಾ.ಶ್ವೇತಾ ಶಶಿಧರ್ ದಂಪತಿಗೆ ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವೈದ್ಯ ಭೀಷ್ಮ ಬಿರುದು ನೀಡಿ ಸನ್ಮಾನಿಸಲಾಯಿತು.

ನಗರದ ಚಿಕ್ಕಂಗಡಿ ಬೀದಿಯಲ್ಲಿರುವ ಬಸವ ರಾಜೇಂದ್ರ ಕ್ಲಿನಿಕ್ ನಲ್ಲಿ ಸನ್ಮಾನ ಸ್ವೀಕರಿಸಿದ ಡಾ.ಬಸವರಾಜೇಂದ್ರ ಮಾತನಾಡಿ, ಈ ಸನ್ಮಾನ ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ಇರಲಿ. ಮತ್ತಷ್ಟು ಸೇವೆಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.

ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ಅಧ್ಯಕ್ಷ ನಿಜಧ್ವನಿ ಗೋವಿಂದರಾಜು ಮಾತನಾಡಿ, ವೈದ್ಯಕೀಯ ಕ್ಷೇತ್ರದ ಜೊತೆಗೆ ಡಾ.ಎಂ.ಬಸವರಾಜೇಂದ್ರ, ಡಾ.ಶ್ವೇತಾ ಶಶಿಧರ್ ದಂಪತಿ ನಗರದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿ ಪಡಿಸಿ, ಬಡಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವ ಅವರ ಸಮಾಜಮುಖಿಸೇವೆಯನ್ನು ಗುರುತಿಸಿ ನಮ್ಮ ಸಂಘಟನೆ, ಕನ್ನಡಪರ ಸಂಘಟನೆಗಳ ವತಿಯಿಂದ ಅವರಿಗೆ ವೈದ್ಯ ಭೀಷ್ಮ ಬಿರುದು ನೀಡಿ ಸನ್ಮಾನಿಸಲಾಗಿದೆ. ಅವರ ಸೇವೆ ಜಿಲ್ಲೆಗೆ ಅಗತ್ಯವಿದೆ ಎಂದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ, ವೈದ್ಯೋ ನಾರಾಯಣೋ ಹರಿ
ಎಂಬುದು ಸಂಸ್ಕೃತದ ಒಂದು ಪ್ರಸಿದ್ಧ ನಾಣ್ಣುಡಿಯಾಗಿದ್ದು, ರೋಗಿಗಳಿಗೆ ಜೀವದಾನ ಮಾಡುವ ವೈದ್ಯರು ದೇವರಷ್ಟೇ ಪೂಜ್ಯನೀಯರು ಮತ್ತು ರಕ್ಷಕರು ಎಂಬ ಭಾವನೆ ಇದರಿಂದ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಪಿ ನಿರ್ದೇಶಕ ವೆಂಕಟರಾವ್ ಸಾಠೆ, ಪಣ್ಯದಹುಂಡಿ ರಾಜು, ಮಹದೇವ, ಬಂಗಾರಸ್ವಾಮಿ, ಸುಶೀಲ, ನಾಗೇಂದ್ರಗೌಡ, ಮಹಾದೇವಸ್ವಾಮಿ, ಸುಚಿತ್ರ, ಮುತ್ತುಲಕ್ಷ್ಮೀ, ಆಟೋ ಲಿಂಗರಾಜು, ಆಟೋ ನಾಗೇಶ್, ಎಂ.ಡಿ ಕಿಫಾಯಿತ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *