ಹೆಚ್. ಎಸ್.ಮಹದೇವಪ್ರಸಾದ್ ಜನಪರ ಕೆಲಸ ಶಾಶ್ವತ: ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್

  • ಉಚಿತ ಕಣ್ಣಿನ ತಪಾಸಣೆ ಶಿಬಿರ ಯಶ್ವಸಿ,  300ಮಂದಿ ತಪಾಸಣೆ, 130 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ

ಚಾಮರಾಜನಗರ: ಮಾಜಿ ಸಚಿವ ದಿವಗಂತ    ಹೆಚ್.ಎಸ್.ಮಹದೇವಪ್ರಸಾದ್  ಅವರು ಮಾಡಿರುವ ಜನಪರ ಕೆಲಸ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿದಿದೆ ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
   ತಾಲೂಕಿನ ಹರವೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ  ಮಾಜಿ ಸಚಿವ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರ 68ನೇ ಜನ್ಮದಿನ ಪ್ರಯುಕ್ತ ಅಭಿಮಾನಿ ಬಳಗ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಅರವಿಂದ ಕಣ್ಣಾಸ್ಪತ್ರೆ ಕೊಯಮತ್ತೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹದೇವಪ್ರಸಾದ್ ರಾಜಕಾರಣ ಮತ್ತು ಸೇವೆ ಹೆಚ್ಚು ಪ್ರಚಲಿತವಾಗಿದ್ದು, ಅವರು 2 ಬಾರಿ ಸಚಿವರು, 5 ಬಾರಿ ಶಾಸಕರಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅವರು ತಂದಂತಹ ಯೋಜನೆಗಳು ಜಿಲ್ಲೆಯ ಅಭಿವೃದ್ಧಿ ಪೂರಕವಾಗಿದೆ ಎಂದರು.
    ನಮ್ಮ ತಂದೆ ಮಹದೇವಪ್ರಸಾದ್ ಜೊತೆ ದಿವಗಂತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಜೊತೆಗೂಡಿ ಜಿಲ್ಲೆಗೆ ಅಭಿವೃದ್ಧಿಗೆ ಒತ್ತು ನೀಡಿದ್ದರು ಅವರ ದಾರಿಯಲ್ಲಿ ಸಾಗೋಣ. ಅಭಿವೃದ್ಧಿ ನಿಂತ ನೀರಲ್ಲ. ನಿರಂತರವಾಗಿ ಜನರ ಆಶೋತ್ತರ
ರಗಳಿಗೆ ಸ್ಪಂದಿಸುವ ಕೆಲಸ ಮಾಡೋಣ ಎಂದರು.
ನಮ್ಮ ತಂದೆಯವರಾದ ಮಹದೇವಪ್ರಸಾದ್ ಅವರ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗವು ಪ್ರತಿವರ್ಷದಂತೆ ಈ ವರ್ಷವೂ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಅಯೋಜಿಸಿರುವುದು ಒಂದು ಉತ್ತಮವಾದ ಸಮಾಜಮುಖಿ ಕಾರ್ಯವಾಗಿದೆ.
ಕಾರ್ಯಕ್ರಮ ಅಯೋಜಿಸಿರುವ ಮಹದೇವಪ್ರಸಾದ್ ಅಭಿಮಾನಿ ಬಳಗಕ್ಕೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಹರವೆ ವಿರಕ್ತ ಮಠದ ಶ್ರೀಸರ್ಪಭೂಷಣ ಸ್ವಾಮೀಜಿ ಮಾತನಾಡಿ, ದಿವಂಗತ ಮಾಜಿ ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್ ಅವರು ಅಭಿವೃದ್ಧಿ ಹರಿಕಾರರಾಗಿದ್ದು,  ಅಪರೂಪದ ರಾಜಕಾರಣಿಯಾಗಿದ್ದರು.ಅವರು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಛಾಪು ಮೂಡಿಸಿದ್ದಾರೆ ಎಂದರು
  ಅಯೋಜಕ ಹೆಚ್.ಎಸ್.ಮಹದೇವಪ್ರಸಾದ್ ಅಭಿಮಾನಿ ಬಳಗದ ಅಧ್ಯಕ್ಷ ಕೆರೆಹಳ್ಳಿ ನವೀನ್ ಮಾತನಾಡಿ, ಮಹದೇವಪ್ರಸಾದ್ ಅವರು 25 ವರ್ಷಗಳ ಕಾಲ ಶಾಸಕರಾಗಿ 3 ಬಾರಿ ಸಚಿವರಾಗಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಅಭಿವೃದ್ಧಿ ಹರಿಕಾರರಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು
  ಕಳೆದ 13 ವರ್ಷಗಳಿಂದಲ್ಲೂ ನಿರಂತರವಾಗಿ ಮಹದೇವಪ್ರಸಾದ್ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಮುಖಿ ಸೇವಾ ಕಾರ್ಯಗಳನು ಮಾಡಿಕೊಂಡು ಬರಲಾಗಿದೆ. ಕಣ್ಣಿನ ತಪಾಸಣಾ ಶಿಬಿರ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಬಡಮಕ್ಕಳ ವಿದ್ಯಾಭ್ಯಾಸ ಕ್ಕೆ ಸ್ಪಂದಿಸಲಾಗುತ್ತದೆ ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿ ಸೇವಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.
ಉಚಿತ ಕಣ್ಣಿನ ತಪಾಸಣೆ ಶಿಬಿರ ಯಶ್ವಸಿ: ಮಾಜಿ ಸಚಿವ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರ 68ನೇ ಜನ್ಮದಿನ ಪ್ರಯುಕ್ತ ಅಭಿಮಾನ ಬಳಗದ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ ಯಾಗಿ ನಡೆದು, 300ಮಂದಿ ತಪಾಸಣೆ ಮಾಡಿಸಿಕೊಂಡರು. 130 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ,  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ ಕೆಂಗಾಕಿ,
ತಾ.ಪಂ.ಮಾಜಿ ಸದಸ್ಯ ಮುಕ್ಕಡಹಳ್ಳಿ ರವಿಕುಮಾರ್, ಉದಯ್ ಕುಮಾರ್, ಬಿ.ಕೆ.ರವಿಕುಮಾರ್, ಮಾಸ್ಟರ್ ಮಾದಪ್ಪ, ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬೆಳ್ಳೇಗೌಡ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಧುಸೂದನ್, ನಾಗೇಶ್, ರಂಗಸ್ವಾಮಿ, ಬಸವರಾಜು, ಪಿಆರ್ ಓ ವಿಜಯಕಾಂತ್, ಬಸವಣ್ಣ, ರಾಜಕುಮಾರ, ಕೆರೆಹಳ್ಳಿ ರೇವಣ್ಣ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *