ಆರ್ಥಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಸೌಹಾರ್ದ ಸಹಕಾರ ಸಂಘಗಳ ಪ್ರಮುಖ ಪಾತ್ರ: ಕೆ ವೀರಭದ್ರಸ್ವಾಮಿ

ಚಾಮರಾಜನಗರ: ಚಾಮರಾಜನಗರದ ಶ್ರೀ ಅಕ್ಷಯಶ್ರೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ. 2025-26 ನೇ ಸಾಲಿನ ಸರ್ವಸದಸ್ಯರ ಮಹಾಸಭೆ ಮಂಗಳವಾರ ನಡೆಯಿತು.

ಇಲ್ಲಿನ ಭ್ರಮರಾಂಬ ಬಡಾವಣೆಯಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ ವೀರಭದ್ರಸ್ವಾಮಿ ಮಾತನಾಡಿ ಸಮಾಜದ ಆರ್ಥಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಸೌಹಾರ್ದ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಬಡ ಹಾಗು ಮಧ್ಯಮವರ್ಗದ ಜನರ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಮ್ಮ ಶ್ರೀ ಅಕ್ಷಯಶ್ರೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ ಸಾಲ ಸೌಲಭ್ಯ ನೀಡುತ್ತಾ ಬಂದಿದೆ. ಕಳೆದ 11 ವರ್ಷಗಳ ಹಿಂದೆ ಸ್ಥಾಪನೆಯಾದ ನಮ್ಮ ಸೌಹಾರ್ದ ಸಹಕಾರಿ ಸಂಘ ನೂರಾರು ಮಂದಿಯ ಜೀವನೋಪಾಯಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂದರು.‌

ಸೌಹಾರ್ದ ಸಹಕಾರ ಸಂಘಗಳಿಗೆ ಸರ್ಕಾರದ ಯಾವುದೇ ಸವಲತ್ತು ಸಿಗುವುದಿಲ್ಲ, ಸದಸ್ಯರೇ ಮಾಲೀಕರಾಗಿದ್ದು ಷೇರುದಾರರಾಗುವ ಮೂಲಕ ಹಾಗು ನಿಶ್ಚಿತ ಠೇವಣೆ ಹಾಗು ಪಿಗ್ಮಿ ಕಟ್ಟುವ ಮೂಲಕ ಸೌಹಾರ್ದ ಸಹಾಕಾರ ಸಂಘಗಳನ್ನು ಇನ್ನಷ್ಟು ಬಲಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ 6557 ಸೌಹಾರ್ದ ಸಹಕಾರ ಸಂಘಗಳಿದ್ದು 65 ಲಕ್ಷಕ್ಕು ಹೆಚ್ಚು ಸದಸ್ಯರಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸೌಹಾರ್ದ ಸಹಕಾರ ಸಂಘಗಳು ಕೇವಲ ಸಾಲಸೌಲಭ್ಯ ಅಷ್ಟೇ ಅಲ್ಲದೆ ಉತ್ಪಾದನಾ ವಲಯಕ್ಕು ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿ ತಮ್ಮದೇ ಆದ ಛಾಪು ಮೂಡಿಸಿದ್ದು ಅನುಕರಣೀಯವಾಗಕವೆ ಎಂದರು

ಇತರೆ ಕ್ಷೇತ್ರದ ಬ್ಯಾಂಕ್‌ಗಳಿಗಿಂತ ಸೌಹಾರ್ದ ಸಹಕಾರ ಸಂಘಗಳಲ್ಲಿ ಸರಳವಾಗಿ ಸಾಲಸೌಲಭ್ಯ ಪಡೆಯಬಹುದಾಗಿದ್ದು ಬಡ ಹಾಗು ಮಧ್ಯಮ ವರ್ಗದ ಜನರು ಇದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಅವರು ಮನವಿ ಮಾಡಿದರು

ಸಭೆಯಲ್ಲಿ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ಅಂಗೀಕರಿಸಿ 2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು. 2026_27 ನೇ ಸಾಲಿನ ಅಂದಾಜು ಆಯವ್ಯಯ ಪತ್ರವನ್ನು ಸಭೆಯಲ್ಲಿ ಅನುಮೋದಿಸಲಾಯಿತು

ಸಭೆಯಲ್ಲಿ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ವಕೀಲ ಮಹದೇವಸ್ವಾಮಿ, ನವ್ಯಕರ್ನಾಟಕ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆರ್ ಎನ್ ಸಿದ್ದಲಿಂಗಸ್ವಾಮಿ, ಶ್ರೀ ಅಕ್ಷಯಶ್ರೀ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷ ಲಿಂಗಪ್ಪ, ಎಸ್ ಎಂ ನಂದೀಶ್, ಎಂ ನಂಜುಂಡಸ್ವಾಮಿ, ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಮಲ್ಲೇಶ್ ಮೊದಲಾದವರು ಇದ್ದರು

ಚಾಮರಾಜನಗರ ಸೆ.22
ಚಾಮರಾಜನಗರದ ಶ್ರೀ ಅಕ್ಷಯಶ್ರೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ. 2025-26 ನೇ ಸಾಲಿನ ಸರ್ವಸದಸ್ಯರ ಮಹಾಸಭೆ ಮಂಗಳವಾರ ನಡೆಯಿತು.

Leave a Reply

Your email address will not be published. Required fields are marked *