- ಹೆಗ್ಗವಾಡಿಯಲ್ಲಿ ಅಂತಾರಾಷ್ಟ್ರೀಯ ಭೌದ್ಧ ಸಮ್ಮೇಳನ ಪೂರ್ವಭಾವಿಯಲ್ಲಿ ನುಡಿ
- ಅಂಬೇಡ್ಕರ್, ಬುದ್ಧರ ಮೂಲ ತತ್ತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಿ
ಚಾಮರಾಜನಗರ :ಅಂತಾರಾಷ್ಟ್ರೀಯ ಭೌದ್ಧ ಸಮ್ಮೇಳನ ನಿಮಿತ್ತವಾಗಿ ಗ್ರಾಮಗಳಿಗೆ ಬರುವ ಧಮ್ಮ ಪಯಣ ಜಾಗೃತಿ ಜಾಥ ಟ್ಯಾಬ್ಲೊಗಳನ್ನು ಗ್ರಾಮಸ್ಥರು ಶಾಂತಿ, ಶಿಸ್ತಿನಿಂದ ಸ್ವಾಗತಿಸಿ ಬರಮಾಡಿಕೊಳ್ಳಬೇಕು ಎಂದು ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಮನವಿ ಮಾಡಿದರು.
ತಾಲೂಕಿನ ಹೆಗ್ಗವಾಡಿ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಹರವೆ ಹೋಬಳಿ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ಟೋಬರ್ 24 ಮತ್ತು 25 ರಂದು ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯಲಿದ್ದು, ಪ್ರಚಾರ ಸಮಿತಿ ವತಿಯಿಂದ ಪ್ರತಿ ಹೋಬಳಿಯ ಗ್ರಾಮಗಳಲ್ಲೂ ಪ್ರಚಾರ ಮಾಡಿ ವಿಶೇಷವಾಗಿ ಧಮ್ಮ ಪಯಣ ಕಾರ್ಯಕ್ರಮವನ್ನು ಕೂಡ ಅಯೋಜನೆ ಮಾಡಿದ್ದು ಪ್ರತಿಹಳ್ಳಿಗೂ ಸಂಚರಿಸಲಿದೆ. ಧಮ್ಮಪ್ರಯಣವನ್ನು ಗ್ರಾಮಸ್ಥರು ಶಿಸ್ತಿನಿಂದ ಅದ್ಧೂರಿಯಾಗಿ ಬರಮಾಡಿ ಕೊಳ್ಳಬೇಕು ಎಂದು ಮನವಿ ಮಾಡಿದರು.
ನಮ್ಮ ತಂದೆ ಧ್ರುವನಾರಾಯಣ್ ಅವರ ದೂರದೃಷ್ಠಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ನಳಂದ ವಿಶ್ವವಿದ್ಯಾಲಯ ನಿರ್ಮಾಣಗೊಂಡಿದ್ದು, ಕಾರ್ಯರೂಪಕ್ಕೆ ಬಂದಿದೆ. ಸುತ್ತುಗೋಡೆ ಸೇರಿದಂತೆ ಹೆಚ್ಚಿನ ಕೆಲಸಗಳು ಆಗಬೇಕಿದೆ. ನಾವು, ಬಂತೇಜಿ, ಸಚಿವರಾದ ಪುಟ್ಟರಂಗಶೆಟ್ಟರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ
ಮನವಿ ಮಾಡಿದ್ದೇವು. ಮತ್ತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಲಾಗುವುದು ಎಂದರು.
ಕಳೆದ ವರ್ಷ ಮೈಸೂರಿನಲ್ಲಿ ಬೌದ್ಧ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಚಾಮರಾಜನಗರದಲ್ಲೂ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಯಶಸ್ವಿಯಾಗಲಿದೆ. ಎಲ್ಲ ರೂ ಒಗ್ಗಟ್ಟಿನಿಂದ ಸೇರಿ ಬಹಳ ಅರ್ಥಪೂರ್ಣವಾಗಿ ಮಾಡಬೇಕು. ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಆಗಬೇಕು. ಬೌದ್ಧ ಧರ್ಮ ಇಂದು ಧರ್ಮಕ್ಕೆ ಸೀಮಿತವಲ್ಲ. ಭಗವಾನ್ ಬುದ್ಧರು ಶಾಂತಿ ಸಂಕೇತ. ಕರುಣೆಯ ಸಂಕೇತ. ಪ್ರೀತಿ ಸಂಕೇತ. ಆಗಾಗಿ ನಾವೆಲ್ಲರೂ ಅಂಬೇಡ್ಕರ್, ಬುದ್ಧರ.ಮೂಲ ತತ್ತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಎಲ್ಲ ಸಮಿತಿಗಳು ಅಚ್ಚುಗಟ್ಟಾಗಿ.. ಕೆಲಸ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ಬಹಳ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದರು.
ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಸ್ವಾಗತ ಸಮಿತಿಯ ಜಿಲ್ಲಾ ಸಂಚಾಲಕ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆದಂತಹ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು. ಬೆಳಗಾಂನಲ್ಲಿ ಮಾಡಲು ಕೇಳಿದರು. ಇನ್ನೂ 5 ಜಿಲ್ಲೆಯವರು ಕೇಳಿದರು. ಅಂತಹದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಮಾಡಲು ಅವಕಾಶ ಸಿಕ್ಕಿದೆ ನಮ್ಮ ಕಾಲದಲ್ಲಿ ಬೌದ್ಧ ಸಮ್ಮೇಳನಾಚರಣೆ ಮಾಡುವ ಅದೃಷ್ಟ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಆಗಾಗಿ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನ ಯಶಸ್ವಿಗೆ ಶ್ರಮಿಸೋಣ. ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮಧುಸೂದನ್ ಮಾತನಾಡಿ, ಹರವೆ ಹೋಬಳಿ ಗ್ರಾಮಗಳ ಗ್ರಾಮಸ್ಥರು ಧಮ್ಮ ಪಯಣ ಜಾಗೃತಿ ಜಾಥವನ್ನು ಬಹಳ ಅದ್ಧೂರಿಯಿಂದ ಸ್ವಾಗತಿಸಿ ಬರಮಾಡಿಕೊಳ್ಳಬೇಕು ಎಂದರು.
ಮೂಡ್ನಾಕೂಡುಪ್ರಕಾಶ್ ಮಾತನಾಡಿ. ಅಂತಾರಾಷ್ಟ್ರೀಯ ಭೌದ್ಧ ಸಮ್ಮೇಳನವನ್ನು 56 ಕ್ಕೂ ಹೆಚ್ಚು ರಾಷ್ಟ್ರಗಳು ವೀಕ್ಷಣೆ ಮಾಡುವುದರಿಂದ ಜಿಲ್ಲೆಯಲ್ಲಿ ಭೌದ್ಧ ಸಮ್ಮೇಳನ ಯಶಸ್ವಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.
ಸಭೆಯಲ್ಲಿ ಕೆರೆಹಳ್ಳಿ ಮಹದೇವಸ್ವಾಮಿ, ಮುಕ್ಕಡಹಳ್ಳಿ ಪುಟ್ಟ ಅರಸ್, ಸಾಹಿತಿ ಬಸವಣ್ಣ ಮಾತನಾಡಿದರು. ಸಭೆಯಲ್ಲಿ ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ ರಾಜ್ ಕುಮಾರ್, ಅಜಯ್‌ಶಂಭು, ನಿವೃತ್ತ ಶಿಕ್ಷಕ ಲಾಲಿಂಗಸ್ವಾಮಿ,ಹೊಸಹಳ್ಳಿ ಜಯಪ್ರಕಾಶ್, ಗೋಪಿ, ಕೆ.ರೇವಣ್ಣ, ಹೊಸಹಳ್ಳಿ ಶಿವರಾಜ್ , ಹೆಗ್ಗವಾಡಿ ನಂದೀಶ್, ಹೊಸಹಳ್ಳಿ ಅವಿನ್ ಕುಮಾರ್ ಇತರರು ಭಾಗವಹಿಸಿದ್ದರು.
