ಕ್ರೀಡಾ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಮಲೈಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ಕ್ರೀಡಾ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲು ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚಿಸಿದರು.  

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಕ್ರೀಡಾಂಗಣ ನಿರ್ವಹಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕ್ರೀಡಾಪಟುಗಳನ್ನು ಉತ್ತೇಜಿಸುವ ಸಲುವಾಗಿ ವಿವಿಧ ಕ್ರೀಡಾ ಸೌಕರ್ಯಗಳನ್ನ ಒದಗಿಸಲಾಗುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿರುವ ಈಜುಕೊಳ, ವಿವಿದ್ದೋದ್ದೇಶ ಒಳಾಂಗಣ ಕ್ರೀಡಾಂಗಣ, ವಿವಿಧ ಅಂಕಣ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಬಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ತಿಳಿಸಿದರು.  

ಯಳಂದೂರು ಕ್ರೀಡಾಂಗಣಕ್ಕೆ ನಿವೇಶನಕ್ಕಾಗಿ ಪ್ರತ್ಯೇಕ ತಂತ್ರಜ್ಞರ ಸಮಿತಿಯನ್ನ ರಚಿಸಿ ವರದಿಯನ್ನು ನೀಡಬೇಕು. ಚಾಮರಾಜನಗರದ ಕ್ರೀಡಾ ವಸತಿನಿಯಕ್ಕೆ ಕ್ರೀಡಾಪಟುಗಳ ಪ್ರವೇಶಾತಿ ಹೆಚ್ಚಿಸುವ ಸಂಬಂಧ ಕ್ರಮವಹಿಸಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು. 

ಕ್ರೀಡಾ ಮೂಲಭೂತ ಸೌಕರ್ಯಕ್ಕೆ ಮೀಸಲಿರುವ ಸ್ಥಳೀಯ ಸಂಸ್ಥೆಗಳ ಕ್ರೀಡಾ ನಿಧಿಯನ್ನು ಸಮಗ್ರವಾಗಿ ವಿನಿಯೋಗಿಸಲು ಸಭೆಯಲ್ಲಿ ತೀರ್ಮಾಸಲಾಯಿತು.

ರಾಜ್ಯ ಸರ್ಕಾರದಿಂದ ಯುವ ಚೈತನ್ಯ ಯೋಜನೆಯಡಿಯಲ್ಲಿ ಇಲಾಖೆಯಲ್ಲಿ ನೋಂದಣಿಯಾಗಿರುವ ಜಿಲ್ಲೆಯ ಆರು ಯುವಕ ಕ್ರೀಡಾ ಸಂಘಗಳಾದ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಯುವಜನ ಸಂಘ ಕುದೇರು, ಉದಯ ಭೀಮ್ ಯುವಜನ ಸಂಘ, ಹುರುಳೇನಂಜನಪುರ, ಚಾಮರಾಜನಗರ ತಾಲ್ಲೂಕು, ಡಾ. ಬಿ.ಆರ್. ಅಂಬೇಡ್ಕರ್ ಯುವಜನ ಸಂಘ, ಪಾಳ್ಯ, ಕೊಳ್ಳೇಗಾಲ ತಾಲ್ಲೂಕು, ವಿಜ್ಞಾನಿ ಡಾ.ಆರ್. ಅಂಬೇಡ್ಕರ್ ಯುವಜನ ಸಂಘ, ಗಣಿಗನೂರು, ಯಳಂದೂರು ತಾಲ್ಲೂಕು, ಜೈ ಭಗೀರಥ ಯುವಕರ ಸಂಘ, ಅಣ್ಣೂರುಕೇರಿ, ಗುಂಡ್ಲುಪೇಟೆ ತಾಲ್ಲೂಕು, ಭೋವಿಸತ್ವ ಯುವಜನ ಕಲಾ ಸಂಘ, ಮಂಗಲ ಗ್ರಾಮ, ಚಾಮರಾಜನಗರ ಆಯ್ಕೆಯಾಗಿದೆ.

ಈ ಪೈಕಿ ಉದಯ ಭೀಮ್ ಯುವಜನ ಸಂಘ, ಹುರುಳೀನಂಜನಪುರ, ಚಾಮರಾಜನಗರ ತಾಲ್ಲೂಕು ಇವರಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಕ್ರೀಡಾ ಪರಿಕರಗಳನ್ನು ವಿತರಿಸಿದರು. 

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ಡಿವೈಎಸ್‍ಪಿ ಸೋಮಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟೀಲ್, ಚಾಮರಾಜನಗರ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಅಧಿಕಾರಿ ಮಹೇಶ್, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *