- ನಗರದ ಎಪಿಎಂಸಿಯಲ್ಲಿ ‘ಅರಿಶಿನ ಉತ್ಪನ್ನದ ಸಂಸ್ಕರಣೆ ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮ.
ಚಾಮರಾಜನಗರ: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಮೈಸೂರು ವತಿಯಿಂದ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣ ದಲ್ಲಿ ಅರಿಶಿನ ಉತ್ಪನ್ನ ಖರೀದಿದಾರರು ಮತ್ತು ಮಾರಾಟಗಾರರಿಗೆ ” ಅರಿಶಿನ ಉತ್ಪನ್ನದ ವರ್ಗೀಕರಣ, ಸಂಸ್ಕರಣೆ ಮೌಲ್ಯವರ್ಧನೆ ಹಾಗೂ ಪ್ಯಾಕಿಂಗ್ ಮತ್ತು ರಪ್ತು ‘ವಿಷಯಕ್ಕೆ ಸಂಬAಧಿಸಿದAತೆ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಎಪಿಎಂಸಿ ಅಧ್ಯಕ್ಷ ಎಂ.ಬಿ. ಗುರುಸ್ವಾಮಿ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಅರಿಶಿನ ಬೆಳೆಗಾರರಿದ್ದು. ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಗುಣಮಟ್ಟದ ಅರಿಶಿನ ಬೆಳೆಯಬೇಕು, ಅರಿಶಿನ ಉತ್ಪನ್ನಎಣ್ಣೆ ಪೌಡರ್ ಹಾಗೂ ಇತರ ಉತ್ಪನ್ನಗಳ ತಯಾರಿಸುವ ಸಂಬAಧ ಜಾಗೃತಿ ಮೂಡಿಸಲು ತರಬೇತಿ ಕಾರ್ಯಕ್ರಮ ಆಯೋಜನೆ ಅರ್ಥಪೂರ್ಣ, ಅರಿಶಿನ ಬೆಳೆಗಾರರು ಕಾರ್ಯಾಗಾರದ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಮೈಸೂರು ಸಿಎಫ್‌ಟಿಆರ್‌ವಿಜ್ಞಾನಿ ಶಿವಕುಮಾರ್
ಅರಿಶಿನ ಉತ್ಪನ್ನದ ವರ್ಗೀಕರಣ, ಸಂಸ್ಕರಣೆ ಮೌಲ್ಯವರ್ಧನೆ ಹಾಗೂ ಪ್ಯಾಕಿಂಗ್ ಮತ್ತು ರಪ್ತು ‘ವಿಷಯಕ್ಕೆ ಸಂಬAಧಿಸಿದAತೆ ಉಪನ್ಯಾಸ ನೀಡಿದರು.
ಪ್ರಧಾನ ವ್ಯವಸ್ಥಾಪಕಿ ಎಸ್.ವಿ.ಭ್ಯಾಗಲಕ್ಷ್ಮೀ ಕಾರ್ಯದರ್ಶಿ ಜಗದೀಶ್, ಅರಿಶಿನ ಬೆಳೆಗಾರರು, ವರ್ತಕರು ಭಾಗವಹಿಸಿದ್ದರು.
