ಬದನಗುಪ್ಪೆಯಲ್ಲಿ ಅದ್ಧೂರಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ

ಚಾಮರಾಜನಗರ : ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ನಾಯಕ ಸಮುದಾಯದ ವತಿಯಿಂದ 21ನೇ ವರ್ಷದ  ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
 ಗ್ರಾಮದ ನಾಯಕರ ಬೀದಿಯ ಶ್ರೀರಾಮಮಂದಿರದಲ್ಲಿ  ಶ್ರೀ ವಿದ್ಯಾಗಣಪತಿ ಮಂಡಳಿ, ನಾಯಕ ಸಮುದಾಯದ ವತಿಯಿಂದ ಗೌರಿಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿಗೆ 9 ದಿನಗಳಿಂದ ಪೂಜೆ ಸಲ್ಲಿಸಿ ಇಂದು ತೆರೆದ ಅಲಂಕೃತ ವಾಹನದಲ್ಲಿ ಕೂರಿಸಿ ವಿಶೇಷ ಅಲಂಕಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ, ಬೆಂಡರವಾಡಿ ಕೆರೆಯಲ್ಲಿ ವಿಸರ್ಜಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
  ಮೆರವಣಿಗೆಯಲ್ಲಿ ಕೇರಳದ ನಾಸಿಕ್ ಡೋಲು, ಬ್ಯಾಂಡ್ ಸೆಟ್ ಹಾಗೂ ವಿವಿಧ ಕಲಾತಂಡಗಳ  ಮೆರಗು ನೀಡಿತು. ಮೆರವಣಿಗೆಯಲ್ಲಿ ನಾಯಕ ಜನಾಂಗದ ಯಜಮಾನರುಗಳು ಕುಲಸ್ಥರು ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *