ಚಾಮರಾಜನಗರ: ಭಾರತೀಯ ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂಬ ಆಶಯದಿಂದ ಕಾಂಗ್ರೆಸ್ ಕಾರ್ಯಕರ್ತರಾದ ಕಾಟೂರಿ ವೆಂಕಟೇಶ್ವರ್ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ತಮಿಳುನಾಡು ಯಾತ್ರೆ ಮುಗಿಸಿ ಕರ್ನಾಟಕದ ಗಡಿ ಚಾಮರಾಜನಗರಕ್ಕೆ ಬುಧವಾರ ಆಗಮಿಸಿದ ಕಾಟೂರಿ ವೆಂಕಟೇಶ್ವರ್ ತಂಡವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಲಾಯಿತು.
ಇದೇವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ರಾಹುಲ್‌ಗಾಂಧಿ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂಬ ಆಶಯ ಹೊತ್ತು ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರಗೆ ಪಾದಯಾತ್ರೆ ಕೈಗೊಂಡಿರುವ ಕಾಟೂರಿ ವೆಂಕಟೇಶ್ವರ್ ಅವರ ತಂಡದ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿ, ಮುಂದಿನ ಪಾದಯಾತ್ರೆಗೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಚುಡಾಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಕೆಪಿಸಿಸಿ ಸದಸ್ಯ ಸಯ್ಯದ್ ರಫಿ, ಗ್ಯಾರಂಟಿ ಯೋಜನೆ ಅನುಷ್ಠಾನಸಮಿತಿಸದಸ್ಯಮರಿಯಾಲಹುಂಡಿಕುಮಾರ್,ನಸ್ರುಲ್ಲಖಾನ್, ಮೋಹನ್‌ನಗು, ಅಕ್ಷಯ್, ಗ್ರಾ,ಪಂ ಮಾಜಿ ಅಧ್ಯಕ್ಷ ಮಾದಾಪುರ ರೂಪೇಶ್, ಶಕುಂತಳಾ, ಬಸುಮರಿ, ರಾಮಸಮುದ್ರ ಶಿವಕುಮಾರ್. ಸ್ವಾಮಿ, ಮುತ್ತುರಾಮ್, ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.