ಹೆಗ್ಗೋಠಾರ ಎಂಪಿಸಿಎಸ್ ; ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ.
ಚಾಮರಾಜನಗರ: ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಸೋಮವಾರ ಹಾಲುಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ಉದ್ಘಾಟಿಸಿ ಮಾತನಾಡಿ, ಡೇರಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಉತ್ಪಾದಕರಿಗೆ ಉತ್ತಮದರ ಸಿಗುವ ಜೊತೆಗೆ ಒಕ್ಕೂಟಗಳು ಹಾಗೂ ಸಂಘಗಳು ಅಭಿವೃದ್ದಿಯತ್ತ ಸಾಗಲಿವೆ ಡೇರಿಗಳು ಸುಭದ್ರವಾಗಿದ್ದರೆ, ಒಕ್ಕೂಟವು ಸಹ ಅಭಿವೃದ್ದಿಪಥದಲ್ಲಿ ಮುನ್ನಡೆಯಲಿದೆ. ಹೀಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಹಾಲುಉತ್ಪಾದಕರ ಸಂಘದ ಸದಸ್ಯರಿಗೆ ಒಕ್ಕೂಟದಿಂದ ಹಲವು ಸೌಲಭ್ಯಗಳಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ ಈ ಭಾಗದಲ್ಲಿ ಹೈನುಗಾರಿಕೆ ಪ್ರಧಾನ ಕಸುಬಾಗಿದ್ದು, ಇದರಿಂದ ತಮ್ಮ ಜೀವನ ನಿರ್ವಹಣೆ ಸಾಧ್ಯವಾಗುತ್ತಿದೆ. ತಾವು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘಗಳ ಉಳಿವಿಗೆ ಮುಂದಾಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡೇರಿ ಅಧ್ಯಕ್ಷ ನಂಜುAಡಸ್ವಾಮಿ ಮಾತನಾಡಿ, ಸಂಘ ಉತ್ತಮ ವಹಿವಾಟು ನಡೆಸಿದ ಪರಿಣಾಮ ಈ ವರ್ಷ ೧೩.೩೨ ಲಕ್ಷ ರೂ. ನಿವ್ವಳಲಾಭ ಗಳಿಸಿದೆ. ೨೦೧೯ರಿಂದ ೨೬ರವರೆಗೆ ೮ ವರ್ಷಗಳ ಅವಧಿಯ ಬೋನಸ್ ಹಣವನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.
ಚಾಮುಲ್ ವಿಸ್ರಣಾಧಿಕಾರಿ ಶಾಂಸುAದರ್ ಸಂಘದ ೨೦೧೭-೧೮. ೨೪-೨೫ ನೇ ಸಾಲಿನ ಆಡಿಟ್ ವರದಿ ಮಂಡಿಸಿದರು. ಉಪಾಧ್ಯಕ್ಷ ಪಾಪನಾಯಕ, ನಿರ್ದೇಶಕರಾದ ಗುರುಮಲ್ಲಪ್ಪ, ಮಲ್ಲೇಶ, ಎಚ್.ಬಿ.ಮಹೇಶ್, ಎಂ.ಮಹೇಶ್, ರಮೇಶ, ಪರಶಿವಮೂರ್ತಿ, ಪುಟ್ಟಮಲ್ಲಪ್ಪ, ಮಹದೇವಯ್ಯ ಸುಬ್ಬಮ್ಮ ಚಾಮುಲ್ ಉಪವ್ಯವಸ್ಥಾಪಕ ಎನ್.ಅಮರ್. ಸಮಾಲೋಚಕ ಹೇಮಂತಕುಮಾರ್, ಸಿಇಒ ಮಹೇಶ್, ಹಾಲು ಪರೀಕ್ಷಕ ಮಹದೇವಸ್ವಾಮಿ, ಸಹಾಯಕ ಮಾಯಪ್ಪ ಗ್ರಾಮದ ಹಾಲು ಉತ್ಪಾದಕ ಸಹಕಾರಸಂಘದ ಸದಸ್ಯರು ಹಾಜರಿದ್ದರು.
