ಸೈಬರ್ ವಂಚನೆ ವಿರುದ್ದ ಅರಿವು ಕಾರ್ಯಕ್ರಮ

ಚಾಮರಾಜನಗರ: ಸೈಬರ್ ವಂಚನೆ ವಿರುದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಜಾಗೃತಿಗೊಳಿಸುವ ದಿಸೆಯಲ್ಲಿ ಜಿಲ್ಲಾ ಪೆÇಲೀಸ್ ಸೈಬರ್ ಕ್ರೈಂ ಪೆÇಲೀಸ್ ಠಾಣೆ ವತಿಯಿಂದ ಅರಿವು ಕಾರ್ಯಕ್ರಮ ನಡೆಯಿತು. 

ಗುಂಡ್ಲುಪೇಟೆ ತಾಲೂಕಿನ ಹೊರೆಯಾಲದ ಜೆಎಸ್‍ಎಸ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಬೇಗೂರು ಗ್ರಾಮದ ಸಾರ್ವಜನಿಕರಿಗೆ ಸೈಬರ್ ಅಪರಾಧಗಳ ವಿರುದ್ದ ಅರಿವು ಮೂಡಿಸುವ ದಿಸೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆನ್ ಲೈನ್ ಮೂಲಕ ಪದವಿ ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ದಾಖಲಾತಿಗಳನ್ನು ಪಡೆದುಕೊಂಡು ವಿವಿಧ ಶುಲ್ಕಗಳೆಂದು ಹಣ ಪಡೆಯುವ ವಂಚಕರು ಇದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ನೀಡುವ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕೆಂದು ಸೈಬರ್ ಕ್ರೈಂ ಠಾಣೆ ಸಿಬ್ಬಂದಿ ನವೀನ್ ಮತ್ತು ಗುರುಕಿರಣ್ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ರೀಲ್ಸ್ ಗಳನ್ನು ಅಪ್ ಲೋಡ್ ಮಾಡಬಾರದು. ಇಂತಹ ರೀಲ್ಸ್ ಗಳು ಅಪ್ ಲೋಡ್ ಮಾಡಿದರೆ ದುರ್ಬಳಕೆಯಾಗುವ ಸಂಭವವಿರುತ್ತದೆ. ಯಾವುದೇ ಸೈಬರ್ ಸೆಂಟರ್‍ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಐಡಿ ಮೂಲಕ ಲಾಗಿನ್ ಆಗಿದ್ದರೆ ತಪ್ಪದೆ ಲಾಗ್ ಔಟ್ ಮಾಡಬೇಕು ಎಂದರು.

ಪ್ರವಾಸ ಹೋದ ಬಗ್ಗೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಬಾರದು. ಸೈಬರ್ ವಂಚಕರು ಟೆಲಿಕಾಂ ಮೂಲಕ ನಿಮ್ಮ ಲೊಕೇಶನ್ ಕೊಟ್ಟು ಮನೆಯನ್ನು ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಮ್ಯಾಟ್ರಿ ಮೊನಿಯಲ್ ಜಾಹೀರಾತುಗಳನ್ನು ಬಳಸಿದರೆ ವೈಯಕ್ತಿಕ ಮಾಹಿತಿಗಳು ದುರ್ಬಳಕೆಯಾಗಲಿದೆ ಎಂದು ತಿಳಿವಳಿಕೆ ನೀಡಿದರು.

Leave a Reply

Your email address will not be published. Required fields are marked *