ಅಕ್ರಮವಾಗಿ ಉಡ ಮಾರಾಟಕ್ಕೆ ಸಾಗಾಣಿಕೆ ಮಾಡಲು ಯತ್ನಿಸಿದ ವ್ಯಕ್ತಿಗಳ ಬಂಧನ

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಇರುವ ಕಾವೇರಿ ನದಿಯ ದಡದಲ್ಲಿ ಉಡವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಉಡವನ್ನು ಕೊಳ್ಳೇಗಾಲ ಸಿಐಡಿ ಪೆÇಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡಿದೆ.

   ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಇರುವ ಕಾವೇರಿ ನದಿ ದಡದಲ್ಲಿ ಉಡವನ್ನು ಹಿಡಿದು ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವುದಾಗಿ ದೊರೆತ ಮಾಹಿತಿಯಂತೆ ಜೂನ್ 3ರಂದು ಮಧ್ಯಾಹ್ನ 3.15 ಗಂಟೆ ಸಮಯದಲ್ಲಿ ಕಾವೇರಿ ನದಿಯ ದಡದ ಬಳಿ ಹೋದಾಗ ಇಬ್ಬರು ವ್ಯಕ್ತಿಗಳು ರಟ್ಟಿನಿಂದ ಸುತ್ತಿರುವ ಕಬ್ಬಿಣದ ಪಂಜರ ಸಮೇತ ಇರುವ ಒಂದು ಜೀವಂತ ಉಡವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದುದ್ದು ಕಂಡು ಬಂತು. ತಕ್ಷಣ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸ್ವತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

 ಬಂಧಿತ ಆರೋಪಿಗಳು ಸರ್ದಾರ್ ಬಿನ್ ಲೇಟ್ ಮುಕ್ತಾರ್ ಅಹಮದ್ ಅಲಿಯಾಸ್ ಮುಕ್ತಾರ್ ಪಾಶ (45 ವರ್ಷ), ಹುಣಸೂರು ಪಟ್ಟಣ, ಹುಣಸೂರು ತಾಲೂಕು, ಮೈಸೂರು ಜಿಲ್ಲೆ ಹಾಗೂ ರಫೀ ಬಿನ್ ಲೇಟ್ ಅಬ್ದುಲ್ ಗನ್ನಿ (44 ವರ್ಷ) ಹುಣಸೂರು ಪಟ್ಟಣ, ಹುಣಸೂರು ತಾಲೂಕು, ಮೈಸೂರು ಜಿಲ್ಲೆಯವನಾಗಿದ್ದಾರೆ. 

   ಪೆÇಲೀಸ್ ಮಹಾನಿರೀಕ್ಷಕರು. ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೆÇಲೀಸ್ ಅಧೀಕ್ಷಕರಾದ ಪವನ್‍ನೆಜ್ಜೂರು, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕೊಳ್ಳೆಗಾಲ ಸಿಐಡಿ ಪೆÇಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಹಾಗೂ ಸಿಬ್ಬಂದಿ ಬಸವರಾಜ್, ಸ್ವಾಮಿ, ಜಮೀಲ್, ಲತಾ, ರಾಮಚಂದ್ರ, ಪ್ರಭಾಕರ್ ಮತ್ತು ಬಸವರಾಜ್ ರವರು ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *