ಬಸವಮಾರ್ಗ ಉಚಿತ ಬೇಸಿಗೆ ಶಿಬಿರ ಸಮಾರೋಪ

  • ಮಕ್ಕಳು ದೇಶಕ್ಕೆ ಆಸ್ತಿಯಾಗಲಿ
  • ಸಂಸ್ಥಾಪಕ ಎಸ್. ಬಸವರಾಜು ಸಲಹೆ

ಮೈಸೂರು : ಬಸವಮಾರ್ಗ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಒಂದು ತಿಂಗಳ ವಸತಿ ಸಹಿತ ಉಚಿತ ಬೇಸಿಗೆ ಶಿಬಿರ ಶನಿವಾರ ಸಂಜೆ ಸಮಾರೋಪಗೊಂಡಿತು.

ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ಫೌಂಡೇಷನ್‌ನ ಆಶ್ರಮ ಶಾಖೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಎಸ್. ಬಸವರಾಜು, ವ್ಯಸನಮುಕ್ತ ಸಮಾಜ ನಿರ್ಮಾಣ ಕನಸಹೊತ್ತು ಮುಂದೆ ಸಾಗುತ್ತಿರುವ ಬಸವಮಾರ್ಗ ಸಂಸ್ಥೆ, ಬಾಲ್ಯದಲ್ಲೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿದರೆ ಸುಂದರ ಬದುಕು ಕಟ್ಟಬಹುದು ಎಂದು ಮನಗಂಡ ವಸತಿ ಸಹಿತವಾಗಿ, ಉಚಿತ ಬೇಸಿಗೆ ಶಿಬಿರವನ್ನು ಮಾಡಲಾಯಿತು. ಸಾಮಾನ್ಯವಾಗಿ ಬಡ ಮತ್ತು ಗ್ರಾಮಾಂತರ ಭಾಗದ ಮಕ್ಕಳಿಗೆ ಬೇಸಿಗೆ ಶಿಬಿರಗಳು ಮರಿಚಿಕೆಯಾಗೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಅವರಿಗೂ ಬೇಸಿಗೆ ಶಿಬಿರದಂತಹ ಸೌಲಭ್ಯಗಳು ಸಿಗಬೇಕು ಎಂದು ಮನಗಂಡು ಉಚಿತವಾಗಿ ಶಿಬಿರವನ್ನು ಅಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಶಿಬಿರ ಅಚ್ಚುಕಟ್ಟಾಗಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪಠ್ಯೇತರ ಚಟುವಟಿಕೆಯಲ್ಲಿ ಯೋಗ, ಆರ್ಟ್ ಆ್ಯಂಡ್ ಕ್ರಾಫ್, ಸಂಗೀತಾ, ನಾಟಕ, ಕರಾಟೆ, ಚೆಸ್ ಹಾಗೂ ಪಠ್ಯಚಟುವಟಿಕೆಯಲ್ಲಿ ಕನ್ನಡ, ಗಣಿತ, ಇಂಗ್ಲಿಷ್, ಹಿಂದಿ ಹಾಗೂ ವ್ಯಕ್ತಿತ್ವ ವಿಕಸನದಂತಹ ತರಗತಿಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಎಲ್ಲ ಕಾರ್ಯಕ್ರಮದಲ್ಲಿ ಚೆನ್ನಾಗಿ ಭಾಗವಿಸಿ ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಂಡುಕೊAಡಿದ್ದಾರೆ. ಶಿಬಿರದಲ್ಲಿ ಮೊಬೈಲ್ ಅಡಿಕ್ಷನ್ ದುಷ್ಪರಿಣಾಮ ಹಾಗೂ ತಂದೆ-ತಾಯಿ, ಶಿಕ್ಷಣ ಹಾಗೂ ಸಮಯದ ಮೌಲ್ಯಗಳನ್ನು ಮಕ್ಕಳು ತಿಳಿದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಶಿಬಿರದಲ್ಲಿ ಪವಾಡ ಬಯಲು ತಜ್ಞ ಡಾ. ಹುಳಿಕಲ್ ನಟರಾಜು ಅವರು ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸಿದರು. ಹಾವುಗಳ ಬಗ್ಗೆ ಉರುಗ ಸಂರಕ್ಷಕ ಸ್ನೇಕ್ ಶ್ಯಾಮ್ ಅವರು ಜಾಗೃತಿ ಮೂಡಿಸಿದರು. ಮಕ್ಕಳು ಮೃಗಾಲಯಕ್ಕೆ ಭೇಟಿ ನಾನಾ ಪ್ರಾಣಿಗಳನ್ನು ವೀಕ್ಷಿಸಿದರು. ಕುಂತಿ ಬೆಟ್ಟಕ್ಕೆ ಚಾರಣ ನಡೆಸಿ, ಸಾಹಸ ಪ್ರವೃತ್ತಿಯನ್ನು ಬೆಳಸಿಕೊಂಡರು. ಜಿಆರ್‌ಎಸ್ ಪ್ಯಾಂಟಸಿ ಪಾರ್ಕ್ಗೆ ಭೇಟಿ ನೀಡಿ, ವಿವಿಧ ಆಟಗಳನ್ನಾಡಿ ಖುಷಿಪಟ್ಟರು. ಬಡ ಮಕ್ಕಳು ಕೂಡ ಸ್ಟಾರ್ ಹೋಟಲ್‌ನಲ್ಲಿ ಊಟ ಮಾಡಬೇಕೆಂದು ಮೈಸೂರಿನ ಸ್ಠಾರ್ ಹೋಟಲ್‌ನಲ್ಲಿ ಊಟದ ವ್ಯವಸ್ಥೆ ಮಾಡಿಸಲಾಗಿತ್ತು ಎಂದು ತಿಳಿಸಿದರು.

ಮಕ್ಕಳಿಗೆ ಮೊಬೈಲ್ ಅಡಿಕ್ಷನ್ ದುಷ್ಪರಿಣಾ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಗೇರ್ ಸೈಕಲ್ ಮತ್ತು ಸ್ಮಾರ್ಟ್ವಾಚ್‌ಗಳನ್ನು ಉಡುಗರೆಯಾಗಿ ನೀಡಲಾಯಿತು. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದ್ದರು. ಮಕ್ಕಳಿಗೆ ನಿತ್ಯ ಯೋಗಾಭ್ಯಾಸ, ಪಠ್ಯ, ಪಠ್ಯೇತರ ಚಟುವಟಿಕೆ, ಈಜು ತರಗತಿಗಳು, ರಂಗ ಗೀತೆಗಳು, ಕ್ರೀಡೆಗಳನ್ನು ಆಡಿಸಲಾಗಿತ್ತು. ರಾಗಿಮುದ್ದೆ, ನಾಟಿ ಕೋಟಿ ಸಾರು ಉಣ್ಣುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಶಿಬಿರಾರ್ಥಿಗಳಿಗೆ ನಗದು ಬಹುಮಾನಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಬಸವಮಾರ್ಗ ಸಂಸ್ಥೆ ಮೇಲೆ ನಂಬಿಕೆ ಇಟ್ಟು ರಾಜ್ಯಾದ್ಯಂತ ಪಾಲಕರು ಮಕ್ಕಳನ್ನು ನಮ್ಮ ಸಂಸ್ಥೆಗೆ ಬಿಟ್ಟಿದ್ದರು. ಇಲ್ಲೆ ಅವರಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮಕ್ಕಳಿಗೆ ನಿತ್ಯ ಬಗೆ, ಬಗೆಯ ಪೌಷ್ಠಿಕ ಸಲಾಡ್, ತಿಂಡಿಗಳನ್ನು ನೀಡಲಾಗುತ್ತಿತ್ತು. ಸಸ್ಯಾಹಾರದ ಜತೆ ವಾರದಲ್ಲಿ ಮೂರುಬಾರಿ ಮಾಂಸಹಾರ ನೀಡಲಾಗುತ್ತಿತ್ತ. ಹಾಲು, ಮೊಟ್ಟೆ, ತರಕಾರಿ ಸಲಾಡ್‌ಗಳನ್ನು ನೀಡಲಾಗುತ್ತಿತ್ತು. ಮಕ್ಕಳು ಇಲ್ಲಿಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮನೆಗೆ ತೆರಳಿದ ಬಳಿಕವೂ ಇದೇ ದಿನಚರಿಯನ್ನು ಪಾಲನೆ ಮಾಡಬೇಕು. ಆಗಿದ್ದರಷ್ಟೆ ವ್ಯಕ್ತಿತ್ವ ನಿರ್ಮಾಣವಾಗಿ ನೀವು ದೇಶಕ್ಕೆ ಆಸ್ತಿಯಾಗಲು ಸಾಧ್ಯ ಎಂದು ಶುಭಕೋರಿದರು.

ಗಮನ ಸೆಳೆದ ಪ್ರದರ್ಶನ : ಮಕ್ಕಳು, ಮೊಬೈಲ್ ಅಡಿಕ್ಷನ್ ಕುರಿತು ಮಕ್ಕಳೆ ಮನೋಜ್ಞಾವಾಗಿ ನಾಟಕ ಪ್ರದರ್ಶನ ಮಾಡಿ ನೋಡುಗರ ಗಮನ ಸೆಳೆದರು. ಬೇಸಿಗೆ ಶಿಬಿರದಲ್ಲಿ ಜೆಂಬೆ, ನಗಾರಿ ಕಲಿತ್ತಿದ್ದ ಮಕ್ಕಳು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಎಲ್ಲರನ್ನು ಕುಣಿಯುವಂತೆ ಮಾಡಿತು. ಶಿಬಿರದಲ್ಲಿ ಯೋಗಾಸನ ಕಲಿತ್ತಿದ್ದ ಮಕ್ಕಳು ವೇದಿಕೆ ಮೇಲೆ ಯೋಗ ವಿನ್ಯಾಸದ ಬಂಗಿಗಳನ್ನು ಪ್ರದರ್ಶನ ಮಾಡಿ ನೋಡುಗರಿಂದ ಚೆಪ್ಪಾಳಿ ಗಿಟ್ಟಿಸಿಕೊಂಡರು. ಮಕ್ಕಳೇ ತಯಾರಿಸಿದ್ದ ಚಿತ್ರಕಲಾ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. ಶಿಬಿರದಲ್ಲಿ ಈ ಮಕ್ಕಳಿಗೆ ಶಿಕ್ಷಕರಾದ ವಿಶ್ವನಾಥ್, ಕಿರಣ್, ರಕ್ಷಿತ್ ಅವರು ತರಬೇತಿ ನೀಡಿದ್ದರು. ಉಚಿತ ಶಿಬಿರದ ಹಿನ್ನೆಲೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ವಿದ್ಯಾರ್ಥಿಗಳಿಗೆ ಫೋಟೊ ಫ್ರೆಮ್‌ಗಳನ್ನು ನೆನಪಿನ ಕಾಣಿಕೆಯನ್ನಾಗಿ ನೀಡಿದರು. ಶಿಬಿರದಲ್ಲಿ ಬೋಧನೆ ಮಾಡಿದ್ದ ಡಾ.ಸುನೀಲ್, ಎಸ್.ಎಸ್.ಭಟ್, ನಿರಂಜನ್ ಅರಸ್, ಪುನೀತಾ, ಕೌಸಲ್ಯ, ಜ್ಯೋತಿ, ವಿಶ್ವನಾಥ್, ಕಿರಣ್, ಗಗನಾ, ರಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ಎಸ್.ಬಸವರಾಜು ಅವರಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿದರು.

ಬಸವಮಾರ್ಗ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ವಸತಿ ಸಹಿತ ಉಚಿತ ಬೇಸಿಗೆ ಶಿಬಿರ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಸಂಗೀತಾ ಕಛೇರಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಬಾಬು ಗೌಡ, ಸುಪ್ರೀತ್, ಕಾರ್ತಿಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *