ಹುಲಿದಾಳಿಯಿಂದ ಮೃತಪಟ್ಟ ಬಡಗಲಪುರ ರೈತ ಬಸವಣ್ಣ ನಿವಾಸಕ್ಕೆ ಉದ್ಯಮಿ ಶ್ರೀನಿಧಿಕುದರ್ ಭೇಟಿ

ಚಾಮರಾಜನಗರ: ಹುಲಿದಾಳಿಯಿಂದ ಮೃತಪಟ್ಟ ರೈತ ತಾಲೂಕಿನ ಬಡಗಲಪುರದ ಬಸವಣ್ಣ ನಿವಾಸಕ್ಕೆ ಉದ್ಯಮಿ, ಯೂತ್ ಐಕಾನ್ ಶ್ರೀನಿಧಿಕುದರ್ ಹಾಗೂ ಸ್ನೇಹ ಬಳಗ ಭೇಟಿ ನೀಡಿ, ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ, ಧನಸಹಾಯ ಮಾಡಿದರು.

ನಂತರ ಮಾತನಾಡಿ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ   ರೈತ ಬಸವಣ್ಣ ಅವರ ಮೇಲೆ ಹುಲಿ ದಾಳಿ ನಡೆಸಿ ತಿಂದು ಹಾಕಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುವುದು ಕಷ್ಟ ವಾಗಿದೆ. ಅರಣ್ಯ ಅಧಿಕಾರಿಗಳು ಹುಲಿ ಸೆರೆಹಿಡಿಯಬೇಕು. ಇಂತಹ ಘಟನೆ .ಮರುಕಳಿ ಸದಂತೆ  ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಮೃತರ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರ ನೀಡಬೇಕು, ಮಕ್ಕಳಿಗೆ ಸರ್ಕಾರಿ ನೌಕರಿ ನೀಡಬೇಕು, ಮೃತರ ಪತ್ನಿಗೆ ಮಾಸಾಶನ ನೀಡಬೇಕು. ಸರ್ಕಾರ ನೀಡುವ 20 ಲಕ್ಷ ಪರಿಹಾರ ಸಾಲದು ಹೆಚ್ಚಿನ ಪರಿಹಾರವನ್ನು ಕೊಡಿಸಿಕೊಟ್ಟು ಮೃತರ ಕುಟುಂಬಕ್ಕೆ ‌ನ್ಯಾಯ ಕೊಡಿಸಿಕೊಡಬೇಕು  ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ   ಮಂಗಲದ ಹೊಸೂರು ಶಿವಣ್ಣ,  ಬ್ಯಾಡಮೂಡ್ಲು ಮರಿಸ್ವಾಮಿ, ಹೊನ್ನಹಳ್ಳಿ ಮಹಾದೇವಸ್ವಾಮಿ,  ಗುಣನಿಧಿ, ಮರಿಯಾಲದಹುಂಡಿ ಕುಮಾರ್, ಮರಿಯಾಲ ನಾಗರಾಜು, ಅರ್ಜುನ್, ಕುಮಾರ್, ‌ಪ್ರೇಮ್, ವಿಶ್ವ, ಮಧು, ಅರುಣ್, ಮನೋಜ್, ಸಿದ್ದರಾಜು, ಶಂಕರ್, ಮಂಜುನಾಥ್, ಮಹಾದೇವಸ್ವಾಮಿ, ಕುಮಾರ್, ಶೇಖರ್, ಅನಿಲ್ , ಗಾಳೀಪುರ ಇರ್ಷಾದ್ , ನಾಗವಳ್ಳಿ ಪ್ರಸಾದ್ಇತರರು ಹಾಜರಿದ್ದರು.

Leave a Reply

Your email address will not be published. Required fields are marked *