ಎನ್.ಮಹೇಶ್ ರಾಜಕೀಯ ಭವಿಷ್ಯ ಅತ್ಯುತ್ತಮವಾಗಲಿ : ಪರ್ವತ್‌ರಾಜ್

  • ಮಾಜಿ ಸಚಿವ ಎನ್.ಮಹೇಶ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಚಾಮರಾಜನಗರ: ಮಾಜಿ ಸಚಿವರು, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವರಾಜ್ ಮಾತನಾಡಿ, ನಮ್ಮ ನೆಚ್ಚಿನ ನಾಯಕರು, ಮಾರ್ಗದರ್ಶಕರಾದಂತಹ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರಾದ ಎನ್.ಮಹೇಶ್ ಅವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಬಳಗದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಗಿದೆ. ಅವರಿಗೆ ಭಗವಾನ್ ಬುದ್ದರಿಂದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು, ಎಲ್ಲ ಪೂರ್ವಿಕರ ವತಿಯಿಂದ ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಲಿ, ಅವರ ಮುಂದಿನ ರಾಜಕೀಯ ಜೀವನ ಅತ್ಯುತ್ತಮವಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಎನ್.ಮಹೇಶ್ ಅಭಿಮಾನಿ ಬಳಗದ ನಿವೃತ್ತ ಯೋಧ ಮಹದೇವಸ್ವಾಮಿ, ಗ್ರಾ.ಪಂ.ಮಾಜಿ ಸದಸ್ಯ ಶಿವಪ್ರಸಾದ್‌, ಕೆಲ್ಲಂಬಳ್ಳಿ ಶಿವು, ಮಹದೇವಸ್ವಾಮಿ ಕಲರ್, ಕಲಾವಿದ ಹರೀಶ್, ವೆಂಕಟೇಶ್, ಪ್ರಸನ್ನ, ಜನಾರ್ಧನ್ ರಾಮಸಮುದ್ರ, ಶಿವಮೂರ್ತಿ, ಕೃಷ್ಣಮೂರ್ತಿ, ವೆಂಕಟೇಶ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *