ಚಾಮರಾಜನಗರದಲ್ಲಿ ದಾದಾಸಾಹೇಬ್ ಕಾನ್ಶಿರಾಮ್ ಪುಣ್ಯಸ್ಮರಣೆ

ಚಾಮರಾಜನಗರ : ದಾದಾ ಸಾಹೇಬ್ ಕಾನ್ಶಿರಾಮ್ ರವರಿಂದ ಸಮಾಜದಲ್ಲಿ ಸಮಾನತೆಗೆ ತಳ ಸಮುದಾಯದವರು ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಅಂಬೇಡ್ಕರ್ ಆಶಯ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದು ಹೊಂಡರಬಾಳು ವಾಸು ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ದಾದಾಸಾಹೇಬ್ ಕಾನ್ಶಿರಾಮ್ ಅನುಯಾಯಿ ಬಳಗದ ವತಿಯಿಂದ ನಡೆದ ದಾದಾ ಸಾಹೇಬ್ ಕಾನ್ಶಿರಾಮ್ ರವರ 20ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ದಾದಾ ಸಾಹೇಬ್ ಕಾನ್ಶಿರಾಮ್ ರವರು ಭಾರತದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ದಲಿತರು, ಹಿಂದುಳಿದವರು, ಮತ್ತು ಅಲ್ಪಾಸಂಖ್ಯಾತರನ್ನು ರಾಜಕೀಯವಾಗಿ ಸಂಘಟಿಸಲು ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು. ಅವರೇ ಹೇಳುವ ಹಾಗೆ ದೊಡ್ಡ ಗುರಿ ಬಹು ದೊಡ್ಡ ತ್ಯಾಗವನ್ನು ಬಯಸುತ್ತದೆ ಎಂಬಂತೆ ತಮ್ಮ ಜೀವಿತಾವಧಿಯಲ್ಲಿ ಯಾವುದೇ ಸಣ್ಣ ಉಳಿತಾಯ ಖಾತೆ ಹೊಂದದೆ ಸ್ವಂತ ಮನೆಗೆ 20 ವರ್ಷಗಳ ಕಾಲ ಬಹುಜನ ಸಮಾಜವೇ ನನ್ನ ಮನೆ ಎಂದು ನಂಬಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಹಲವಾರು ಭಾರಿ ಸೈಕಲ್ ಜಾಥಾ ಮಾಡುವ ಮೂಲಕ ಬಹುಜನರ ಕೈಗೆ ರಾಜಕೀಯ ಅಧಿಕಾರ ಸಿಗಬೇಕೆಂಬ ಉದ್ದೇಶದಿಂದ 1984 ಏ. 14ರಲ್ಲಿ ಬಹುಜನ ಸಮಾಜ ಪಕ್ಷ ಸ್ಥಾಪಿಸಿದರು. ಅವರು ಸ್ಥಾಪಿಸಿದ ಪಕ್ಷವನ್ನು ಜಿಲ್ಲೆಯಲ್ಲಿ ಸದೃಢಗೊಳಿಸಿ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ನಾವೆಲ್ಲರೂ ಶ್ರಮಿಸೋಣ ಎಂದರು.

ಜಿಲ್ಲೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವುದಾಗಿ ದೃಢ ನಿರ್ಧಾರ ಮಾಡಿ ಪ್ರತಿಜ್ಞೆ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಪಿ.ಮಹೇಶ್, ರಾಮಸಮುದ್ರ ಬಾಬು, ಸಿದ್ದರಾಜು, ರಂಗಸ್ವಾಮಿ, ಗೋವಿಂದರಾಜು, ಶಿವಣ್ಣ ದೇವಲಾಪುರ,ರಮೇಶ್, ಕಾಂತರಾಜು ಅಮಚವಾಡಿ, ಮಧು ಹೊಂಡರಬಾಳು, ಕೃಷ್ಣ, ಸುನಿಲ್, ಸ್ವಾಮಿ, ಮಂಜು, ತೀರ್ಥ ಪ್ರಸಾದ್,ಮಹೇಶ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *