ಕೋಡಿಮೋಳೆ ಗ್ರಾಮದಲ್ಲಿ ಭಗತ್ ಸಿಂಗ್ ಅವರ 119ನೇ ಜನ್ಮದಿನ ಆಚರಣೆ

ಚಾಮರಾಜನಗರ: ಕೋಡಿಮೋಳೆ ಗ್ರಾಮದಲ್ಲಿ ಭಗತ್ ಸಿಂಗ್ ಯುವಸೇನೆ ವತಿಯಿಂದ ಗ್ರಾಮದ ಭಗತ್ ಸಿಂಗ್ ನಾಮಫಲಕದ ಬಳಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಇಂಕ್ವಿಲಾಬ್ ಜಿಂದಾಬಾದ್ , ಭಗತ್ ಸಿಂಗ್ ಅಮರ್ ರಹೇ ಎಂಬ ಘೋಷವಾಕ್ಯಗಳ ಮೂಲಕ ಧೀರ ಹುತಾತ್ಮ ಭಗತ್ ಸಿಂಗ್ ಅವರ ಜನ್ಮ ದಿನೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಗತ್ ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು ಭಾರತದ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರು ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತಮ್ಮ 23ನೇ ವಯಸ್ಸಿಗೆ ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಇಂತಹ ಕ್ರಾಂತಿಕಾರಿ ಹೋರಾಟಗಾರ ಆದರ್ಶ ಮತ್ತು ಮಹನೀಯರ ಚರಿತ್ರೆಗಳನ್ನು ಚಿಂತನೆಗಳನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು
ಶಿವು ರಾಜೇಂದ್ರ, ಪ್ರಸಾದ್, ರವಿ, ಮಹೇಶ್, ಮಲ್ಲೇಶ್, ನಂಜಪ್ಪ, ಪ್ರಕಾಶ್ ಸೇರಿದಂತೆ ಇತರರು ಇದ್ದರು,

Leave a Reply

Your email address will not be published. Required fields are marked *