- ನರೇಂದ್ರ ಮೋದಿ ವಿಶ್ವನಾಯಕರಾಗಿ ಬೆಳೆದಿದ್ದಾರೆ
ಚಾಮರಾಜನಗರ: ನರೇಂದ್ರಮೋದಿ ಅವರು ಪ್ರಧಾ ನಿಯಾಗಿ 12ವರ್ಷ ಪೂರೈಸಿದ್ದು ಅವರು ಜಾರಿಗೊಳಿಸಿದ ಹಲವಾರು ಯೋಜನೆಗಳನ್ನು ದೇಶದ 80 ಕೋಟಿ ಜನರು ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ದೇಶದ ಜನರ ತಲಾದಾಯ ಏರಿಕೆಯಾಗಿದ್ದು, ಅವರ ಅವಧಿಯಲ್ಲಿ ದೇಶ ಆರ್ಥಿಕವಾಗಿ ಮುಂಚೂಣಿಯಲ್ಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಮೋದಿ ಅವರು ಕಳೆದ ವಿಶ್ವದಲ್ಲಿಯೇ ಭಾರತ ಆರ್ಥಿಕವಾಗಿ ಮುಂಚೂಣಿ ಯಲ್ಲಿದ್ದು 6ನೇ ಸ್ಥಾನ ಪಡೆದಿದೆ 12ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿ ಗೆ ಕಡಿಮೆ ಇಲ್ಲದಂತೆ ಕಟ್ಟಿದ್ದಾರೆ.
ಕಾಂಗ್ರೆಸ್ ಕಳೆದ 55 ವರ್ಷಗಳ ಆಳ್ವಿಕೆಯಲ್ಲಿ ಮತ ಬ್ಯಾಂಕ್ ಆಧಾರಿತವಾಗಿ ಕಾಲ ಕಳೆದರು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿದ್ದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆದರು. ಕಾಶ್ಮೀರದಲ್ಲಿದ್ದ 370 ಕಾಯ್ದೆಯನ್ನು ಕಿತ್ತೊಗೆದರು ಎಂದರು
.ನರೇಂದ್ರಮೋದಿ ಅವರು ಜಾರಿಗೊಳಿಸಿದ ಅನೇಕ ಯೋಜನೆಗಳನ್ನು ದೇಶದ 80 ಕೋಟಿ ಜನರು ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ದೇಶದ ಜನರ ತಲಾದಾಯ ಏರಿಕೆಯಾಗಿದೆ. ಅಲ್ಲದೇ ದೇಶದ ಪ್ರತಿಯೊಬ್ಬರಿಗೂ ತಂತ್ರಜ್ಞಾನ ಸ್ಪರ್ಶವಾಗಿದೆ ಎಂದು ತಿಳಿಸಿದರು.ನರೇಂದ್ರಮೋದಿ ಅವರು ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೇ ಎಸ್ಸಿ, ಎಸ್ಪಿ ವರ್ಗಗಳಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಉಳಿದಂತೆ ನಗರೀಕರಣ, ರೈಲ್ವೆ, ವಿಮಾನ ಸೇವೆ, ಉದ್ಯೋಗ, ಕುಡಿಯುವ ನೀರು, ಉಜ್ವಲ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು.
2.12 ಕೋಟಿ ಜನ್ ಧನ್ ಖಾತೆಗಳು, 4.27 ಕೋಟಿಗೂ ಅಧಿಕ ಜನರಿಗೆ ಸಾಮಾಜಿಕ ಭದ್ರತೆ, 3.39 ಲಕ್ಷ ಕೋಟಿ ಮುದ್ರಾ ಸಾಲ, 43.2 ಲಕ್ಷ ರೈತರಿಗೆ ಕಿಸಾನ್ ಆಸರೆ, 87.7 ಲಕ್ಷ ಗ್ರಾಮೀಣ ಮನೆಗಳಿಗೆ ನೀರು, ಡಿಬಿಟಿ ಮೂಲಕ ಪಾರದರ್ಶಕತೆ, 436 ಪ್ರೀಮಿಯಂ ನಲ್ಲಿ 2 ಲಕ್ಷ ಜೀವಜಿಮೆ, 48.9 ಲಕ್ಷ ಅಟಲ್ ಪೆನ್ಷನ್ ಚಂದಾದಾರರು, 6.14 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ, 31.7.ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್, 41.4 ಲಕ್ಷ ಉಚಿತ ಉಜ್ವಲ ಎಲ್ ಪಿಜಿ ಸಂಪರ್ಕ 402′ ಲಕ್ಷ ಫಲಾನುಭವಿಗಳಿಗೆ ಉಚಿತ ಪಡಿತರ, ಕೋವಿಡ್ ನಿರ್ವಹಣೆ, 229* ಕೋಟಿ ಡೋಸ್ ಲಸಿಕೆ ಅಭಿವೃದ್ಧಿ ಮೂಲಸೌಕರ್ಯ ಮತ್ತು ಕರ್ನಾಟಕದ ಆರ್ಥಿಕ ಪ್ರಗತಿಗೆ ಒತ್ತು ನೀಡಿದ್ದಾರೆ. ನರೇಂದ್ರ ಮೋದಿಯವರ 12 ವರ್ಷಗಳ ಅವಧಿಯಲ್ಲಿ ಹಲವಾರು ಯೋಜನೆಗಳ ಜಾರಿಗೆ ತಂದು ಭಾರತವನ್ನು ವಿಕಸಿತ ಭಾರತ ಮಾಡುವ ಗುರಿಯೊಂದಿಗೆ ವಿಶ್ವನಾಯಕರಾಗಿ ಬೆಳೆದಿದ್ದಾರೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್, ಮಾಜಿ ಶಾಸಕ ಎಸ್.ಬಾಲರಾಜ್, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ
ಎಂ.ರಾಮಚಂದ್ರು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಮನೋಜ್ ಪಟೇಲ್ ಹಾಜರಿದ್ದರು.