ಕೇಂದ್ರ ಸರ್ಕಾರ ಪಿಂಚಣಿದಾರರ ಬೇಡಿಕೆಯನ್ನು ಈಡೇರಿಸಲಿ : ಹುಚ್ಚಪ್ಪ

ಚಾಮರಾಜನಗರ: ಪಿಂಚಣಿದಾರರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಅದಷ್ಟುಬೇಗ ಈಡೇರಿಸುತ್ತದೆ ಎಂದು ರಾಷ್ಟ್ರೀಯ ಸಂಘರ್ಷ ಸಮಿತಿಯ ಮೈಸೂರು ಪ್ರಾಂತೀಯ ಸಂಯೋಜಕ ಹುಚ್ಚಪ್ಪ ಹೇಳಿದರು.
  ನಗರದ ದೊಡ್ಡರಸನ ಕೊಳದ ಗಣಪತಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಸಂಘರ್ಷ ಸಮಿತಿ ಭಾರತ ಸರ್ಕಾರ ಈ ಒಂದು ಸಂಘ 2017ರಲ್ಲಿ ಸ್ಥಾಪನೆಯಾಗಿದ್ದು, ನಮಗೆ ಬರುವ ತಕ್ಕಂತಹ ಪಿಂಚಣಿ 600, 700, 1200, 2000, 3000 ವರೆಗೂ ಬರುತ್ತಿತ್ತು ಇದರಿಂದ ಜೀವನ ನಿರ್ವಹಣೆ ಕಷ್ಟ ಎಂದು ಹೇಳಿ ನಮ್ಮದೆ ಒಂದು ಭಾಗದ ಹಣವನ್ನು ಕೇಂದ್ರ ಸರ್ಕಾರದ ಪಿಎಫ್ ಸಮಿತಿಗೆ ಕಟ್ಟಿದ್ದೇವೆ. ಅದೊಂದು ಹಣದಲ್ಲಿ ನಮಗೆ ಬೇಕಾದಂತಹ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 9 ವರ್ಷಗಳಿಂದ 7500 ಪಿಂಚಣಿ, ವೈದ್ಯಕೀಯ ವೆಚ್ಚ, ತುಟ್ಟಿಭತ್ಯೆ ಕೊಡಿಸಿಕೊಡಿ ಎಂದು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅದೊಂದು ಹೋರಾಟ ಮುಕ್ತಾಯದ ಹಂತದಲ್ಲಿದ್ದು, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಯಾರು ಧೃತಿಗೇಡಬಾರದು ಎಂದರು.
   ಸಮಿತಿ ರಾಜ್ಯ.ಅಧ್ಯಕ್ಷರ ಆದೇಶ ಮೇರೆಗೆ ಸಂಘದ ವತಿಯಿಂದ ವೈಯೋವೃದ್ಧರಿಗೆ ಉತ್ತೇಜನವಾಗಲಿ, ಅವರಿಗೆ ಒಂದು ಶಕ್ತಿ ಬರಲಿ ಎಂದು
ವೃದ್ಧಾಶ್ರಮಗಳಿಗೆ ಅನ್ನದಾನ ಮಾಡುವುದು,   ಅವರಿಗೆ ಸನ್ಮಾನ ಮಾಡುವುದು. ಅನಾಥ ಮಕ್ಕಳಿಗೆ ಬಟ್ಟೆ ವಿತರಣೆ. ಕಾರ್ಯಕ್ರಮ. ಮಾಡಲಾಗುತ್ತಿದೆ ಎಂದರು.
ಸನ್ಮಾನ: ಹಿರಿಯ ನಿವೃತ್ತರಾದ ಸದಾಶಿವಪ್ಪ, ನಂಜೇಗೌಡ, ಪಿ.ರಾಚಯ್ಯ, ಎಂ.ಮಹದೇವಪ್ಪ, ನಂಜುಂಡಸ್ವಾಮಿ, ರಾಜಣ್ಣ, ರಂಗಸ್ವಾಮಿ ನಾಯಕ, ನಂಜುಂಡಶೆಟ್ಟಿ,  ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಚಾಮರಾಜನಗರ ಜಿಲ್ಲಾಧ್ಯಕ್ಷ ಮಹದೇವು,ಗೌರವಾಧ್ಯಕ್ಷ ಸುರೇಶ್ ಗೌಡ, ಪ್ರಧಾನ‌ಕಾರ್ಯದರ್ಶಿ ಸೋಮಣ್ಣ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಂಚಾಲಕ ಸೈಯದ್ ಮಹಮ್ಮದ್,ನಂಜುಂಡಸ್ವಾಮಿ,  ಸಿದ್ದಪ್ಪಾಜಿ,  ಪದಾಧಿಕಾರಿಗಳು ಸದಸ್ಯರು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *