ಚಾಮರಾಜನಗರ : ಖ್ಯಾತ ಹಿನ್ನಲೆ ಗಾಯಕಿ ಎಸ್.ಜಾನಕಿ ಅವರು ಆಂಧ್ರಪ್ರದೇಶದವರಾಗಿದ್ದರೂ ಕೂಡ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾರಂಗಮಂದಿರದಲ್ಲಿ ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಕಾವೇಶಿಶಿವಕುಮಾರ್ ಅರ್ಪಿಸುವ ಹಶಿಕಾ ಮ್ಯೂಸಿಕಲ್ ಗಾನಲಹರಿ ಇವೆಂಟ್ಸ್., ಎಸ್.ಜಾನಕಿ ರವರ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಹುಭಾಷಾ ಗಾಯಕಿಯಾಗಿ ಎಸ್. ಜಾನಕಿ ಅವರು ಕನ್ನಡ ನಾಡು, ನುಡಿಯ ಬಗ್ಗೆ. ಅಪಾರ ಗೌರವ ಹೊಂದಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಆಂಧ್ರಪ್ರದೇಶದವರಾಗಿದ್ದರು. ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು, ಅವರು ಕನ್ನಡದಲ್ಲಿ ಸಾವಿರಾರು ಜನಪ್ರಿಯ ಗೀತೆಗಳನ್ನು ಹಾಡಿ ಕನ್ನಡಿಗರ ಮನೆ ಮಾತಾಗಿದ್ದರು. ಎಂದರು.
ವಿದ್ಯಾರ್ಥಿಜೀವನದಲ್ಲಿ ನಾವು ಈ ಕಲೆಗೆ ಮಾರುಹೋಗಿದ್ದೇವು. ಕನ್ನಡ ಚಲನಚಿತ್ರಗಳ ಮುಖಾಂತರ ಅನೇಕ ಪೌರಾಣಿಕ ಸಂಬಂಧಪಟ್ಟ ಚಿತ್ರಗಳನ್ನು ವೀಕ್ಷಣೆ ಮಾಡಿದ್ದೇವು ನಮ್ಮಲ್ಲಿ ಮೇರುನಟ ರಾಜ್ ಕುಮಾರ್ ಅವರು ನಮ್ಮ ಜಿಲ್ಲೆಯವರಾಗಿದ್ದರು ಕನ್ನಡಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದರು. ಅವರನ್ನು ಮರೆಯಲು ಸಾಧ್ಯವಿಲ್ಲ. ರಾಜ್ ಕುಮಾರ್ ಚಿತ್ರಗಳಲ್ಲಿ ಬಿ.ವಿ.ಶ್ರೀನಿವಾಸ ಅವರ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಿದ್ದೇವು. ನಂತರ ದಿನಗಳಲ್ಲಿ ಸ್ವತಹ ರಾಜ್ ಕುಮಾರ್ ಅವರೇ ಹಾಡು ಕೇಳುತ್ತಿದ್ದೇವು. ಎಸ್.ಬಿ.ಬಾಲಸುಬ್ರಹ್ಮಂ ಅವರು ಬಹಳ ಗಾನಕೋಗಿಲೆ ಅವರು ಹಾಡುಗಳನ್ನು ನೆನಪಿನಲ್ಲಿ ಉಳಿದಿವೆ ಎಂದರು.
ಕಲಾರಾಧನೆ ನಿರಂತರವಾಗಿರಲ್ಲಿ: ಕಿರುತೆರೆ ಗಾಯಕ ಶಶಿಧರ್‌ಕೋಟೆ ಮಾತನಾಡಿ,
ಕಲಾರಾಧನೆಯಲ್ಲಿ ನೀವೆಲ್ಲರೂ ತೊಡಗಿಸಿಕೊಂಡಿರುವುದು ಇದು ನನಗೆ ಬಹಳ ಸಂತಸವಾಯಿತು. ಸಂಗೀತ ಯಾವತ್ತು ದೌವಿಹವಾದದ್ದು. ಸಂಗೀತ ಎಂತಹ ಒತ್ತಡವನ್ನು… ಕಡಿಮೆ ಮಾಡುತ್ತದೆ. ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿದರು.
ಆಯೋಜಕಿ ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ಕಾವೇರಿಶಿವಕುಮಾರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಉದ್ಯಮಿ ಶ್ರೀನಿಧಿಕುದರ್, ಜ.ಸುರೇಶ್‌ನಾಗ್, ಸುರೇಶ್‌ಗೌಡ್ರು, ಗಾಯಕಿ ಪದ್ಮಾಕ್ಷಿ, ಸಿ.ರಂಗಸ್ವಾಮಿ ಇತರರು ಹಾಜರಿದ್ದರು.
