ಬಸವಮಾರ್ಗ ಉಚಿತ ಕುಡಿತ ಬಿಡಿಸುವ ಶಿಬಿರಕ್ಕೆ ಚಾಲನೆ : ಆ. 19ರ ವರೆಗೆ ಕ್ಯಾಂಪ್

ಮೈಸೂರು : ದಿವಂಗತ ಸೋನಿ ಎಂ. ಕರೀಗೌಡ ಅವರ 27ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಿAದ ಆಗಸ್ಟ್ 9 ರಿಂದ ಆಗಸ್ಟ್ 19ರ ವರೆಗೆ ಹಮ್ಮಿಕೊಂಡಿರುವ ಕುಡಿತ ಬಿಡಿಸುವ ಉಚಿತ ಶಿಬಿರಕ್ಕೆ ಭಾನುವಾರ ಚಾಲನೆ ಸಿಕ್ಕಿತು.

ದಾರವಾಡ, ರಾಯಚೂರು, ಗುಲ್ಬರ್ಗ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಂಗಳೂರು, ಕೋಲಾರ, ಬೆಂಗಳೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ನಾನಾ ಭಾಗಗಳಿಂದ ಶಿಬಿರಾರ್ಥಿಗಳು ಆಗಮಿಸಿದ್ದರು. ಮೊದಲ ದಿನ ಶಿಬಿರಾರ್ಥಿಗಳನ್ನು ದಾಖಲಾತಿ ಮಾಡಿಕೊಂಡು ಅವರಿಗೆ ವಿವಿಧ ಪರೀಕ್ಷೆಗಳನ್ನು ನಡೆಸಿ, ವೈದ್ಯಕೀಯ ಉಪಚಾರಗಳನ್ನು ಮಾಡಲಾಯಿತು.

ಈ ವೇಳೆ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು, ಬಸವಮಾರ್ಗ ಫೌಂಡೇಷನ್ ವ್ಯಸನಮುಕ್ತ ಸಮಾಜ ನಿರ್ಮಾಣ ಕನಸಹೊತ್ತು ಮುನ್ನೆಡೆಯುತ್ತಿದೆ. ಕಳೆದ ಆರು ವರ್ಷಗಳಲ್ಲಿ 58 ಶಿಬಿರವನ್ನು ಉಚಿತವಾಗಿ ಆಯೋಜಿಸಿಕೊಂಡು ಬರಲಾಗಿದೆ. ಈಗ ನಮ್ಮ ತಾತ ದಿ.ಸೋನಿ ಎಂ.ಕರೀಗೌಡ ಅವರ 27ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ 59ನೇ ಕುಡಿತ ಬಿಡಿಸುವ ಶಿಬಿರವನ್ನು ಆಯೋಜಿಸಲಾಗಿದೆ. 10 ದಿನಗಳ ಕಾಲ ನಡೆಯುವ ಈ ಉಚಿತ ಶಿಬಿರದಲ್ಲಿ ವಸತಿಯುಕ್ತ ಊಟದ ವ್ಯವಸ್ಥೆ ಇರಲಿದೆ. ಯೋಗ, ಧ್ಯಾನ, ತರಗತಿಗಳು, ಮನೋರಂಜನೆ, ಕ್ರೀಡೆ, ಮೀಟಿಂಗ್, ವೈದ್ಯಕೀಯ ಚಿಕಿತ್ಸೆಯ ಮೂಲಕ ವ್ಯಸನಿಯ ಮನಃಪರಿವರ್ತನೆ ಮಾಡಲಾಗುತ್ತದೆ. ಆ ಮೂಲಕ ಅವರನ್ನು ವ್ಯಸನದ ಕೂಪದಂದ ಹೊರ ತಂದು ಸಮಾಜ ಹಾಗೂ ಕುಟುಂಬದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ವೇದಿಕೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *