- ಹೆಚ್.ಎಸ್.ಮಹದೇವಪ್ರಸಾದ್ ಹುಟ್ಟುಹಬ್ಬ: ಇಂಚರ್ ಗ್ರೂಪ್‌ನಿಂದ ಅನ್ನಸಂತರ್ಪಣೆ
ಚಾಮರಾಜನಗರ : ಮಾಜಿ ಸಚಿವ ಹೆಚ್.ಎನ್. ಮಹದೇವಪ್ರಸಾದ್ ಅವರು ಜಿಲ್ಲೆಯ ಅಭಿವೃದ್ಧಿಗೆ `ದೂರದೃಷ್ಟಿ ಹೊಂದಿದ್ದರು ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಇಂಚರ್ ಗ್ರೂಪ್ ವತಿಯಿಂದ ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ 68ನೇ ಜನ್ಮದಿನದ ಅಂಗವಾಗಿ ಅಯೋಜಿಸಿದ್ದ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸ್ಕಿ, ಹೆಚ್.ಎಸ್. ಮಹದೇವಪ್ರಸಾದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅನ್ನಸಂತರ್ಪಣೆಗೆ ಚಾಲನೆ ನೀಡಿ ಮಾತನಾಡಿದರು.
ಮಹದೇವಪ್ರಸಾದ್ ಅವರು ಬದುಕಿದ್ದರೆ ಜಿಲ್ಲೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿತ್ತು. . ಅವರು ನಮ್ಮಿಂದ ದೂರವಾಗಿದ್ದರು ಅವರು ಜಿಲ್ಲೆಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳು ನಮ್ಮ ಮುಂದೆ ಜೀವಂತವಾಗಿ ಉಳಿದಿವೆ. ನಮ್ಮ ತಂದೆ ಹುಟ್ಟುಹಬ್ಬವನ್ನು ಹಮ್ಮಿಕೊಂಡಿರುವುದು ತುಂಬಾ ಸಂತಸವಾಗಿದೆ. ಕಾರ್ಯಕ್ರಮ ಆಯೋಜಕ ಸ್ಟೈಲ್ ಮಂಜುನಾಥ್, ಎಲ್ಲರಿಗೂ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಆಯೋಜಕ ಸ್ಟೈಲ್ ಮಂಜುನಾಥ್ ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಎನ್ ರಿಚ್ ಮಹದೇವಸ್ವಾಮಿ, ಬಸಪ್ಪ, ಕೃಷ್ಣಪ್ಪ, ಮಂಜೇಶ್, ದೊಡ್ಡರಾಯಪೇಟೆ ಗಿರೀಶ್, ವೈ.ಪಿ. ರಾಜೇಂದ್ರ, ಬಿ.ಕೆ.ರವಿಕುಮಾರ್, ಪ್ರೊಟ್ಸ್ ರವಿಕುಮಾರ್, ಸೈಯದ್‌ರಫೀ, ಮಹೇಶ್‌ಕುದರ್, ಕಾವುದವಾಡಿ ಗುರು, ಮೂಗೂರು ಸುಂದ್ರಪ್ಪ, ರಾಜು, ಕಲ್ಪುರ ಮಂಜು, ಗುರುಸ್ವಾಮಿ ಇತರರು ಹಾಜರಿದ್ದರು.