- ಅಭಿಮಾನಿಗಳಿಂದ ರಾಜ್ಯಾದ್ಯಂತ ಚಿತ್ರಕ್ಕೆ ಉತ್ತಮ ಸ್ಪಂದನೆ : ಚಿತ್ರನಟ ಸಂಚಿತ್ ಸಂಜೀವ್
ಚಾಮರಾಜನಗರ:ಕಿಚ್ಚಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ನಟಿಸಿರುವ ಚೊಚ್ಚಲ ಚಿತ್ರ ಮ್ಯಾಂಗೋ ಪಚ್ಚ ರಾಜ್ಯಾದ್ಯಂತ ಬಿಡುಯಾಗಿದ್ದು ನಗರದ ಸಿದ್ಧಾರ್ಥ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತಿರುವ ಹಿನ್ನಲೆಯಲ್ಲಿ ಇಂದು ಚಿತ್ರದ ತಂಡ ಭೇಟಿ ನೀಡಿತು.
ಚಿತ್ರದ ನಾಯಕನಟ ಸಂಚಿತ್ ಸಂಜೀವ್, ನಟಿ ಕಾಜಲ್ ಕುಂದರ್, ಕಲಾವಿದ ಜೈ ಗೋಪಿನಾಥ್ ಅವರು ಇಂದು ಮಧ್ಯಾಹ್ನ ಚಿತ್ರಮಂದಿರಕ್ಕೆ ಭೇಟಿ ನೀಡಿದರು. ಚಾಮರಾಜನಗರ ಜಿಲ್ಲಾ ಅಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಯೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಅವತಾರ್ ತಂಡ ನೃತ್ಯದ ಮೂಲಕ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಚಿತ್ರ ಮಂದಿರ ಮಾಲೀಕ ಜೀತೇಂದ್ರ ಜೈನ್, ಇಚ್ಚಿನ್ ಜೈನ್ ಚಿತ್ರ ತಂಡವನ್ನು ಸನ್ಮಾನಿಸಿದರು. ಚಿತ್ರಮಂದಿರದೊಳಗೆ ಚಾಮರಾಜನಗರ ಜಿಲ್ಲಾ ಅಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಯೋಸಿಯೇಷನ್ ವತಿಯಿಂದ ಕೇಕ್ ಕತ್ತರಿಸಿ, ಕಿಚ್ಚ ಸುದೀಪ್ ಸಂಚೀತ್ ಸಂಜೀವ್ ಪರ ಜೈಕಾರ ಕೂಗಿ ಅಭಿಮಾನಿಗಳು, ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳುಲು ಮುಗಿಬಿದ್ದು, ತಳ್ಳಾಟ, ನೋಕಾಟ ಉಂಟಾಯಿತು.
ಅಭಿಮಾನಿಗಳಿಂದ ಉತ್ತಮ ಸ್ಪಂದನೆ : ಚಿತ್ರನಟ
ಸಂಚಿತ್ ಸಂಜೀವ್, ನಟಿ ಕಾಜಲ್ ಕುಂದರ್ ಮಾತನಾಡಿ, ನನ್ನ ಚೊಚ್ಚಲ ಚಿತ್ರ ಮ್ಯಾಂಗೋ ಪಚ್ಚಕ್ಕೆ ರಾಜ್ಯಾದ್ಯಂತ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು ಇದು ತುಂಭಾ ಸಂತಸವಾಗಿದೆ. ಚಾಮರಾಜನಗರ ಜಿಲ್ಲೆಯ ಜನತೆ ಚಿತ್ರಮಂದಿರ ಬಂದು ಚಿತ್ರವನ್ನು ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗದ ಕಲಾವಿದನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರ ಜಿಲ್ಲಾ ಅಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಯೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಮ್ಯಾಂಗೋ ಪಚ್ಚ ಎನ್ನುವುದು ನಟ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟಿಸಿರುವ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವು ೨೦೦೦ನೇ ಇಸವಿಯ ಮೈಸೂರು ನಗರದ ನೈಜ ಘಟನೆಗಳನ್ನು ಆಧರಿಸಿದ ಅಪರಾಧ ಕಥೆಯನ್ನು ಹೊಂದಿದೆ ಎಂದರು. ಸಾಮಾನ್ಯ ಕುಟುಂಬದ ಹುಡುಗ ಪ್ರಶಾಂತ ಸಿಡಿ ಮತ್ತು ಡಿವಿಡಿ ಅಂಗಡಿ ನಡೆಸುತ್ತಿರುತ್ತಾನೆ ತಂದೆಯ ಮರಣ ಮತ್ತು ಆರ್ಥಿಕ ಸಂಕಷ್ಟದ ನಂತರ ಆತ ಪೈರಸಿ ದಂಧೆಗೆ ಇಳಿಯುತ್ತಾನೆ. ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಬಯಸುವ ಪಚ್ಚ, ತನ್ನ ಮಲಸಹೋದರ ನಾಗಪ್ಪನ ಜೊತೆ ಸೇರಿ ಗಾಂಜಾ ಮತ್ತು ಮಾದಕ ವಸ್ತುಗಳ ದಂಧೆಗೆ ಧುಮುಕುತ್ತಾನೆ. ನಂತರ ಮೈಸೂರಿನ ಅಂಡರ್‌ವರ್ಲ್ಡ್ ಮಾಫಿಯಾದಲ್ಲಿ ಆತ ಹೇಗೆ ಸಿಲುಕಿಕೊಳ್ಳುತ್ತಾನೆ ಮತ್ತು ಮುಂದೆ ಏನಾಗುತ್ತದೆ ಎಂಬುದೇ ಈ ಚಿತ್ರದ ಮುಖ್ಯ ಕಥೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅವತಾರ್ ಡ್ಯಾನ್ಸ್ ಪ್ರವೀಣ್,
ಚಾಮರಾಜನಗರ ಜಿಲ್ಲಾ ಅಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಯೋಸಿಯೇಷನ್ ಪದಾಧಿಕಾರಿಗಳ, ಸದಸ್ಯರು ಭಾಗವಹಿಸಿದ್ದರು