ಭಾರತದ ಇತಿಹಾಸದಲ್ಲೇ ದೀರ್ಘಕಾಲ ಪ್ರಧಾನಿಯಾಗಿ ಮೋದಿ ದಾಖಲೆ : ಶ್ರೀಮುದುಕು ಮಾರಮ್ಮ ದೇವಸ್ಥಾನದಲ್ಲಿ ವಿಶೇಷಪೂಜೆ

  • ಭಾರತವನ್ನು 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವುದು ನರೇಂದ್ರಮೋದಿಯವರ ಗುರಿ: ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರಿಂದು  ಭಾರತದ ಇಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ ದಾಖಲೆ ಬರೆದ ಹಿನ್ನೆಲೆಯಲ್ಲಿ  ಚಾಮರಾಜನಗರ  ಬಿಜೆಪಿ ಗ್ರಾಮಾಂತರ, ನಗರ ಮಂಡಲ ವತಿಯಿಂದ ನಗರದ ಶ್ರೀಮುದುಕು ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
   ನಂತರ ದೇವಸ್ಥಾನದ ಮುಂಭಾಗದಲ್ಲಿ ನರೇಂದ್ರ ಮೋದಿ ಅವರ ಪ್ಲೇ ಕಾರ್ಡ್ ಹಿಡಿದು ದೀರ್ಘಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜಯವಾಗಲಿ ಎಂದು ಜೈಕಾರ ಕೂಗಿ ಸಂಭ್ರಮಿಸಿದರು.
   ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಅವರು ಇಂದಿಗೆ 4,399 ದಿನಗಳ ನಿರಂತರ ಅಧಿಕಾರಾವಧಿಯನ್ನ ಪೂರೈಸಿದ್ದಾರೆ. ಇದರೊಂದಿಗೆ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ದಾಖಲೆಯನ್ನ ಮುರಿದು 4,399 ದಿನಗಳ ನಿರಂತರ ಸೇವೆಯ ಮೈಲುಗಲ್ಲು ತಲುಪಿದ್ದಾರೆ ಎಂದರು.
   ನಮ್ಮನೆಚ್ಚಿನ ಪ್ರಧಾನಮಂತ್ರಿ ಮೋದಿ ಅವರು ದೀರ್ಘಾವಧಿ ಪ್ರಧಾನಿಮಂತ್ರಿಯಾಗಿ.ದಾಖಲೆ ನಿರ್ಮಿಸಿದ್ದಾರೆ. ಅವರೇ ಮೊದಲು ಅವರೇ ಕೊನೆ ಎಂಬುವ ದಿಕ್ಕಿನಲ್ಲಿ ನಾವು ಭಾವಿಸಿದ್ದೇವೆ ಅವರು 12 ವರ್ಷಗಳ ಅವಧಿಯಲ್ಲಿ ಅವರು ಮಾಡಿದಂತಹ ಕೆಲಸಗಳು, ಆಧುನಿಕ ನವಭಾರತ ಹರಿಕಾರ ನರೇಂದ್ರಮೋದಿಯವರು. ದೇಶದ ಪ್ರತಿಯೊಬ್ಬ ವ್ಯಕ್ತಿ ಜೀವನಮಟ್ಟದ ಸುಧಾರಣೆಗೆ ಪೂರಕವಾದ ಹಲವಾರು ಜನಪ್ರಿಯವಾದ ಮಾನವ ಕಲ್ಯಾಣಕ್ಕೆ ಪೂರಕವಾದಂತಹ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರು ಕೇವಲ ದೀರ್ಘಾವಧಿ ಪ್ರಧಾನಮಂತ್ರಿಯಲ್ಲದೆ ಭಾರತೀಯರು, ದೇಶವನ್ನು ರಕ್ಷಿಸುವ ಪ್ರಧಾನ ರಕ್ಷಕರಾಗಿದ್ದಾರೆ. ಅವರ ಕಾರ್ಯಕ್ರಮಗಳು ಫಸಲ್‌ಭೀಮ್ ಯೋಜನೆ, ಆಯುಷ್ಮಾನ್ ಯೋಜನೆ, ಉಜ್ವಲ ಯೋಜನೆ, ಜನ್‌ಧನ್ ಖಾತೆ, ಆವಾಸ್ ಯೋಜನೆ, ಸ್ವಚ್ಚಭಾರತ್ ಅಭಿಯಾನ ಸೇರಿದಂತೆ ಇತರ ಯೋಜನೆಗಳಿಂದ ದೇಶದಲ್ಲಿ ಶೇ.80 ರಷ್ಟು ಜನರು ಫಲಾನುಭವಿಗಳಾಗಿದ್ದಾರೆ ಎಂದರು
ನರೇಂದ್ರಮೋದಿಯವರು ಪ್ರಮುಖ ಉದ್ದೇಶ 2047ರಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡುವುದು ಅವರ ಗುರಿಯಾಗಿದೆ. ವಿಕಸಿತ ಭಾರತಕ್ಕೆ ಪೂರಕವಾಗಿ ರಾಮ್‌ಜೀಯೋಜನೆ ಜಾರಿಗೆ ತಂದರು. ಎಲ್ಲ ಕಾರ್ಯಕ್ರಮಗಳ ಮೂಲ ಉದ್ದೇಶ ಆತ್ಮನಿರ್ಭಲ ಭಾರತ ನಿರ್ಮಾನವೇ ಅವರ ಮಹತ್ಮರವಾದ ಉದ್ದೇಶವಾಗಿದೆ. ಮೋದಿ ಅವರು ದೇಶವಲ್ಲ… ವಿಶ್ವಮಟ್ಟದಲ್ಲಿ ತಮ್ಮ ಆಡಳಿತ ತೋರಿಸುವ ಮೂಲಕ ವಿಶ್ವನಾಯಕರಾಗಿ ಬೆಳೆದಿದ್ದಾರೆ. ಅವರು ದೇಶಕ್ಕಾಗಿ, ಭಾರತೀಯರ ರಕ್ಷಣೆಗಾಗಿ ಶತಮಾನ ಪೂರೈಸಲಿ, ಅವರಿಗೆ ದೀರ್ಘಾವಧಿ ಆರೋಗ್ಯ, ಅಯಸ್ಸು ಕರುಣಿಸಲಿ ಎಂದು ಆಶಿಸಿದರು
  ಈ ಸಂದರ್ಭದಲ್ಲಿ ಚೂಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ನಗರ ಮಂಡಲ ಅಧ್ಯಕ್ಷ ಶಿವರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್,  ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾಧ್ಯಕ್ಷ ಚಂದ್ರಶೇಖರ್ , ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ ಭಗೀರಥ,ಸಾಹಿತಿ ಕೋಡಿಉಗನೆ ಮಂಜು,ನಟರಾಜು,
ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಕೂಸಣ್ಣ, ಭಾಸ್ಕರ್, ಚಂದ್ರಶೇಖರ್, ರಾಜು, ಶಿವಣ್ಣ, ಉತ್ತುವಳ್ಳಿ ಮಹೇಶ್, ಮನೋಜ್ ಪಟೇಲ್, ಕೂಸಣ್ಣ, ವೆಂಕಟರಾವ್ ಸಾಠೆ , ಕಾರ್ಯಾಲಯ ಕಾರ್ಯದರ್ಶಿ ಪಿ.ರಂಗಸ್ವಾಮಿ, ವೀರೇಂದ್ರ, ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *