ನಾನಾ ಪಾಟೇಕರ್ ನಿಧನಕ್ಕೆ ಡಾ.ಶಿವಕುಮಾರ ಸ್ವಾಮಿಜಿ ಶ್ರದ್ಧಾಂಜಲಿ

ಸಿದ್ದನಕೊಳ್ಳ : ಬಹುಭಾಷಾ ಅಭಿನಯ ಚತುರ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75 ವರ್ಷ) ಗೋವಾದಲ್ಲಿ ನಿಧನರಾಗಿದ್ದು ಚಿತ್ರರಂಗಕ್ಕೆ ತುಂಬದ
ಹಾನಿ. ನಾನಾ ಪಾಟೇಕರ ಒಬ್ಬ ಸರಳ ಸಜ್ಜನಿಕ ಬಡವರ ಪರ ಸದಾಕಾಲ ಮಿಡಿವ ಹೃದಯ ಹೊಂದಿದ ಹೃದಯವಂತ. ಇವರ ಅಗಲಿಕೆ ತೀವ್ರ ದುಃಖ
ತರುವಂತ ವಿಷಯ ಎಂದು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ನಿರಂತರ ದಾಸೋಹ ಹಾಗೂ ಕಲಾಪೋಷಕರ ಮಠ ಸಿದ್ದನಕೊಳ್ಳದ
ಧರ್ಮಾಧಿಕಾರಿ ಪರಮಪೂಜ್ಯ ಡಾ. ಶಿವಕುಮಾರ್ ಮಹಾಸ್ವಾಮಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ಗಿದ್’, ‘ಕ್ರಾಂತಿವೀರ’, ‘ನಟಸಮ್ರಾಟ್’ (ಮರಾಠಿ), ‘ವೆಲ್ಕಮ್’, ‘ಟಾಕ್ಸಿಕ್ 9211′ ಸೇರಿದಂತೆ ಹಲವು ಹಿಂದಿ ಮತ್ತು ಮರಾಠಿ ಅಲ್ಲದೆ ಕನ್ನಡದ ‘ಯಕ್ಷ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ 2013ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ರಾಜ್ ಕಪೂರ ವಿಶೇಷ ಕೊಡುಗೆ ಪ್ರಶಸ್ತಿ, ಕ್ರಾಂತಿವೀರ-ಅತ್ಯುತ್ತಮ ನಟ ಪ್ರಶಸ್ತಿ,ಪರಿಂಡಾ, ಅಗ್ನಿಸಾಕ್ಷಿ- ಅತ್ಯುತ್ತಮ ಪೋಷಕನಟ ಪ್ರಶಸ್ತಿ, ನಟಸಾಮ್ರಾಟ್- ಅತ್ಯುತ್ತಮ ಪ್ರಶಸ್ತಿ, ಕಾಲಾ-
ಅತ್ಯುತ್ತಮ ಖಳನಾಯಕ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಬರಗಾಲದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಸಹಾಯ ಮಾಡಲು 2015ರಲ್ಲಿ ‘ನಾಮ್ ಫೌಂಡೇಶನ್’ ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. 2027ರ ಜನೇವರಿ ತಿಂಗಳಲ್ಲಿ ನಡೆಯಲಿದ್ದ ಸಿದ್ಧಶ್ರೀ ಉತ್ಸವಕ್ಕೆ ಅತಿಥಿಗಳಾಗಿ ಅವರು
ನಮ್ಮ ಶ್ರೀಮಠಕ್ಕೆ ಆಗಮಿಸಲಿದ್ದರು. ಈ ಕುರಿತು ಈಗಾಗಲೇ ತೆಲುಗಿನ ನಿರ್ದೇಶಕರು ಕರೆತರುವ ಬಗ್ಗೆ ಹೇಳಿದ್ದರು ಎಂದು ಶ್ರೀಗಳು ಖ್ಯಾತ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ನಾನಾ ಪಾಟೇಕರ್ ನಿಧನಕ್ಕೆ ಸಿದ್ದಶ್ರೀ ಚಲನಚಿತ್ರೋತ್ಸವ ಆಯ್ಕೆ ಸಮಿತಿಯ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಅರವಿಂದ ಮುಳಗುಂದ, ಸಂಗನಗೌಡ ರುದ್ರಗೌಡ್ರ(ಕುರುಡಗಿ), ವೀರೇಶ ಪುರವಂತ , ಶರಣು ಸುಗ್ನಳ್ಳಿ, ಲೋಕೇಶ ವಿದ್ಯಾಧರ, ಸುನಂದಾ ಕಲ್ಬುರ್ಗಿ, ಕೃತ್ತಿಕಾ ಸಂತಾಪ ಸೂಚಿಸಿದ್ದಾರೆ.

**ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

Leave a Reply

Your email address will not be published. Required fields are marked *