ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪರಿಮಿತಿ 200 ಮೀಟರ್ ಒಳಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ವೇಳೆ ಬೆಳಿಗ್ಗೆ 8 ರಿಂದ 10.30 ಗಂಟೆಯವರೆಗೆ ಹಾಗೂ ಶಾಲೆಯಿಂದ ನಿರ್ಗಮಿಸುವ ವೇಳೆ ಮಧ್ಯಾಹ್ನ 3.30 ರಿಂದ ಸಂಜೆ 5.30 ಗಂಟೆಯವರೆಗೆ ವಿವಿಧ ಷರತ್ತುಗಳಿಗೊಳಪಡಿಸಿ ಎಲ್ಲಾ ರೀತಿಯ ಭಾರಿ ವಾಹನಗಳ (ಟಿಪ್ಪರ್, ಭಾರಿ ಲಾರಿಗಳು ಹಾಗೂ ಇತರೆ ಭಾರಿ ಸರಕುಸಾಗಣಿಕೆ ವಾಹನಗಳು) ಸಂಚಾರ/ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಆದೇಶ ಹೊರಡಿಸಿದ್ದಾರೆ.
ಸೂಚಿತ ಸಮಯವಲ್ಲದೆ ಇನ್ನುಳಿದ ಸಮಯದಲ್ಲಿಯೂ ಸಹ ಶಾಲಾ ಪರಿಮಿತಿಯಲ್ಲಿ ಸಂಚರಿಸುವ ವಾಹನಗಳು 30 ಕಿ.ಮೀ ವೇಗದ ಮಿತಿಯಲ್ಲಿ ಸಂಚರಿಸಬೇಕು. ವಾಹನಗಳು ಸಾಮಥ್ರ್ಯಕಿಂತ ಹೆಚ್ಚಿನ ಭಾರವನ್ನು ಸಾಗಿಸಬಾರದು. ಶಾಲಾ ಪರಿಮಿತಿಯಲ್ಲಿ ಸಂಚರಿಸುವ ವಾಹನಗಳು ಕರ್ಕಶ (ಹಾರ್ನ್) ಶಬ್ದಗಳನ್ನು ಮಾಡಬಾರದು. ಶಾಲಾ ಪರಿಮಿತಿಯಲ್ಲಿ ಯಾವುದೇ ಭಾರಿ ವಾಹನಗಳನ್ನು ನಿಲುಗಡೆಬಾರದು ಎಂಬ ಷರತ್ತುಗಳನ್ನು ಜಿಲ್ಲಾಧಿಕಾರಿಯವರು ವಿಧಿಸಿದ್ದಾರೆ.
ಜಿಲ್ಲೆಯಲ್ಲಿ ಶಾಲೆಗಳು ಪ್ರಾರಂಭವಾಗಿದ್ದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಟಿಪ್ಪರ್, ಭಾರಿ ಸರಕು ಸಾಗಣಿಕೆ, ಗಣಿಗಾರಿಕೆಯ ಕಲ್ಲು, ಮರಳು, ಖನಿಜಗಳನ್ನು ಸಾಗಿಸುವ ಭಾರಿ ವಾಹನಗಳ ಸಂಚಾರದಿಂದ ಸಂಚಾರ ದಟ್ಟಣೆ, ಅಪಘಾತಗಳ ಸಂಭವ ಹೆಚ್ಚಾಗುತ್ತಿದ್ದು ಇದರಿಂದ ಶಾಲಾ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದಾಗಿ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿವೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ದಟ್ಟಣೆ ಮತ್ತು ಅಪಘಾತಗಳನ್ನು ತಡೆಯುವ ಉದ್ದೇಶದಿಂದ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಶಾಲೆಗಳ ಪ್ರಾರಂಭ ಮತ್ತು ಬಿಡುವ ಸಮಯದಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಬರ್ಂಧಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದ್ದಾರೆ.
Like this:
Like Loading...
Related