- ಶ್ರೀ ಶಿರಡಿ ಸಾಯಿಬಾಬಾ, ಧ್ಯಾನಾಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ, ಅನ್ನಸಂತರ್ಪಣೆ
ಚಾಮರಾಜನಗರ: ನಗರದ ಹೌಸಿಂಗ್ ಬೋರ್ಡ್ ನ ಫಾರೆಸ್ಟ್ ನರ್ಸರಿ ಪಕ್ಕದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಶ್ರೀ ಧ್ಯಾನಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ದ್ವಿತೀಯ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಸೋಮವಾರದಂದು ದೇವಸ್ಥಾನದಲ್ಲಿ ಸಂಜೆ
ಶ್ರೀ ಗಣಪತಿ ಪೂಜಾ, ಪುಣ್ಯಾಹ, ಪಂಚಗವ್ಯ, ನಾಂದಿ, ಆದಿತ್ಯಾದಿ ನವಗ್ರಹ ಪುರಸ್ಸ
ರ ಕಳಸಸ್ಥಾಪನೆ. ಪಂಚ ಸೂಕ್ತ ಪಾರಾಯಣ, ಮಹಾ ಮಂಗಳಾರತಿ ನೆರವೇರಿತು.
ಇಂದು ಬೆಳಗ್ಗೆ 6.00 ಗಂಟೆಗೆ ಶ್ರೀ ಗಣಪತಿ ಪೂಜೆ ಕಳಸಗಳಿಗೆ ಪುನಃಪೂಜೆ, ಶ್ರೀ ಗಣಪತಿ, ಶ್ರೀ ನವಗ್ರಹ, ಮೃತ್ಯುಂಜಯ, ಶ್ರೀ ಆಂಜನೇಯಸ್ವಾಮಿಗೆ ಪವಮಾನ, ಶ್ರೀ ಸುಬ್ರಮಣ್ಯ, ಶ್ರೀ ಸಾಯಿಬಾಬಾ ರವರಿಗೆ, ಶ್ರೀ ಚಾಮರಾಜೇಶ್ವರ ಹಾಗೂ ಅಮ್ಮನವರಿಗೆ, ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ರವರ ಹೋಮಗಳು ನೆರವೇರಿತು. ಮಧ್ಯಾಹ್ನ 12.30ಕ್ಕೆ ಪೂಜಾ ಮತ್ತು ಮಹಾ ಮಂಗಳಾರತಿ ನಡೆಯಿತು. ದೇವಸ್ಥಾನಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ
ಶ್ರೀಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಕಾರ್ಯಾಧ್ಯಕ್ಷ ಉಮೇಶ್ ಎಸ್ ಪಿಕೆ, ಪ್ರಧಾನ ಕಾರ್ಯದರ್ಶಿ ರಾಜು ಎಸ್ ಪಿಕೆ, ಉಪಾಧ್ಯಕ್ಷ ಎಂ.ರಾಜು, ಕೃಪಾಶಂಕರ್, ಪದಾಧಿಕಾರಿಗಳು, ಭಕ್ತರು ಹಾಜರಿದ್ದರು.