- ಚಾಮರಾಜನಗರ ಜಿಲ್ಲಾ ಬೌದ್ಧ ಕವಿಗೋಷ್ಠಿ, ಸೊಸ್ಲೆ
- ಗಂಗಾಧರ ವಿರಚಿತ ಬೋಧಿಸಂ ಪುಸ್ತಕ ಬಿಡುಗಡೆ
ಚಾಮರಾಜನಗರ: ದಿವಗಂತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಜಿಲ್ಲೆಯ ಚಹರೆ ಬದಲಾಯಿಸಿದಂತಹ ಒಬ್ಬ ಶ್ರೇಷ್ಠ ರಾಜನೀತಿ ತಜ್ಞ ಎಂದು ಸಾಹಿತಿ ಹನೂರು ಚೆನ್ನಪ್ಪ ಬಣ್ಣಿಸಿದರು..
ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ, ರೋಟರಿ ಸಂಸ್ಥೆ ವತಿಯಿಂದ ಆರ್.ಧ್ರುವನಾರಾಯಣ್ ರವರ 65ನೇ ಹುಟ್ಟುಹಬ್ಬ ಅಂಗವಾಗಿ ನಡೆದ ಚಾಮರಾಜನಗರ ಜಿಲ್ಲಾ ಬೌದ್ಧ ಕವಿಗೋಷ್ಠಿ, ಸೊಸ್ಲೆ
ಗಂಗಾಧರ ವಿರಚಿತ ಬೋಧಿಸಂ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭಾಗದ ಜನತೆಗೆ ಏನು ಅವಶ್ಯಕತೆ ಇದೆ ಎಂಬುವುದನ್ನು ಅಧ್ಯಯನ ಮಾಡಿ ಅದಕ್ಕೆ ತಕ್ಕಂತೆ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ತಮ್ಮ ದಿನವನ್ನು ಜನರೊಟ್ಟಿಗೆ ಕಳೆದಂತಹ ಒಬ್ಬ ಶ್ರೇಷ್ಠ ರಾಜಕೀಯಪಟು. ಅವರ ಹೆಜ್ಜೆ ಗುರುತುಗಳು ಇಡೀ ಜಿಲ್ಲೆಯಲ್ಲಿ ಸಾರ್ಥಕತೆಯನ್ನು ಉಳಿಸಿಕೊಂಡಿವೆ. ಆಗಾಗಿ ಅವರ ಸ್ಮರಣೀಯ ಮಾಡುವಂತಹ ಈ ಒಂದು ಕಾರ್ಯಕ್ರಮ ಅವಿಸ್ಮರಣೀಯ ಎಂದರು.
ಜಿಲ್ಲೆಯಲ್ಲಿ ಬೌದ್ಧ ವಿದ್ಯಾನಿಲಯದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದರು. ಅದನ್ನು ಇಡೀ ರಾಷ್ಟ್ರಕ್ಕೆ ಮಾದರಿಯಾಗಿ ಮಾಡೋಣ. ಅಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಮಾಡುವ ಮೂಲಕ ಜನತೆಗೆ ವಿಶೇಷ ಕೊಡುಗೆ ಕೊಡಬೇಕು ಎಂಬ ತುಡಿತ ಅವರಲ್ಲಿತ್ತು. ಆಗಾಗಿ ಅವರ ಹೆಜ್ಜೆ ಗುರುತು ಅಲ್ಲೂ ನೋಡಬಹುದು. ಜಿಲ್ಲೆಯ ಅಭಿವೃದ್ಧಿಯ ಜೊತೆಜೊತೆಗೆ ಕ್ಷೇತ್ರದ ಜನತೆಗೆ ಏನು ಬೇಕು ಎಂಬ ಹುಡುಕಾಟ ಇದೆಯಲ್ಲಿ ಅದು ನಿಜಕ್ಕೂ ಎಲ್ಲರಿಗೂ ಮಾದರಿ ಆಗಬೇಕು. ಆಗಾಗಿ ಅವರ ಒಂದು ಸ್ಮರಣೆ ಔಚಿತ್ಯಪೂರ್ಣ. ಅವರ ಹುಟ್ಟುಹಬ್ಬವನ್ನು ಭೌದ್ಧ ಕವಿಗೋಷ್ಠಿಯ ಮೂಲಕ ಆಚರಣೆ ಮಾಡುತ್ತಿರುವುದು ಅತ್ಯಂತ ಹೆಮ್ಮೆ ಸಂಗತಿಯಾಗಿದೆ ಎಂದರು.
ಸಾಹಿತಿ ಸೋಸ್ಲೆ ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಉಪನ್ಯಾಸಕ ಮೂಕಳ್ಳಿ ಬಸವಣ್ಣ ಆಶಯ ನುಡಿ ಮಾಡಿದರು.
ತಾ.ಪಂ.ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಚೇತನ ಕಲಾವಾಹಿನಿ ಜಿ.ರಾಜಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್, ಜೆ.ಬಿ.ರಾಜೇಶ್, ಉಪನ್ಯಾಸಕ ಗುರುರಾಜು ಯರಗನಹಳ್ಳಿ, ಕವಿ ಡಾ.ಶಿವರಾಜು ಬೂದಿತಿಟ್ಟು, ಉಪನ್ಯಾಸಕ ಕುಮಾರ್ ಚಿಕ್ಕಹೊಳೆ, ಮಂಗಲ ಶಿವಣ್ಣ, ಎಂ.ಎನ್.ಮಹದೇವು, ಎಂ.ಪುಟ್ಟಸ್ವಾಮಿ, ಡಾ.ಮಹದೇವಕುಮಾರ್, ಡಾ.ಮಲ್ಲಿಕಾರ್ಜುನ ಇತರರು ಭಾಗವಹಿಸಿದ್ದರು.