- ಹೊನ್ನೂರು ಪ್ರಕಾಶ್ ಮೇಲೆ ಸುಮೊಟೋ ಪ್ರಕರಣ ದಾಖಲಿಸಲು ವಕೀಲ ಅರುಣ್ ಕುಮಾರ್ ಆಗ್ರಹ
ಚಾಮರಾಜನಗರ : ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ರೈತ ಮುಖಂಡ ಹೊನ್ನೂರುಪ್ರಕಾಶ್ ಮೇಲೆ ಸುಮೊಟೋ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ವಕೀಲ ಅರುಣ್ ಕುಮಾರ್ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೊನ್ನೂರು ಪ್ರಕಾಶ್ ಸಮಾಜದ ಶಾಂತಿಯನ್ನು ಹಾಳು ಮಾಡಿದ್ದಾರೆ. ಶಾಂತವಾಗಿರುವ ರೈತರನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. ಸರ್ಕಾರ ಮತ್ತು ರೈತರ ನಡುವೆ ಅಶಾಂತಿ ಸೃಷ್ಟಿಸಿ ದಂಗೆ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ ಆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಅವರ ಮೇಲೆ ಸುಮೊಟೋ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೊನ್ನೂರು ಪ್ರಕಾಶ್ ಅವರು ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ ಅದನ್ನು ನಾವು ಸ್ವಾಗತಿಸುತ್ತೇವೆ. ನಿಮಗೆ ವಯಸ್ಸಾಗಿದೆ. ನಿಮ್ಮ ಪದ ಬಳಕೆ ಕಾನೂನಾತ್ಮಕವಾಗಿರಲಿ. ನೀವೇನು ಕಾಂಗ್ರೆಸ್ ಪಕ್ಷದ ವಕ್ತಾರರಲ್ಲ. ನೀವು ಸಚಿವ ಸ್ಥಾನದ ವಂಚಿತ ಶಾಸಕರಲ್ಲ. ನೀವು ಪಕ್ಷದ ಆಂತರಿಕ್ಷ ವಿಷಯಗಳ ಬಗ್ಗೆ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ. ಅದಕ್ಕೆ ನಮ್ಮ ಹೈಕಮಾಂಡ್ ಇದೆ ಅದನ್ನು ಮಾಡುತ್ತದೆ. ನಿಮ್ಮ ಪದ ಬಳಕೆ ಏನು ಇದೆ. ನೀವು ಯಾರು ರೈತರನ್ನು ಕೇಳುವುದಕ್ಕೆ ಅಂತಾ ಅಂದ ಮೇಲೆ, ನೀವು ನಮ್ಮ ಸಚಿವರ ಪ್ರಶ್ನೆ ಮಾಡಲು ನೀವು ಯಾರು?. ನೀವು 4 ಬಾರಿ ಗೆದ್ದಿದ್ದೀರಿ ಎಂದು ಸಚಿವರಿಗೆ ಧಮಕಿ ಹಾಕುತ್ತಿರಲ್ಲ. ಹೊನ್ನೂರು ಪ್ರಕಾಶ್ ಅವರೇ ನೀವು ಚಾಮರಾಜನಗರ ಕ್ಷೇತ್ರದ ಮತದಾರರಲ್ಲ. ನಮ್ಮ ಕ್ಷೇತ್ರದವರು ಅವರನ್ನು ಮತಹಾಕಿ ಗೆಲ್ಲಿಸಿದ್ದಾರೆ ಹೊರತು ನೀವು ಗೆಲ್ಲಿಸಿಲ್ಲ. ಆಗಾಗಿ ತಮ್ಮ ಪದ ಬಳಕೆ ಮಿತಿ ಇರಲಿ. ಸಚಿವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ನೀವು ಮಾತನಾಡಿ ಎಂದು ಮನವಿ ಮಾಡಿದರು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಕರ್ ಮಾತನಾಡಿ, ರೈತ ಮುಖಂಡ ಹೊನ್ನೂರು ಪ್ರಕಾಶ್ ಅವರು ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡುತ್ತಿರುವ ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ಅವಹೇಳಕಾರಿ ಮಾತನಾಡಿರುವುದು ಸರಿಯಲ್ಲ. ನೂತನ ಸಚಿವರು ನಾಲಾಯಕ್ ಎಂದು ಹೇಳಿಕೆ ನೀಡಿರುವುದು ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ನ್ಯಾಯಯುತವಾಗಿ ಹೋರಾಟ ಮಾಡಲಿ ಅದನ್ನು ಬಿಟ್ಟು ಸಚಿವರನ್ನು ನಾಲಾಯಕ್ ಎಂದು ಹೇಳಲು ನೀವು ಯಾರು ? ಸಚಿವರ ಬಗ್ಗೆ ಗೌರವಯುತವಾಗಿ ಮಾಡಲಿ. ಅವರ ಬಗ್ಗೆ ಅವಹೇಳನಕಾರಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.
ಹಿಂದುಳಿದವರ್ಗದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಚಿವರಾದ ಮೇಲೆ ಅವಹೇಳನಕಾರಿಯಾಗಿ ಮಾತನಾಡಿ ಅಗೌರವ ಉಂಟು ಮಾಡಿದ್ದೀರಿ ಇದು ಸರಿಯಲ್ಲ ಸಚಿವರ ಬಗ್ಗೆ ಗೌರವಯುತವಾಗಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿ ಸಲಹೆಗಳನ್ನು ನೀಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯಳಂದೂರು ಟಿಎಪಿಎಂಎಸ್ ಸದಸ್ಯ ಸಿದ್ಧಪ್ಪಸ್ವಾಮಿ, ರವಿ, ನಗರಸಭಾ ಮಾಜಿ ಸದಸ್ಯ ಕರಿಗಂಜನಪುರ ಸ್ವಾಮಿ. ಚೂಡ ಸದಸ್ಯ ರಾಜೇಂದ್ರ ದ್ವಾರ್ಕಿ ಹಾಜರಿದ್ದರು.
