ಮಿಮಿಕ್ರಿಗೋಪಿಗೆ ಹುಟ್ಟುಹಬ್ಬದ ಸಂಭ್ರಮ : ರವಿಸಂತು ಬಳಗದಿಂದ ಸನ್ಮಾನ

  • ಕೇಕ್ ಕತ್ತರಿಸಿ ಹಂಚಿ, ಮಿಮಿಕ್ರಿ ಮಾಡುವ ಮೂಲಕ ಸ್ನೇಹಿತರನ್ನು ನಕ್ಕು, ನಗಿಸಿದ ಗೋಪಿ.                   
  • ಡಾ.ರಾಜ್‌ಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ವಾಟಾಳ್‌ನಾಗರಾಜ್ ಸಂಭಾಷಣೆ

ಚಾಮರಾಜನಗರ : ಮಿಮಿಕ್ರಿ ಗೋಪಿ ಅವರ 47ನೇ ಹುಟ್ಟುಹಬ್ಬದ ಅಂಗವಾಗಿ ಅವರನ್ನು ರವಿಸಂತು ಬಳಗದಿಂದ ಸನ್ಮಾನಿಸಿ ಶುಭ ಕೋರಲಾಯಿತು.
ನಗರದ ರಾಮಸಮುದ್ರದಲ್ಲಿರುವ ಚಿತ್ರಕ ಇವಿ ಮೋಟಾರ್ಸ್ ಶೋರೂಂನಲ್ಲಿ ರವಿಸಂತು ಬಳಗ ಅಯೋಜಿಸಿದ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಕೇಕ್ ಕತ್ತರಿಸಿ ಹಂಚಿ, ಡಾ.ರಾಜ್‌ಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡ ಚಳುವಳಿಗಾರ ವಾಟಾಳ್‌ ನಾಗರಾಜ್ ಸಂಭಾಷಣೆ ಮಿಮಿಕ್ರಿ ಮಾಡುವ ಮೂಲಕ ಸ್ನೇಹಿತರನ್ನು ನಕ್ಕು ನಗಿಸಿದರು. ಅವರ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ ರವಿಸಂತು ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಹುಟ್ಟಹಬ್ಬದ ಶುಭಾಶಯದ ಮಹಾಪೂರ : ಮಿಮಿಕ್ರಿ ಗೋಪಿ ಅವರಿಗೆ ರವಿಹಂತು ಬಳಗ ಸನ್ಮಾನಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಚಿತ್ರಕ ಇಬಿ ಮೋಟರ್ಸ್ ಮಾಲೀಕ ಎಸ್. ಸುರೇಶ್,  ಗೌಡಿಕೆ ಸುರೇಶ್, ಕೆ.ವೀರಭದ್ರ ಸ್ವಾಮಿ, ಅಂತಾರಾಷ್ಟ್ರೀಯ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಈಶ್ವರಿ ವೆಂಕಟೇಶ್, ಕಲೆ ನಟರಾಜು,ಗಾಳೀಪುರ ಮಂಜು, ಅರ್ಜುನ್ , ಜಿ.ಬಂಗಾರು, ಸುಂದರ್, ವಕೀಲ ಎ.ಎಸ್.ಸಿದ್ದರಾಜು, ಶಿಕ್ಷಕ ಬಸವಯ್ಯ, ಶಿಕ್ಷಕಿ ನಂದಿನಿ, ಮಮತ, ಸಿದ್ದರಾಜು, ಮಲ್ಲಣ್ಣ, ಕೇಬಲ್ ರಾಘು, ಕೂಡ್ಲೂರು ರಂಗಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *