- ರೋಟರಿ ಸಂಸ್ಥೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
- 230 ಮಂದಿ ತಪಾಸಣೆ, 89 ಮಂದಿಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ
ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ನಡೆಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ,
ಅರವಿಂದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ 230
ಮಂದಿ ತಪಾಸಣೆ ಮಾಡಿಸಿಕೊಂಡರು. 89ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರನ್ನು ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು.
ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಮಾತನಾಡಿ, ದೇಹದ ಮುಖ್ಯ ಅಂಗವಾದ ಕಣ್ಣಿನ ಆರೋಗ್ಯದ ಕಡೆಗೆ ಪ್ರತಿಯೊಬ್ಬರೂ ಗಮನ ನೀಡಬೇಕು ಕಣ್ಣಿನ ಆರೋಗ್ಯದ ಕಡೆ ಗಮನಹರಿಸುವುದು ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಗತ್ಯವಾಗಿದೆ. ಈ ಶಿಬಿರಕ್ಕೆ ಹೊರ ಜಿಲ್ಲೆಗಳಿಂದ ಜನತೆ ಬರುತ್ತಿದ್ದು, ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸುತ್ತಿದ್ದು, ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯುತ್ತಿರುವುದು ತುಂಬಾ ಸಂತಸವಾಗಿದ್ದು,ಮುಂದಿನ ಶಿಬಿರದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಖಜಾಂಚಿ ಆರ್.ಎಂ.ಸ್ವಾಮಿ, ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವಥ್ ನಾರಾಯಣ್, ನಿರ್ಗಮಿತ ಅಧ್ಯಕ್ಷ ಕಾಗಲವಾಡಿ ಚಂದ್ರು, ನೇಮಿರಾಜ್, ರೋಟರಿಯನ್ ಮೇರಿ ಅಲಿಸ್, ಮಾಜಿ ಅಧ್ಯಕ್ಷರಾದ ಎಂ.
ಕಮಲ್ ರಾಜ್ , ವಿ.ಪ್ರಭಕರ್, ಶ್ರೀನಿವಾಸ್ ಎಸ್ ಆರ್ ಎಸ್,ಸಿ.ಎ.ನಾರಾಯಣ್, ಮೋಹನ್, ಎಲ್.ನಾಗರಾಜು, ಡಿ.ನಾಗರಾಜು, ಸದಸ್ಯರಾದ ಶ್ರೀನಿಧಿಕುದರ್, ಮಹಾದೇವಸ್ವಾಮಿ, ಮಾಜಿ ಸದಸ್ಯ ಪ್ರಭುರಾಮು, . ವೈದ್ಯರುಗಳಾದ ಡಾ.ಜಾರ್ಜ್,ಡಾ. ಡೆನ್ನಿ ಪ್ರಸಾದ್, ಡಾ.ಸಿಮ್ಮನ್ ಸುಸಾನ್, ಡಾ.ಕಾಜಲ್ ಪಾಟೀಲ್,ಪಿ ಆರ್ ಓ ವಿಜಯಕಾಂತ್, ಮನೋಜ್, ಸವಿತಾ ಇತರರು ಹಾಜರಿದ್ದರು.
