ಡಾ.ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಶಕ್ತಿಯಾಗಿದ್ದರು : ಸಿ.ಎಂ.ವೆಂಕಟೇಶ್

ಡಾ. ರಾಜ್‌ಕುಮಾರ್ ಜಯಂತಿ, ಪಾರ್ವತಮ್ಮ ರಾಜ್‌ಕುಮಾ‌ರ್ ಪಣ್ಯಸ್ಮರಣೆ ಅಂಗವಾಗಿ ದೊಡ್ಮನೆ ಗೀತೆಗಳ ಗಾಯನ ಕಾರ್ಯಕ್ರಮ
  ಚಾಮರಾಜನಗರ: ಪಾರ್ವತಮ್ಮ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡಶಕ್ತಿಯಾಗಿದ್ದರು ಎಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎಂ.ವೆಂಕಟೇಶ್ ಹೇಳಿದರು.
    ನಗರದ ಜೆ.ಹೆಚ್.ಪಟೇಲ್‌ ಸಭಾಂಗಣದಲ್ಲಿ ಮೈಸೂರು ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಡಾ.ರಾಜ್‌ಕುಮಾರ್ ಅವರ 98ನೇ ಜಯಂತೋತ್ಸವ, ಡಾ. ಪಾರ್ವತಮ್ಮ ರಾಜ್‌ಕುಮಾರ್ ಅವರ ಪಣ್ಮಸ್ಮರಣೆಯ ಅಂಗವಾಗಿ ನಡೆದ ದೊಡ್ಮ
ನೆ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಾರ್ವತಮ್ಮ ರಾಜ್‌ಕುಮಾರ್ ಅವರು ಡಾ.ರಾಜ್‌ಕುಮಾರ್ ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದು, ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್ ಅವರನ್ನು ಸ್ಕ್ಯಾ‌ರ್ ನಟರಾಗಿ ಬೆಳೆಸಿದರು ಎಂದರು.
ಪಾರ್ವತಮ್ಮ ಶಕ್ತಿದೇವತೆ ಎಂದರೆ ತಪ್ಪಲಾರದು. ಅವರು ಕರ್ನಾಟಕದಲ್ಲಿ ಅತ್ಯಂತ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಅವರು ಚಿತ್ರಗಳೆಲ್ಲವೂ  ಶತಮಾನೋತ್ಸವ ಆಚರಿಸಿವೆ. ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ರಮಾ… ಸೇರಿದಂತೆ ಇನ್ನಿತರ ನಟ- ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ ಎಂದರು.
ಡಾ.ರಾಜ್ ಕುಮಾರ್ ಮ್ಯೂಸಿಕಲ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಮೈಸೂರು ಜಯರಾಂ ಮಾತನಾಡಿ, ಡಾ.ರಾಜ್‌ಕುಮಾ‌ರ್ ಅವರ ಕಾರ್ಯಕ್ರಮವನ್ನು
ಚಾಮರಾಜನಗರದಲ್ಲಿ ಮಾಡುವ ಆಶೆ ಬಹಳದಿನದಿಂದ ಇತ್ತು. ಅಣ್ಣಾವರ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಪಸರಿಸುವುದು ನಮ್ಮ ಆಶಯವಾಗಿದೆ ಎಂದರು.
   ಸಂಪಾದನೆಯ 80 ಭಾಗವನ್ನು ಅಣ್ಣವರಿಗಾಗಿ ವೆಚ್ಚ ಮಾಡಲಾಗುತ್ತಿದೆ. ಅದರಿಂದ ಸಂತಸ ಸಿಗುತ್ತದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಾ. ರಾಜ್‌ಕುಮಾರ್ ಅವರ ಚಿತ್ರಗಳನ್ನು ನೋಡಿದರೆ ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಬಹುದು. ಚಿತ್ರಗಳ ಒಳ್ಳೆಯ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
   ಡಾ.ಬಾಬುಜಗಜೀವನರಾಂ ಸಂಘಟನೆ ಗಳ ಒಕ್ಕೂಟ ಅಧ್ಯಕ್ಷ ಹೆಚ್.ಹೆಚ್.ನಾಗರಾಜು ಮಾತನಾಡಿ, ಮೈಸೂರು ಜಯರಾಂ ಅವರು ಡಾ.ರಾಜ್‌ಕುಮಾ‌ರ್ ಅವರನ್ನು ನೆನಪಿಸುವ ಕಾರ್ಯಕ್ರಮಗಳ ಮೂಲಕ ಅವರನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಅರ್ಥಪೂರ್ಣವಾಗಿದೆ. ಪಾರ್ವತಮ್ಮ ರಾಜ್‌ಕುಮಾ‌ರ್ ಅವರ ಜೀವನದಲ್ಲಿ ಒಂದು ಮೈಲಿಗಲ್ಲಾಗಿದ್ದು, ಎಲ್ಲತರ ಕೀರ್ತಿಗಳು ರಾಜ್‌ಕುಮಾ‌ರ್ ಅವರಿಗೆ ಬಂದಿದೆ. ಎಂದರು.
ಕಾರ್ಯಕ್ರಮದಲ್ಲಿ ಅರುಂಧತಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಶಿವಕುಮಾರ್ ರಾಮಸಮುದ್ರ, ಡಾ.ಬಾಬುಜಗಜೀವನರಾಂ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ರವಿಗುರುಸಿದ್ದಪ್ಪ, ಡಾ.ಸುಗಂಧರಾಜು, ಉಮ್ಮತ್ತೂರು ಚಂದ್ರು, ಪೋಲಿಸ್ ಮಹಾದೇವಸ್ವಾಮಿ, ದೊರೆಸ್ವಾಮಿ, ಯಳಂದೂರು ‌ನಾಗೇಂದ್ರ, ಲತಾಪುಟ್ಟಸ್ವಾಮಿ, ಅಶ್ವಿನಿ, ರಾಜೇಂದ್ರ, ಟಿವಿಎಸ್ ಕುಮಾರ್,  ಸೌಂಡ್ ಸೂರಿ, ರಾಮಸಮುದ್ರ ಸುಂದರ ಹಾಜರಿದ್ದರು.

Leave a Reply

Your email address will not be published. Required fields are marked *