ಹಿಂದೂ ಧರ್ಮದಲ್ಲಿ ಮೊದಲಪೂಜೆಯ ಗೌರವ ಪಡೆದ ದೇವರು ಗಣೇಶ : ಎಂ.ಎಸ್.ಫೃಥ್ವಿರಾಜ್

ಚಾಮರಾಜನಗರ : ವಿಘ್ನನಿವಾರಕ ಗಣೇಶನಿಗೆ ಹಿಂದೂಧರ್ಮದಲ್ಲಿ ವಿಶೇಷ ಸ್ಥಾನಮಾನವಿದ್ದು, ಮೊದಲಪೂಜೆಯ ಗೌರವ ಪಡೆದ ದೇವರು ಎಂದು ಅಜಾದ್ ಹಿಂದೂ ಸೇನೆಯ ಎಂ.ಎಸ್.ಪೃಥ್ವಿರಾಜ್ ಹೇಳಿದರು.
ನಗರದ ಗಾಳಿಪುರ ಬಡಾವಣೆಯಲ್ಲಿ ಶ್ರೀವಿನಾಯಕ ಗೆಳೆಯ ಬಳಗದ ವತಿಯಿಂದ ಗೌರಿಗಹೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಣೇಶ ಉತ್ಸವವನ್ನು ಸಾಮರಸ್ಯದಿಂದ ಆಚರಣೆ ಮಾಡಿ. ಇದು ಎಲ್ಲರು ಒಗ್ಗಟ್ಟಿನಿಂದ ಮಾಡುವ ಹಬ್ಬ ಇದಾಗಿದೆ. ಯಾವುದೇ ದ್ವೇಷ ಮಾಡಬೇಡಿ. ಸೂಕ್ಷ್ಮ ಪ್ರದೇಶವಾದ ಗಾಳೀಪುರದಲ್ಲಿ ಗಣೇಶನಿಗೆ ವಿಶೇಷ ಸ್ಥಾನವಿದೆ. ಹಿಂದೂ ಸಂಪ್ರದಾಯ, ಆಚರಣೆಯನ್ನು ಪಾಲಿಸಿಕೊಂಡು ಹೋಗುತ್ತಿರುವ ಎಲ್ಲರಿಗೂ ಗೌರಿಗಣೇಶ ಹಬ್ಬದ ಶುಭಾಯಶ ಕೋರಿದರು.
ವಕೀಲರಾದ ಅಶೋಕ್‌ಪುರಂ ಜಯಶಂಕರ್, ಅಜಾದ್ ಹಿಂದೂ ಸೇನೆಯ ಮೈಸೂರು ಟೌನ್ ಅಧ್ಯಕ್ಷ ಪ್ರಶಾಂತ್‌ ಕುಮಾ‌ರ್, ಗ್ರಾಮಾಂತರ ಅಧ್ಯಕ್ಷ ಪ್ರಶಾಂತ, ಸದಸ್ಯ ಸಂತೋಷ್, ಚಾಮರಾಜನಗರ ಟೌನ್ ಅಧ್ಯಕ್ಷ ಪ್ರಭು, ಆನಂದ್‌, ಜಗದೀಶ್, ಶ್ರೀವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ದೀಪಕ್, ಪ್ರಕಾಶ್, ಮಹೇಂದ್ರ, ಕುಮಾರ್, ಸುಹಾನ್, ಮನು, ಬಂಗಾರನಾಯಕ, ವೆಂಕಟೇಶ್, ಬಸವರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *