ಬೆಂಗಳೂರಿನ ಶೋಷಿತರ ಸ್ವಾಭಿಮಾನದ ಸಮಾವೇಶಕ್ಕೆ ರಾಮಸಮುದ್ರದಿಂದ ಒಂದು ಬಸ್‌ನಲ್ಲಿ ದಲಿತ ಮುಖಂಡರು ತೆಳಿದರು. ಚಾಮರಾಜನಗರ: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಡಾ. ಹೆಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಮಸಮುದ್ರ ದಲಿತ ಮುಖಂಡರು ಒತ್ತಾಯಿಸಿದರು. ಹೆಚ್.ಸಿ.ಮಹದೇವಪ್ಪಗೆ ಸಚಿವಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಶೋಷಿತರ ಸ್ವಾಭಿಮಾನದ ಸಮಾವೇಶಕ್ಕೆ ರಾಮಸಮುದ್ರದಿಂದ ಒಂದು ಬಸ್‌ನಲ್ಲಿ ದಲಿತ ಮುಖಂಡರು ತೆರಳಿದರು. ಶೋಷಿತರ ಸ್ವಾಭಿಮಾನದ ಸಮಾವೇಶಕ್ಕೆ ಜಯವಾಗಲಿ, ಹೆಚ್.ಸಿ.ಮಹದೇವಪ್ಪ ಅವರಿಗೆ ಸಚಿವಸ್ಥಾನ ಸಿಗಲಿ ಎಂದು ಘೋಷಣೆ ಕೂಗಿದರು. ದಲಿತ ಮುಖಂಡ ಪ್ರಸನ್ನ ಮಾತನಾಡಿ, ಡಾ. ಹೆಚ್.ಸಿ.ಮಹದೇವಪ್ಪ ರಾಜ್ಯ ಕಂಡಂತಹ ಅಪ್ರತಿಮ ಅಪ್ಪಟ ಅಂಬೇಡ್ಕರ್‌ವಾದಿ, ಅವರು ಸಮಾಜ ಕಲ್ಯಾಣ ಸಚಿವರಾಗಿ ರಾಜ್ಯದಲ್ಲಿ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಹೆಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಯ.ರಾಯಣ್ಣ,ದಲಿತ ಮುಖಂಡರಾದ ರಾಮು, ಮೋಹನ್ ಉಪ್ಪಿ. ಸಿದ್ದರಾಜು ಇತರರು ಸಮಾವೇಶಕ್ಕೆ ತೆರಳಿದರು