ಸತೀಶ್ ಜಾರಕಿಹೊಳಿ ಸಿಎಂಯಾಗಲಿ : ಜುಹಾ ಸುಲ್ತಾನ್

  • ಸಚಿವ ಸತೀಶ್ ಜಾರಕಿಹೊಳಿ ಹುಟ್ಟುಹಬ್ಬ: ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ

ಚಾಮರಾಜನಗರ : ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿ ಹೊಳಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ಹೊರವಲಯದಲ್ಲಿರುವ ಯಡಬೆಟ್ಟದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು. 20ಕ್ಕೂ ಹೆಚ್ಚು ಮಂದಿ ಯುವಕರು ರಕ್ತದಾನ ಮಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸತೀಶ್‌ ಜಾರಕಿಹೊಳಿ ಅಭಿಮಾನಿ ಬಳಗದ ಜುಹಾ ಸುಲ್ತಾನ್ ಮಾತನಾಡಿ, ಸತೀಶ್ ಜಾರಕಿ ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ರಕ್ತ ದಾನ ಶಿಬಿರವನ್ನು ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಬುದ್ಧ, ಬಸವ, ಅಂಬೇಡ್ಕ‌ರ್ ಸಿದ್ಧಾಂತಗಳ ಹಾದಿಯಲ್ಲಿ ಸಾಗುತ್ತಿರುವ ಅವರಿಗೆ ಭಗವಂತ ಹೆಚ್ಚಿನ ಆರೋಗ್ಯ ಆಯಸ್ಸು ಕರುಣಿಸಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾಗುವ ಭಾಗ್ಯ ಕರಣಿಸಲಿ ಎಂದು ಆಶಿಸಿದರು.
ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದು, ಎಲ್ಲ ಜಾತಿ, ಧರ್ಮಗಳೊಂದಿಗೆ ಉತ್ತಮ ಬಾಂದವ್ಯವನ್ನು ಬೆಳಸಿಕೊಂಡಿರುವ
ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮಾಡುವ ಜೊತೆಗೆ ಪ್ರಬಲವಾದ ಸಚಿವ ಖಾತೆ ನೀಡಬೇಕು ಆಗ ಸಾಮಾಜಿಕ‌
ನ್ಯಾಯ ದೊರೆತಂತಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡಮಟ್ಟದ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸತೀಶ್ ಜಾರಕಿ ಅಭಿಮಾನಿ ಬಳಗದ ಮನ್ಸೂರ್, ಸುನೀಲ್, ಜಬಿ,ವಿಷ್ಣು, ಮುತ್ತುರಾಜು, ಯೋಗೇಶ್ವರ, ಸಾಗರ್, ಮಂಜುನಾಯಕ, ಕೆಂಪರಾಜು, ನಾಗೇಂದ್ರ, ಶಿವಶಂಕ‌ರ್, ಸ್ವಾಮಿ ದೀಪಕ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *