ಸಂತೇಮರಹಳ್ಳಿ   ಜ್ಞಾನ ಸಿಂಧು ವೃದ್ಧಾಶ್ರಮದ ವೃದ್ದರಿಂದ ಕೇಕ್ ಕತ್ತರಿಸಿ ಡಿ.ಎನ್. ನಟರಾಜ್  ಹುಟ್ಟುಹಬ್ಬ ಆಚರಣೆ

ಚಾಮರಾಜನಗರ:  ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಿ.ಎನ್.ನಟರಾಜ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳ ‌ಬಳಗದ ವತಿಯಿಂದ  ತಾಲೂಕಿನ ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ದಾಶ್ರಮದಲ್ಲಿ ವೃದ್ದರಿಂದ ಕೇಕ್ ಕತ್ತರಿಸಿ ಹಂಚುವ ಮೂಲಕ  ಆಚರಣೆ ಮಾಡಲಾಯಿತು.
ಆಯೋಜಕ ಹೆಗ್ಗವಾಡಿಪುರ ಆನಂದ್,ಪಂಚ ಗ್ಯಾರಂಟಿಯ ಯೋಜನೆಗಳ ಅನುಷ್ಠಾನ ಸಮಿತಿಯ ಭಾಗ್ಯಮ್ಮ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಿ.ಎನ್.ನಟರಾಜ್ ಅವರ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿಗಳ ‌ಬಳಗದ ವತಿಯಿಂದ   ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ದಾಶ್ರಮದಲ್ಲಿ ವೃದ್ದರಿಂದ ಕೇಕ್ ಕತ್ತರಿಸಿ ಹಂಚು ಮೂಲಕ  ಆಚರಣೆ ಮಾಡಲಾಯಿತು. ಡಿ.ಎನ್.ನಟರಾಜು ಅವರಿಗೆ ಭಗವಂತ ಹೆಚ್ಚಿನ ಆರೋಗ್ಯ, ಆಯಸ್ಸು ಕರಣಿಸಿ,ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದ ಅಧ್ಯಕ್ಷ ವಡಗೆರೆ ಮಹದೇವಯ್ಯ, ಮರಿಸ್ವಾಮಿ, ರಾಮಣ್ಣ, ಲೋಕೇಶ್,  ರಂಗಣ್ಣ, ಯಜಮಾನ, ಮಹೇಶ್ , ಶಿವು, ದೇವರಾಜ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *