ರೈತರಿಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು ? ಅಹೋರಾತ್ರಿ ಧರಣಿ ಯಾಕೆ ಅಂತ್ಯಗೊಳಿಸಿದ್ರು…?

  • ಕೆರೆಗಳಿಗೆ 30 ದಿನ ನೀರು ಹರಿಸಲು ಜಿಲ್ಲಾಧಿಕಾರಿಗಳ ಸಭೆಯಲ್ಲಿ ತೀರ್ಮಾನ: ಅಹೋರಾತ್ರಿ ಧರಣಿ ಅಂತ್ಯ

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಪಂಪ್‌ಹೌಸ್ ನಿಂದ ಚಾಮರಾಜನಗರ ತಾಲೂಕಿನ ಮೂರನೆಯ ಹಂತದಲ್ಲಿ ನೀರು ನೀರು ತುಂಬಿಸುವ ಕೆರೆಗಳಿಗೆ 30 ದಿನಗಳವರೆಗ ನೀರು ಹರಿಸಲು ಜಿಲ್ಲಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.


ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಇಲಾಖೆಯು ಅಧಿಕಾರಿಗಳು, ರೈತರೊಂದಿಗಿನ‌ ಸಭೆಯಲ್ಲಿ ಸುದೀರ್ಘ ವಾಗಿ ಚರ್ಚಿಸಿ ಸಭೆಯಲ್ಲಿ ಚಾಮರಾಜನಗರ ತಾಲೂಕಿನ ಮೂರನೆಯ ಹಂತದ ಕೆರೆಗಳಿಗೆ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.


ತಾಲೂಕಿನ ಅಮಚವಾಡಿ, ಲಕ್ಷ್ಮೀಪುರ, ಮಹದೇಶ್ವರ ಕಾಲೋನಿ, ಸಿದ್ಧಲಿಂಗಪುರ, ಬಡಗಲಪುರ, ಸಾನೇಗಾಲ, ಬೊಕ್ಕೇಪುರ, ಕಟ್ಟವಾಡಿ, ಕೊತ್ತಲವಾಡಿ, ನಿಜಲಿಂಗನಪುರ, ನರಸಮಂಗಲ, ಯಾನಗಳ್ಳಿ, ಕಿಲಗೆರೆ, ಮಾದಲವಾಡಿ ಗ್ರಾಮದ ರೈತರು ಮೂರನೆಯ ಹಂತದ ಕೆರಗಳಿಗೆ ಕಳೆದ ಮೂರು ವರ್ಷಗಳಿಂದಲ್ಲೂ ನೀರು ತುಂಬಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಮೂರನೆಯ ಹಂತದ ಅಚ್ಚಕಟ್ಟು ಗ್ರಾಮದ ರೈತರು ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಪಂಪ್‌ಹೌಸ್ ಮುಂಭಾಗದಲ್ಲಿ  ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದರು.

ಅಹೋರಾತ್ರಿ ಧರಣಿ  ಸ್ಥಳಕ್ಕೆ ಇತ್ತೀಚೆಗೆ ಜಿಲ್ಲಾಧಿಕಾರಿ ಶ್ರೀ ರೂಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ  ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿ, ವಾರದೊಳಗೆ ನೀರಾವರಿ ನಿಗಮದ ಮುಖ್ಯ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಸಭೆ ಕರೆದು ಮೂರನೇ ಹಂತದ ಕೆರೆಗಳಿಗೆ ನೀರು ಹರಿಸುವ ಭರವಸೆ ನೀಡಿದರು.

ಅದರಂತೆ ಇಂದು ನೀರಾವರಿ ನಿಗಮದ ಅಧಿಕಾರಿಗಳು, ರೈತರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಮೂರನೇ ಹಂತದ ಕೆರೆಗಳಿಗೆ 30 ದಿನಗಳ ಕಾಲ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ನಮ್ಮ ಭಾಗದ ಕೆರೆಗಳು ತುಂಬುವ ತನಕ ಯಾರು ಗೇಟ್ ವಾಲ್ ತಿರುಗಿಸಬಾರದು.  ಗೇಟ್ ವಾಲ್ ಬಳಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಗೇಟ್ ವಾಲ್ ತಿರುಗಿಸುವವರ ಮೇಲೆ ದೂರು ನೀಡಿ‌ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು. ರೈತರು ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ತಹಸೀಲ್ದಾರ್ ಗಿರಿಜಾ,ನೀರಾವರಿ ನಿಗಮದ ಸೂಪರ್ ಡೆಂಟ್ ಇಂಜಿನಿಯರ್ ರಘುಪತಿ,ಇಇ ಗುರು ಪ್ರಸಾದ್ , ಎಇಇ ಮಹೇಶ್,  ಬಿಜೆಪಿ  ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ನಟರಾಜು, ರೈತರು ಭಾಗವಹಿಸಿದ್ದರು

Leave a Reply

Your email address will not be published. Required fields are marked *