ತೋಟಗಾರಿಕೆ ಬೆಳೆಗಳಿಗೆ ಆಕಸ್ಮಿಕ ಬೆಳೆ ನಿರ್ವಹಣೆ ಕ್ರಮ ಅನುಸರಿಸಲು ಮನವಿ

ಚಾಮರಾಜನಗರ, ಆಗಸ್ಟ್ 14 (ಕರ್ನಾಟಕ ವಾರ್ತೆ):- ತೋಟಗಾರಿಕೆ ಇಲಾಖೆಯು ಹವಾಮಾನ ವೈಪರಿತ್ಯ ಸಂದರ್ಭಗಳಲ್ಲಿ ಬೆಳೆಗಳನ್ನು ರಕ್ಷಿಸಲು ಕೈಗೊಳ್ಳುವ ಪರ್ಯಾಯ ಕ್ರಮವಾದ ತೋಟಗಾರಿಕೆ ಬೆಳೆಗಳ ಆಕಸ್ಮಿಕ ಬೆಳೆ ನಿರ್ವಹಣೆ ಕ್ರಮಗಳ ಕುರಿತು ತಿಳಿಸಿದೆ.

   ಪ್ರಸ್ತುತ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ರೈತರ ಹಿತದೃಷ್ಟಿಯಿಂದ ಪ್ರಮುಖ ತೋಟಗಾರಿಕೆ ಬೆಳೆಗಳಾದ ಅರಿಶಿಣ, ಈರುಳ್ಳಿ, ಬಾಳೆ, ಟ್ಯೊಮಾಟೊ, ಆಲೂಗೆಡ್ಡೆ, ತೆಂಗು, ಅಡಿಕೆ ಮತ್ತು ಮಾವು ಬೆಳೆಗಳಿಗೆ ಸಂಬಂಧಿಸಿದಂತೆ ಆಕಸ್ಮಿಕ ಬೆಳೆ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. 

   ನೀರಿನ ಸಂರಕ್ಷಣೆಗಾಗಿ ಬೆಳೆಗಳಲ್ಲಿ ಹನಿ ನೀರಾವರಿ ಹಾಗೂ ರಸಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಮುಖ್ಯ ಬೆಳೆಗೆ ಆದ್ಯತೆ ನೀಡಿ, ಹೆಚ್ಚುವರಿಯಾಗಿ ಅಂತರ ಬೆಳೆಗಳನ್ನು ಬೆಳೆಯದಿರುವುದು, ಶಿಫಾರಸ್ಸು ಮಾಡಿದ ಸಾವಯವ ಪೆÇೀಷಕಾಂಶಗಳಾದ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ, ಕಾಂಪೆÇೀಸ್ಟ್ ಗಳನ್ನು ಬೆಳೆಗಳಿಗೆ ನೀಡಬೇಕು.  ಇಳಿಜಾರು ಪ್ರದೇಶದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಅರ್ಧ ಚಂದ್ರಾಕಾರದ ಬದುಗಳ ನಿರ್ಮಾಣ ಮಾಡುವುದರಿಂದ ಆಕಾಲಿಕ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ.

   ಭೂಮಿಯಲ್ಲಿ ತೇವಾಂಶವಿದ್ದಾಗ ಜೀವಾಮೃತ ಬಳಕೆ ನೀಡುವುದರಿಂದ ಅರಿಶಿಣ, ಆಲೂಗೆಡ್ಡೆ, ಈರುಳ್ಳಿ ಬೆಳೆಗಳು ಬರ ಸಹಿಷ್ಣುವಾಗುತ್ತದೆ. ಅಡಿಕೆ, ತೆಂಗು ಮತ್ತು ಮಾವು ಬೆಳೆಗಳಲ್ಲಿ ರೋಗ ಮತ್ತು ಕೀಟ ಬಾಧಿತ ಕೊಂಬೆಗಳನ್ನು ಸವರುವುದರಿಂದ ಸಸ್ಯ ಸಂರಕ್ಷಣೆ ಮಾಡಬಹುದು. ಬಾಳೆ, ಆಲೂಗೆಡ್ಡೆ, ಟೊಮ್ಯಾಟೊ ಬೆಳೆಗಳಿಗೆ ಸಾವಯವ ಪ್ಲಾಸ್ಟಿಕ್ ಹೊದಿಕೆ ಮಾಡುವುದರಿಂದ ಮಣ್ಣಿನ ತೇವಾಂಶ ಸಂರಕ್ಷಣೆ ಮಾಡಬಹುದು. 

  ತೋಟಗಾರಿಕೆ ಬೆಳೆಗಳ ಆಕಸ್ಮಿಕ ಬೆಳೆ ನಿರ್ವಹಣೆ ಕ್ರಮಗಳು ಹವಾಮಾನ ವೈಪರೀತ್ಯ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ಬೆಳೆಗಳನ್ನು ರಕ್ಷಿಸಲು ಕೈಗೊಳ್ಳುವ ಪರ್ಯಾಯ ನಿರ್ವಹಣಾ ಕ್ರಮವಾಗಿರುತ್ತದೆ. ಸದರಿ ಕ್ರಮಗಳು ಪ್ರಮುಖವಾಗಿ ನೀರಿನ ಸಂರಕ್ಷಣೆ, ಮಣ್ಣಿನ ತೇವಾಂಶ ಸಂರಕ್ಷಣೆ ಹಾಗೂ ಕೀಟ, ರೋಗ ಬಾಧೆ ನಿಯಂತ್ರಣಕ್ಕೆ ಒತ್ತು ನೀಡುತ್ತದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *