ಚಾಮರಾಜನಗರ : ತಾಲೂಕಿನ ಕರಡಿಮೋಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು.
ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂ ನೀಡಿ, ಮೈಸೂರು ಪಾಕ್ ವಿತರಿಸಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯನ್ನು ಸ್ವಚ್ಛಗೊಳಿಸಿ, ಹೂವಿನಿಂದ, ಹಸಿರುತೋರಣಗಳಿಂದ ಶೃಂಗರಿಸಿ ಬಣ್ಣಬಣ್ಣದ ರಂಗೋಲಿ ಇಟ್ಟು ಸ್ವಾಗತ ಕೋರಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ದಾಖಲಾತಿ ಆಂದೋಲನ ನಡೆಯಿತು. ಮುಖ್ಯಶಿಕ್ಷಕಿ ಬಿ.ಎಸ್.ಲತಾಪುಟ್ಟಸ್ವಾಮಿ,ಮಾತನಾಡಿ, ಶಿಕ್ಷಣ ಇಲಾಖೆಯ ಆದೇಶದಂತೆ ಶಾಲೆಯನ್ನು ಅಲಂಕರಿಸಿ ಮಕ್ಕಳಿಗೆ ಸಿಹಿ ವಿತರಿಸಿ ಶಾಲೆಗೆ ಬರಮಾಡಿಕೊಳ್ಳಲಾಗಿದೆ.ಉತ್ತಮ ಕಲಿಕೆ ಉಜ್ವಲ ಭವಿಷ್ಯ ಎಂಬ ಧ್ಯೇಯ ವಾಕ್ಯ ನಮ್ಮ ಸರ್ಕಾರಿ ನಮ್ಮ ಹೆಮ್ಮೆಯೊಂದಿಗೆ ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂ ನೀಡಿ, ಮೈಸೂರು ಪಾಕ್ ವಿತರಿಸಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಶಂಕರ್ಮ ಕ್ಕಳಿ ಸಿಹಿ ವಿತರಿಸಿ ಬರ ಬರಮಾಡಿಕೊಂಡರು..
ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಜ್ಯೋತಿ, ಸುಮಿತ್ರಾ, ಚೈತ್ರ, ಸೌಮ್ಯ ರಕ್ಷಿತಾ, ಸಹ ಶಿಕ್ಷಕ ಆರ್.ಸೋಮಣ್ಣ, ಅಂಗನವಾಡಿ ಕಾರ್ಯಕರ್ತೆ ಶಿವಮ್ಮ, ಹಾಗೂ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.